ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ತಂಡಗಳು ಸೆಣಸಾಡಲು ಸಿದ್ಧವಾಗಿದೆ. ಪ್ರಸಕ್ತ ಋತುವಿನಲ್ಲಿ ಉಭಯ ತಂಡಗಳ ಮೊದಲ ಪಂದ್ಯ ಇದಾಗಿದೆ. ಆರ್‌ಸಿಬಿ ನಾಯಕತ್ವ ಫಾಫ್ ಡುಪ್ಲೆಸಿ ಕೈಯಲ್ಲಿದ್ದು, ರೋಹಿತ್ ಶರ್ಮಾ ಮುಂಬೈ ತಂಡದ ನಾಯಕತ್ವವನ್ನು ನಿಭಾಯಿಸುತ್ತಿದ್ದಾರೆ. ಈಗಾಗಲೇ ಟಾಸ್ ಆಗಿದ್ದು, ಆರ್‌ಸಿಬಿ ತಂಡ ಟಾಸ್ ಗೆದ್ದಿದ್ದು, ಮೊದಲು ಬೌಲಿಂಗ್ ಆಯ್ಕೆ ಮಾಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಲಿದೆ.
ರೋಹಿತ್ ನಾಯಕತ್ವದಲ್ಲಿ, ಮುಂಬೈ ಐಪಿಎಲ್ ಪ್ರಶಸ್ತಿಯನ್ನು ದಾಖಲೆಯ 5 ಬಾರಿ ಗೆದ್ದಿದೆ ಆದರೆ RCB ಇನ್ನೂ ಮೊದಲ ಪ್ರಶಸ್ತಿಯನ್ನು ಗೆಲ್ಲಬೇಕಾಗಿದೆ. ಕಳೆದ ಋತುವಿನಲ್ಲಿ ಅವರು ತಮ್ಮ ನಾಯಕನನ್ನು ಕೂಡ ಬದಲಾಯಿಸಿದರು. ಈ ಪಂದ್ಯವನ್ನು ನೀವು ಜೀಯೋ ಸಿನಿಮಾ ಮತ್ತು ಸ್ಟಾರ್ ಸ್ಪೋರ್ಟ್ಸ್ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.
ಮೂವರು ಆಟಗಾರರು ತಂಡದಿಂದ ಹೊರಕ್ಕೆ:
ರಜತ್ ಪಾಟಿದಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಇಂದಿನ ಪಂದ್ಯದಿಂದ ದೂರ ಇರಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಐಪಿಎಲ್‌ನ ಕೆಲವು ಆರಂಭಿಕ ಪಂದ್ಯಗಳಿಂದ ಇಬ್ಬರೂ ಹೊರಗುಳಿದಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗಾಗಾಗಿ ಆರ್‌ಸಿಬಿ ಕೂಡ ಇಂದಿನ ಪಂದ್ಯದಿಂದ ದೂರ ಇರಲಿದ್ದಾರೆ. ಆರ್‌ಸಿಬಿ ತನ್ನ ತವರು ನೆಲದಲ್ಲಿ 82 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 42 ಪಂದ್ಯಗಳನ್ನು ಗೆದ್ದು 40 ರಲ್ಲಿ ಸೋತಿದೆ. ಇನ್ನು ಮುಂಬೈ ಬಗ್ಗೆ ಹೇಳುವುದಾದರೆ ಚಿನ್ನಸ್ವಾಮಿಯಲ್ಲಿ 10 ಪಂದ್ಯಗಳನ್ನಾಡಿದ್ದು, 7ರಲ್ಲಿ ಗೆದ್ದಿದ್ದಾರೆ. ಎಂದಿನಂತೆ ಇಲ್ಲಿಯೂ ವಿಕೆಟ್ ಸಮತಟ್ಟಾಗಿದ್ದು, ಸಾಕಷ್ಟು ರನ್ ಗಳ ಮಳೆಯಾಗುವ ನಿರೀಕ್ಷೆಯಲ್ಲಿದೆ.
ಇದನ್ನೂ ಓದಿ: SRH vs RR Live Score, IPL 2023: ಟಾಸ್ ಗೆದ್ದ ಬೆಂಗಳೂರು, ಇಲ್ಲಿದೆ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ 11
ಪಿಚ್ ವರದಿ:
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಟ್ರ್ಯಾಕ್ ಉತ್ತಮವಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುವುದರಿಂದ ಬ್ಯಾಟರ್‌ಗಳು ಈ ಮೇಲ್ಮೈಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಬಹುದಾಗಿದೆ. ಹೀಗಾಗಿ ಇಂದು ಹೆಚ್ಚಿನ ಸ್ಕೋರ್ ಪಂದ್ಯವನ್ನು ನಿರೀಕ್ಷಿಸಲಾಗಿದೆ.
Captain Faf has won the toss, and we'll be fielding first! 🏐
🗣️ "We are going to bowl first. There's been a bit of weather around. There has been a bit of dew in the practice games too."#PlayBold #ನಮ್ಮRCB #IPL2023 #RCBvMI @qatarairways pic.twitter.com/hIcSm1WHAh
— Royal Challengers Bangalore (@RCBTweets) April 2, 2023
ಬೆಂಗಳೂರು- ಮುಂಬೈ ಪ್ಲೇಯಿಂಗ್ 11:
ಆರ್‌ಸಿಬಿ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ (c), ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (wk), ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶದೀಪ್, ರಿಕ್ ಟೋಪ್ಲಿ, ಮೊಹಮ್ಮದ್ ಸಿರಾಜ್.
ಮುಂಬೈ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್-ಕೀಪರ್), ಸೂರ್ಯಕುಮಾರ್ ಯಾದವ್, ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ರಿತಿಕ್ ಶೋಕೀನ್, ಪಿಯೂಷ್ ಚಾವ್ಲಾ ಜೋಫ್ರಾ ಆರ್ಚರ್ , ಅರ್ಷದ್ ಖಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ