ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (RCB vs MI) ತಂಡಗಳು ಸೆಣಸಾಡುತ್ತಿದೆ. ಪ್ರಸಕ್ತ ಋತುವಿನಲ್ಲಿ ಉಭಯ ತಂಡಗಳ ಮೊದಲ ಪಂದ್ಯ ಇದಾಗಿದೆ. ಟಾಸ್ ಗೆದ್ದ RCB ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡಕ್ಕೆ ಆರ್‌ಸಿಬಿ ಬೌಲರ್ಗಳು ಆರಂಭದಿಂದಲೇ ಶಾಕ್ ಮೇಲೆ ಶಾಕ್ ನೀಡಿದರು. ಅಂತಿಮವಾಗಿ ಮುಂಬೈ ತಂಡ ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸುವ ಮೂಲಕ ಬೆಂಗಳೂರು ತಂಡಕ್ಕೆ 172 ರನ್ಗಳ ಟಾರ್ಗೆಟ್ ನೀಡಿದೆ.
ಆರ್‌ಸಿಬಿ ಬೆಂಕಿ ಬೌಲಿಂಗ್:
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್‌ಸಿಬಿ ತಂಡ, ಮುಂಬೈ ವಿರುದ್ಧ ಭರ್ಜರಿ ಅಟ್ಯಾಕ್ ಮಾಡಿತು. ಬೆಂಗಳೂರು ತಂಡದ ಬೌಲಿಂಗ್ ದಾಳಿಗೆ ಮುಂಬೈ ಬ್ಯಾಟ್ಸ್ಮನ್ ಗಳು ರನ್ ಗಳಿಸಲು ಸಾಕಷ್ಟು ಕಷ್ಟಪಟ್ಟರು. ಆರ್‌ಸಿಬಿ ಪರ ಕರಣ್ ಶರ್ಮಾ 2 ವಿಕೆಟ್ ಪಡೆದರು. ಉಳಿದಂತೆ ಮೊಹಮ್ಮದ್ ಸಿರಾಜ್, ರೆಸ್ಸೆ ಟೋಪ್ಲಿ, ಆಕಾಶ್ ದೀಪ್ , ಹರ್ಷಲ್ ಪಟೇಲ್, ಮಿಚೆಲ್ ಬ್ರಾಸ್ವೇಲ್ ತಲಾ 1 ವಿಕೆಟ್ ಪಡೆದು ಮಿಂಚಿದರು.
Innings Break!@mipaltan post a competitive total of 171/7 on board courtesy of @TilakV9's incredible unbeaten fifty 👌🏻👌🏻
Will it be enough for @RCBTweets ❓
Join us for the chase shortly!
Scorecard ▶️ https://t.co/ws391sGhme#TATAIPL | #RCBvMI pic.twitter.com/a4O5C0EmQH
— IndianPremierLeague (@IPL) April 2, 2023
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ರೋಹಿತ್ ಶರ್ಮಾ 1 ರನ್, ಇಶಾನ್ ಕಿಶನ್ 10 ರನ್, ಸೂರ್ಯಕುಮಾರ್ ಯಾದವ್ 15 ರನ್, ಕ್ಯಾಮೆರಾನ್ ಗ್ರೀನ್ 5 ರನ್, ಟಿಮ್ ಡೇವಿಡ್ 4 ರನ್, ನೆಹಾಲ್ ವಧೇರಾ 21 ರನ್, ರಿತಿಕ್ ಶೋಕೀನ್ 5 ರನ್, ತಿಲಕ್ ವರ್ಮಾ 84 ರನ್, ಅರ್ಷದ್ ಖಾನ್ 15 ರನ್ ಗಳಿಸಿದರು.
ಇದನ್ನೂ ಓದಿ: SRH vs RR Live Score, IPL 2023: ಟಾಸ್ ಗೆದ್ದ ಬೆಂಗಳೂರು, ಇಲ್ಲಿದೆ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ 11
ಮೂವರು ತಂಡದಿಂದ ಹೊರಕ್ಕೆ:
ರಜತ್ ಪಾಟಿದಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಇಂದಿನ ಪಂದ್ಯದಿಂದ ದೂರ ಇರಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಐಪಿಎಲ್‌ನ ಕೆಲವು ಆರಂಭಿಕ ಪಂದ್ಯಗಳಿಂದ ಇಬ್ಬರೂ ಹೊರಗುಳಿದಿದ್ದಾರೆ. ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗಾಗಾಗಿ ಆರ್‌ಸಿಬಿ ಕೂಡ ಇಂದಿನ ಪಂದ್ಯದಿಂದ ದೂರ ಇರಲಿದ್ದಾರೆ. ಇನ್ನು, ಮುಂಬೈ ಇಂಡಿಯನ್ಸ್ ಕಳೆದ 3 ಪಂದ್ಯಗಳಲ್ಲಿ RCB ಅನ್ನು ಸೋಲಿಸಿದೆ. 2021 ರಲ್ಲಿ, RCB ಎರಡೂ ಪಂದ್ಯಗಳನ್ನು ಗೆದ್ದರೆ, 2022 ರಲ್ಲಿ ಮತ್ತೆ ಎರಡೂ ತಂಡಗಳು ಪರಸ್ಪರ ಮುಖಾಮುಖಿಯಾದಾಗ ಅಲ್ಲಿ RCB ಗೆದ್ದಿತು.
ಬೆಂಗಳೂರು- ಮುಂಬೈ ಪ್ಲೇಯಿಂಗ್ 11:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11:ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ (c), ಗ್ಲೆನ್ ಮ್ಯಾಕ್ಸ್‌ವೆಲ್, ಮೈಕೆಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (wk), ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶದೀಪ್, ರಿಕ್ ಟೋಪ್ಲಿ, ಮೊಹಮ್ಮದ್ ಸಿರಾಜ್.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್-ಕೀಪರ್), ಸೂರ್ಯಕುಮಾರ್ ಯಾದವ್, ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ರಿತಿಕ್ ಶೋಕೀನ್, ಪಿಯೂಷ್ ಚಾವ್ಲಾ ಜೋಫ್ರಾ ಆರ್ಚರ್ , ಅರ್ಷದ್ ಖಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ