ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2023ರ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (MI vs RCB) ವಿರುದ್ಧ ಪಂದ್ಯ ಆರಂಭವಾಗಿದೆ. ಈ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯುತ್ತಿದೆ. ಇಂದಿನ ಪಂದ್ಯ ಪ್ಲೇಆಫ್ ಕಾರಣದಿಂದ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈಗಾಗಲೇ ಮುಂಬೈ ಮತ್ತು ಆರ್‌ಸಿಬಿ ಎರಡೂ ತಂಡಗಳು ಸಹ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 5ರಲ್ಲಿ ಸೋತಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದವರು ಪ್ಲೇಆಫ್ಗೆ ಸನಿಹವಾಗುತ್ತಾರೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮುಂಬೈ ಹಾಗೂ ಬೆಂಗಳೂರು ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಸೋಲು ಕಂಡಿವೆ. ಈ ಋತುವಿನ ಮೊದಲ ಪಂದ್ಯದಲ್ಲಿ ಮುಂಬೈ ತಂಡದ ಮೇಲೆ ಬೆಂಗಳೂರು ಮೇಲುಗೈ ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದ ಮೂಲಕ ಮುಂಬೈ ಸೇಡು ತೀರಿಸಿಕೊಳ್ಳಲು ಸಿದ್ಧವಾಗಿದೆ.
ಉಭಯ ತಂಡಗಳ ಬದಲಾವಣೆಗಳು:
ಐಪಿಎಲ್ 2023ರ ಉಳಿದ ಪಂದ್ಯಗಳಿಂದ ಜೋಫ್ರಾ ಆರ್ಚರ್ ಹೊರಗುಳಿಯುವುದರೊಂದಿಗೆ ಕ್ರಿಸ್ ಜೋರ್ಡಾನ್ ಇಂದು ಮುಂಬೈ ವಿರುದ್ಧದ ಪಂದ್ಯದ ಮೂಲಕ ಐಪಿಎಲ್ಗೆ ಎಂಟ್ರಿಕೊಡಲಿದ್ದಾರೆ. ಅದರಂತೆ ಕರಣ್ ಶರ್ಮಾ ಬದಲಿಗೆ ವಿಜಯ್‌ಕುಮಾರ್ ವೈಶಾಕ್ ಅವರಿಗೆ ಆರ್‌ಸಿಬಿ ಅವಕಾಶ ನೀಡಿದೆ.
MI vs RCB ಪಿಚ್ ವರದಿ:
ಮುಂಬೈನ ವಾಂಖೆಡೆ ಸ್ಟೇಡಿಯಂ ಕಳೆದ ಮೂರು ವರ್ಷಗಳಲ್ಲಿ 46 T20 ಪಂದ್ಯಗಳಿಗೆ ವೇದಿಕೆಯಾಗಿದೆ, ಅಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 170 ಕ್ಕಿಂತ ಹೆಚ್ಚು ರನ್ ಆಗಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡವು ಇಲ್ಲಿ ಕೇವಲ 33% ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಇಂದು ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ಕೆ ಮಾಡಬಹುದು. ಇನ್ನು, ಆರ್‌ಸಿಬಿ ಮತ್ತು ಮುಂಬೈ ಪಂದ್ಯದ ವೇಳೆ ಹವಾಮಾನ ಮುನ್ಸೂಚನೆಯು ಉತ್ತಮವಾಗಿದ್ದು, ತಾಪಮಾನವು ಸುಮಾರು 29-33 ಡಿಗ್ರಿ ಸೆಲ್ಸಿಯಸ್ ಆಗಿರಬಹುದು, ಆದರೂ ಸ್ವಲ್ಪ ಮೋಡ ಕವಿದಿರಬಹುದು. ಆದರೆ ಮಳೆ ಅಡ್ಡಿಯಾಗುವ ಸಾಧ್ಯತೆ ಇಲ್ಲ.
ಇದನ್ನೂ ಓದಿ: IPL 2023: ಆರ್‌ಸಿಬಿ ಗೆಲುವಿಗಾಗಿ ಮಂಜುನಾಥನ ಮೊರೆ! ಧರ್ಮಸ್ಥಳಕ್ಕೆ 1 ಲಕ್ಷ ಮೌಲ್ಯದ ದಿನಸಿ ಸಾಮಗ್ರಿ ದೇಣಿಗೆ ಕೊಟ್ಟ ಅಭಿಮಾನಿ!
ಹೆಡ್ ಟು ಹೆಡ್:
ಆರ್‌ಸಿಬಿ ಮತ್ತು ಮುಂಬೈ ತಂಡಗಳು ಐಪಿಎಲ್‌ನಲ್ಲಿ 33 ಪಂದ್ಯಗಳನ್ನು ಆಡಿದ್ದು, ಮುಂಬೈ 19 ಮತ್ತು ಆರ್‌ಸಿಬಿ 13 ಪಂದ್ಯಗಳನ್ನು ಗೆದ್ದಿದೆ. ಉಭಯ ತಂಡಗಳ ನಡುವೆ ಕಳೆದ 6 ಪಂದ್ಯಗಳಲ್ಲಿ ಆರ್‌ಸಿಬಿ 5 ಪಂದ್ಯಗಳನ್ನು ಗೆದ್ದಿದೆ. ಮುಂಬೈ ಐಪಿಎಲ್ 2020ರಲ್ಲಿ ಆರ್‌ಸಿಬಿ ವಿರುದ್ಧ ಕೊನೆಯ ಬಾರಿ ಗೆದ್ದಿತ್ತು.
ಉಭಯ ತಂಡಗಳ ಪ್ಲೇಆಫ್ ಲೆಕ್ಕಾಚಾರ:
ಇಂದಿನ ಈ ಪಂದ್ಯವು ಉಭಯ ತಂಡಗಳಿಗೆ ಗೆಲುವು ಅನಿವಾರ್ಯವಾಗಿದೆ. ಆರ್‌ಸಿಬಿ ತಂಡ ಈವರೆಗೆ ಐಪಿಎಲ್ 2023ರಲ್ಲಿ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 5ರಲ್ಲಿ ಸೋತಿದೆ. ಹೀಗಾಗಿ -0.209 ನೆಟ್ ರನ್ರೇಟ್ ಮೂಲಕ ಆರ್‌ಸಿಬಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ತಂಡವೂ ಸಹ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 5ರಲ್ಲಿ ಸೋತಿದೆ.
ಆದರೆ ಮುಂಬೈ ತಂಡವು -0.454 ರನ್ರೇಟ್ ಮೂಲಕ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದವರಿಗೆ ಪ್ಲೇಆಫ್ ಆಸೆ ಜೀವಂತವಾಗಿರಲಿದೆ. ಪಂದ್ಯ ಗೆದ್ದ ತಂಡವು ನೇರವಾಗಿ 12 ಅಂಕಗಳಿಂದ ಐಪಿಎಲ್ 2023 ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಲಿದೆ. ಇದರಿಂದಾಗಿ ಗೆದ್ದ ತಂಡಕ್ಕೆ ಪ್ಲೇಆಫ್ ಹಾದಿ ಇನ್ನಷ್ಟು ಸುಗಮವಾಗಲಿದೆ. ಆದರೆ ಸೋತ ತಂಡ ಪ್ಲೇಆಫ್ ರೇಸ್ನಲ್ಲಿ ಹಿಂದಕ್ಕೆ ಉಳಿಯಲಿದೆ.
ಮುಂಬೈ - ಆರ್‌ಸಿಬಿ ಪ್ಲೇಯಿಂಗ್ 11:
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಕುಮಾರ್ ಕಾರ್ತಿಕೇಯ, ಜೇಸನ್ ಬೆಹ್ರೆನ್‌ಡಾರ್ಫ್.
ಆರ್‌ಸಿಬಿ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ಸಿ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ಡಬ್ಲ್ಯೂ), ವನಿಂದು ಹಸರಂಗಾ, ಹರ್ಷಲ್ ಪಟೇಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ