ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2023) 16ನೇ ಋತುವಿನ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (PBKS vs RCB) ಮುಖಾಮುಖಿ ಆಗಿದ್ದ್ವು. ಐಪಿಎಲ್ 2023ರ ಈ ಪಂದ್ಯ ಮೊಹಾಲಿಯಲ್ಲಿ ನಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್ನಲ್ಲಿ 4 ವಿಕೆಟ್ ನಷ್ಟ್ಕಕೆ 174 ರನ್ ಗಳಿಸುವ ಮೂಲಕ ಪಂಜಾಬ್ ತಂಡಕ್ಕೆ 175 ರನ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಪಂಜಾಬ್ ತಂಡವು ನಿಗದಿತ 18.2 ಓವರ್ನಲ್ಲಿ 10 ವಿಕೆಟ್ ನಷ್ಟಕ್ಕೆ 150 ರನ್ ಗಳಿಸುವ ಮೂಲಕ ಆರ್ಸಿಬಿ ವಿರುದ್ಧ 24 ರನ್ಗಳಿಂದ ಸೋಲನ್ನಪ್ಪಿತು.
ಬ್ಯಾಟಿಂಗ್ನಲ್ಲಿ ಎಡವಿದ ಪಂಜಾಬ್:
ಇನ್ನು, ಆರ್ಸಿಬಿ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ತಂಡವು ನಿಗದಿತ 18.2 ಓವರ್ನಲ್ಲಿ 10 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು. ಪಂಜಾಬ್ ಕಿಂಗ್ಸ್ ಪರ, ಅಥರ್ವ ಟೈಡೆ 4 ರನ್, ಮ್ಯಾಥ್ಯೂ ಶಾರ್ಟ್ 8 ರನ್, ಪ್ರಭಿಶರ್ಮನ್ ಸಿಂಗ್ 46 ರನ್, ಹರ್‌ಪ್ರೀತ್ ಸಿಂಗ್ ಭಾಟಿಯಾ 13 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 2 ರನ್, ಸ್ಯಾಮ್ ಕುರಾನ್ 10 ರನ್, ಜಿತೇಶ್ ಶರ್ಮಾ 41 ರನ್, ಶಾರುಖ್ ಖಾನ್ 7 ರನ್, ಹರ್‌ಪ್ರೀತ್ ಬ್ರಾರ್ 13 ರನ್, ನಾಥನ್ ಎಲ್ಲಿಸ್ 1 ರನ್ ಮತ್ತು ಅರ್ಶ್‌ದೀಪ್ ಸಿಂಗ್ 0 ರನ್ ಗಳಿಸಿದರು.
𝘽𝙖𝙘𝙠 𝙩𝙤 𝙬𝙞𝙣𝙣𝙞𝙣𝙜 𝙬𝙖𝙮𝙨 😎@RCBTweets clinch a 24-run victory over #PBKS in Mohali 🙌🙌
Scorecard ▶️ https://t.co/CQekZNsh7b#TATAIPL | #PBKSvRCB pic.twitter.com/RGFwXXz5eC
— IndianPremierLeague (@IPL) April 20, 2023
ಬೆಂಗಳೂರು ಪರ ಇಂದು ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೇಸಿಸ್ ಶತಕದ ಜೊತೆಯಾಟವಾಡಿದರು. ಇವರಿಬ್ಬರೂ 137 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿ 47 ಎಸೆತದಲ್ಲಿ 1 ಸಿಕ್ಸ್ ಮತ್ತು 5 ಫೋರ್ ಮೂಲಕ 59 ರನ್ ಗಳಿಸಿದರು. ಅದರಂತೆ ಫಾಫ್ ಡುಪ್ಲೇಸಿಸ್ ಸಹ 56 ಎಸೆತದಲ್ಲಿ 5 ಸಿಕ್ಸ್ ಮತ್ತು 5 ಫೋರ್ ಮೂಲಕ 84 ರನ್ ಗಳಿಸಿದರು.
ಇದನ್ನೂ ಓದಿ: Virat Kohli: ಐಪಿಎಲ್‌ನಲ್ಲಿ ದಾಖಲೆಗಳ ಸುರಿಮಳೆಗೈದ ಕಿಂಗ್ ಕೊಹ್ಲಿ, ರೆಕಾರ್ಡ್ಸ್ ಎಲ್ಲಾ ಪೀಸ್ ಪೀಸ್ ಎಂದ ಫ್ಯಾನ್ಸ್!
ಉಳಿದಂತೆ ಗ್ಲೇನ್ ಮ್ಯಾಕ್ಸ್ವೆಲ್ ಶೂನ್ಯ, ದಿನೇಶ್ ಕಾರ್ತಿಕ್ 7 ರನ್, ಮಹಿಪಾಲ್ ಲೋಮ್ರೋರ್ 7 ರನ್ ಮತ್ತು ಶಹ್ಬಾಜ್ ಅಹ್ಮದ್ 5 ರನ್ ಗಳಿಸಿದರು. ಇದೇ ವೇಳೆ ವಿರಾಟ್ ಕೊಹ್ಲಿ ತಮ್ಮ IPL ವೃತ್ತಿಜೀವನದ 48ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಜೊತೆಗೆ RCB ನಾಯಕ ಫಾಫ್ ಡುಪ್ಲೆಸಿ ತಮ್ಮ IPL ವೃತ್ತಿಜೀವನದ 29ನೇ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇವರಿಬ್ಬರ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖರಾದರು.
ದಾಖಲೆ ನಿರ್ಮಿಸಿದ ಕೊಹ್ಲಿ:
ಐಪಿಎಲ್‌ನಲ್ಲಿ ಕೊಹ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಕೊಹ್ಲಿ ಅಪರೂಪದ ದಾಖಲೆಯೊಂದನ್ನು ತಮ್ಮ ಹೆಸರಿನಲ್ಲಿ ನಿರ್ಮಿಸಿದ್ದಾರೆ. ಐಪಿಎಲ್‌ನಲ್ಲಿ 600 ಬೌಂಡರಿಗಳನ್ನು ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯಕ್ಕೂ ಮುನ್ನ 598 ಬೌಂಡರಿಗಳನ್ನು ಸಿಡಿಸಿದ್ದ ಕೊಹ್ಲಿ ಖಾತೆಯಲ್ಲಿ ಪಂಜಾಬ್ ಪಂದ್ಯದಲ್ಲಿ ಐದು ಬೌಂಡರಿಗಳನ್ನು ಸಿಡಿಸಿದ್ದಾರೆ. ಈ ಮೂಲಕ ಒಟ್ಟು 603 ಫೋರ್ ಸಿಡಿಸಿದಂತಾಯಿತು. ಇದರೊಂದಿಗೆ ಕೊಹ್ಲಿ ಮತ್ತೊಂದು ಅಪರೂಪದ ದಾಖಲೆ ನಿರ್ಮಿಸಿದ್ದು, ಐಪಿಎಲ್ ವೃತ್ತಿಜೀವನದಲ್ಲಿ 100 ಬಾರಿ 30 ಪ್ಲಸ್ ರನ್ ಗಳಿಸಿದ ಆಟಗಾರ ಎಂಬ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ