ಐಪಿಎಲ್ 2023ರ (IPL 2023) ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ಎಂ. ಚಿನ್ನಸ್ವಾಮಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಬೆಂಗಳೂರಿನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ (RCB vs RR) ನಡುವೆ ಪಂದ್ಯ ಆರಂಭವಾಗಿದೆ. ಈಗಾಗಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ್ ಗೆಲುವಿನ ಓಟವನ್ನು ಮುಂದುವರೆಸಲು ಸಿದ್ಧವಾಗಿದ್ದರೆ, ಇತ್ತ ಆರ್‌ಸಿಬಿ ಕಳೆದ ಪಂದ್ಯದ ಗೆಲುವಿನ ಲಯವನ್ನು ಮುಂದುವರೆಸಲು ರೆಡಿಯಾಗಿದ್ದಾರೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ನಾಯಕ, ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾನ್ಸನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
RCB vs RR ಹೆಡ್ ಟು ಹೆಡ್:
ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು 28 ಬಾರಿ ಮುಖಾಮುಖಿಯಾಗಿವೆ, ಈ 28 ಪಂದ್ಯಗಳಲ್ಲಿ RCB 13 ಪಂದ್ಯಗಳನ್ನು ಗೆದ್ದಿದೆ, ಆದರೆ ರಾಜಸ್ಥಾನ್ ರಾಯಲ್ಸ್ 12 ಗೆಲುವಿನೊಂದಿಗೆ ಹತ್ತಿರದಲ್ಲಿದೆ. 3 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ. ಸಂಜು ಸ್ಯಾಮ್ಸನ್ ಪಡೆ ಇಂದು ಆ ದಾಖಲೆಯನ್ನು ಸಮಗೊಳಿಸಲು ಯೋಜನೆ ಸಿದ್ಧಪಡಿಸುತ್ತಿದೆ.
1450 ದಿನಗಳ ಬಳಿಕ ನಾಯಕನಾಗಿ ವಿರಾಟ್ ಕೊಹ್ಲಿ:
ಇಂದು ಫಾಫ್ ಬದಲು ಮತ್ತೆ ವಿರಾಟ್ ಕೊಹ್ಲಿ ನಾಯಕನಾಗಿ ಕಣಕ್ಕಿಳಿದಿದ್ದಾರೆ. ಅವರು ಚಿನ್ನಸ್ವಾಮಿಯಲ್ಲಿ ಬರೋಬ್ಬರಿ 1450 ದಿನಗಳ ಬಳಿಕ ಬಳಿಕ ಮತ್ತೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ಕಾಣಿಸಿಕೊಂಡರು. ಅವರು 556 ದಿನಗಳ ಅಂತರದ ನಂತರ ತಮ್ಮ RCB ತಂಡದ ನಾಯಕರಾಗಿ ಮೈದಾನಕ್ಕೆ ಕಾಲಿಟ್ಟರು. ಫಾಫ್ ಡು ಪ್ಲೆಸಿಸ್ ಅವರು ಪಕ್ಕೆಲುಬಿನ ಗಾಯದಿಂದ ಬಳಲುತ್ತಿದ್ದ ಕಾರಣ ಬ್ಯಾಟಿಂಗ್‌ಗೆ ಬಂದರು ಆದರೆ ಫೀಲ್ಡಿಂಗ್ ಮಾಡಲು ಬರಲಿಲ್ಲ. ಅದೇ ರೀತಿ ಇಂದಿನ ಪಂದ್ಯದಲ್ಲಿಯೂ ಕೊಹ್ಲಿ ನಾಯಕನಾಗಿ ಮುಂದುವರೆದಿದ್ದಾರೆ.
ಆರ್‌ಸಿಬಿಗೆ ಕೊಹ್ಲಿ-ಫಾಫ್ ಬಲ:
ವಿರಾಟ್ ಕೊಹ್ಲಿ ಮತ್ತು ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿ ಆರ್‌ಸಿಬಿಯ ಬ್ಯಾಟಿಂಗ್‌ನ ಪ್ರಮುಖ ಕೊಂಡಿ. ಈ ಋತುವಿನಲ್ಲಿ ಈ ಇಬ್ಬರೂ ಆಟಗಾರರು ಉತ್ತಮ ಸ್ಥಿತಿಯಲ್ಲಿದ್ದಾರೆ. ವಿರಾಟ್ 4 ಅರ್ಧಶತಕ ಗಳಿಸಿದ್ದಾರೆ. ಅದೇ ಸಮಯದಲ್ಲಿ ಫಾಫ್ ಕೂಡ 343 ರನ್ ಗಳಿಸಿದ್ದಾರೆ. ಹೀಗಿರುವಾಗ ಇವರಿಬ್ಬರನ್ನೂ ಬೇಗ ಔಟ್ ಮಾಡುವತ್ತ ರಾಜಸ್ಥಾನದ ಕಣ್ಣು ಇರುತ್ತದೆ. ಆದರೆ ಈ ಇಬ್ಬರು ಆರಂಭಿಕರು ಆರ್‌ಸಿಬಿ ತಂಡದ ಬಲವಾಗಿದ್ದಾರೆ.
ಇದನ್ನೂ ಓದಿ: IPL 2023: ಐಪಿಎಲ್ ಇತಿಹಾಸದಲ್ಲಿ ಈ ದಿನ ಆ 2 ಘಟನೆ ನಡೆಯಿತು; ಒಂದು ಭಯ ಹುಟ್ಸಿದ್ದು, ಇನ್ನೊಂದು ಭಯ ಸಾಯ್ಸಿದ್ದು!
ಯುಜುವೇಂದ್ರ ಚಾಹಲ್ ಮೇಲೆ ಕಣ್ಣು:
ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಚಹಾಲ್ ಅನ್ನು ಉಳಿಸಿಕೊಳ್ಳುವ ಬದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಶ್ರೀಲಂಕಾದ ವನಿಂದು ಹಸರಂಗವನ್ನು ಖರೀದಿಸಿತು. 10.75 ಕೋಟಿ ಖರ್ಚು ಮಾಡಿತ್ತು. ಅದೇ ಸಮಯದಲ್ಲಿ ಚಾಹಲ್ ಅವರನ್ನು ರಾಜಸ್ಥಾನ್ ರಾಯಲ್ಸ್ 6.5 ಕೋಟಿಗೆ ಖರೀದಿಸಿತು. ಚಾಹಲ್ ರಾಜಸ್ಥಾನಕ್ಕೆ ಹೋದ ತಕ್ಷಣ ಬೌಲಿಂಗ್ ಸುಧಾರಿಸಿತು ಮತ್ತು ಚಹಾಲ್ ಪರ್ಪಲ್ ಕ್ಯಾಪ್ ಗೆದ್ದರು. ಈ ಋತುವಿನಲ್ಲಿ ಸಹ, ಚಾಹಲ್ ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಉಳಿದಿದ್ದಾರೆ. 6 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.
ಐಪಿಎಲ್ 2023 ಅಂಕಪಟ್ಟಿ:
ಆರ್‌ಸಿಬಿ ತನ್ನ ಕೊನೆಯ ಪಂದ್ಯವನ್ನು ಗೆದ್ದಿದೆ. ಅದೇ ಸಮಯದಲ್ಲಿ, ರಾಜಸ್ಥಾನ್ ರಾಯಲ್ಸ್ ತನ್ನ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಸಿದ್ಧವಾಗಿದೆ. ರಾಜಸ್ಥಾನ್ ರಾಯಲ್ಸ್ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಜಯ ಸಾಧಿಸಿದ್ದು, ತಂಡ 8 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇದೇ ವೇಳೆ ಆರ್‌ಸಿಬಿ 6 ಪಂದ್ಯಗಳಲ್ಲಿ 3ರಲ್ಲಿ ಗೆಲುವು ಸಾಧಿಸಿದ್ದು, ಬೆಂಗಳೂರು ತಂಡ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಆರ್‌ಸಿಬಿ - ರಾಜಸ್ಥಾನ್ ಪ್ಲೇಯಿಂಗ್ 11:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ವಿರಾಟ್ ಕೊಹ್ಲಿ (C), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ಸುಯಶ್ ಪ್ರಭುದೇಸಾಯಿ, ಡೇವಿಡ್ ವಿಲ್ಲಿ, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ವಿಜಯ್ ಕುಮಾರ್ ವೈಶಾಕ್.
ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (w/c), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ಧ್ರುವ್ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ