ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) 2023ರ 54ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ (MI vs RCB) ತಂಡಗಳು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ಮುಖಾಮುಖಿ ಆದವು. ಈ ಪಂದ್ಯದಲ್ಲಿ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ನಿಗದಿತ 20 ಓವರ್ಗೆ 6 ವಿಕೆಟ್ ನಷ್ಟಕ್ಕೆ 199 ರನ್ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ 200 ರನ್ ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು 16.3 ಓವರ್ಗೆ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಮುಂಬೈ ತಂಡ ಪ್ಲೇಆಫ್ ಹಾದಿ ಇನ್ನಷ್ಟು ಸುಗಮವಾಯಿತು. ಆದರೆ ಆರ್ಸಿಬಿ ಪ್ಲೇಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ.
ಅಬ್ಬರಿಸಿದ ಸೂರ್ಯಕುಮಾರ್ ಯಾದವ್:
ರೋಹಿತ್ ಶರ್ಮಾ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 8 ಬಾಲ್ಗೆ 7 ರನ್ ಗಳಿಸಿದರು. ಆದರೆ, ಸೂರ್ಯಕುಮಾರ್ ಯಾದವ್ 35 ಎಸೆತದಲ್ಲಿ 6 ಸಿಕ್ಸ್ ಮತ್ತು 7 ಫೋರ್ ಮೂಲಕ 83 ರನ್ ಗಳಿಸಿದರು. ಅವರೊಂದಿಗೆ ನೆಹಾಲ್ ವಧೇರಾ 34 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಬೌಂಡರಿ ಮೂಲಕ 52 ರನ್ ಗಳಿಸಿದರು. ಟೀಮ್ ಡೇವಿಡ್ ಶೂನ್ಯ, ಕ್ಯಾಮರೂನ್ ಗ್ರಿನ್ 2 ರನ್ ಮತ್ತು ಇಶಾನ್ ಕಿಶನ್ 42 ರನ್ ಗಳಿಸಿದರು.
SKY brought his joystick tonight and took the game away from us. 💔
We’ve got 3 games left. We’ll treat every game as a knockout game from here on and we will continue to believe ❤️🩹#PlayBold #ನಮ್ಮRCB #IPL2023 #MIvRCB pic.twitter.com/nMtXKjAzac
— Royal Challengers Bangalore (@RCBTweets) May 9, 2023
ಮೊದಲು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ತಂಡಕ್ಕೆ ಆಘಾತದ ಮೇಲೆ ಆಘಾತ ಉಂಟಾಯಿತು. ಆರಂಭದಲ್ಲಿಯೇ ವಿರಾಟ್ ಕೊಹ್ಲಿ ಮತ್ತು ಅನುಜ್ ರಾವತ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಹೋಗುವ ಮೂಲಕ ತಂಡಕ್ಕೆ ಹಿನ್ನಡೆ ಆಗಿತ್ತು. ಆದರೆ ಬಳಿಕ ನಾಯಕ ಫಾಫ್ ಡು ಪ್ಲೇಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಜೋಡಿ 62 ಎಸೆತದಲ್ಲಿ 120 ರನ್ ಜೊತೆಯಾಟವಾಡಿದರು. ಆರ್ಸಿಬಿ ಪರ ವಿರಾಟ್ ಕೊಹ್ಲಿ 1 ರನ್, ಫಾಫ್ ಡು ಪ್ಲೆಸಿಸ್ 42 ಎಸೆತದಲ್ಲಿ 5 ಬೌಂಡರಿ ಮತ್ತು 3 ಸಿಕ್ಸ್ ಮೂಲಕ 65 ರನ್ , ಅನುಜ್ ರಾವತ್ 6 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 33 ಎಸೆತದಲ್ಲಿ 8 ಬೌಂಡರಿ ಮತ್ತು 4 ಸಿಕ್ಸ್ ಮೂಲಕ 68 ರನ್, ಮಹಿಪಾಲ್ ಲೊಮ್ರೋರ್ 1 ರನ್, ದಿನೇಶ್ ಕಾರ್ತಿಕ್ 30 ರನ್, ಕೇದಾರ್ ಜಾದವ್ 12 ರನ್ ಮತ್ತು ವನಿಂದು ಹಸರಂಗ 12 ರನ್ ಗಳಿಸಿದರು.
ಇದನ್ನೂ ಓದಿ: IPL 2023: ಕೊಹ್ಲಿಗೆ ಗಂಭೀರ್-ನವೀನ್ ಕೌಂಟರ್! ಲಕ್ನೋ ವಿರುದ್ಧ ಆರ್ಸಿಬಿ ಫ್ಯಾನ್ಸ್ ಗರಂ
ವಾಂಖೆಡೆಯಲ್ಲಿ ಸುಸ್ತಾದ ಬೌಲರ್ಸ್:
ಇನ್ನು, ಮುಂಬೈ ಮತ್ತು ಆರ್ಸಿಬಿ ಬೌಲರ್ಗಳು ಇಂದು ವಾಂಕೆಡೆಯಲ್ಲಿ ಸೋತು ಹೋದರು ಎಂದರೂ ತಪ್ಪಾಗಲಾರದು. ಆರ್ಸಿಬಿ ಪರ ಕನ್ನಡಿಗ ವಿಜಯ್ ವೈಶಾಕ್ ಕುಮಾರ್ 3 ಓವರ್ ಬೌಲ್ ಮಾಡಿ 37 ರನ್ ನೀಡಿ 2 ವಿಕೆಟ್ ಹಾಗೂ ವನಿಂದು ಹಸರಂಗ 4 ಓವರ್ ಮಾಡಿ 53 ರನ್ ನೀಡಿ 2 ವಿಕೆಟ್ ಪಡೆದರು. ಅದರಂತೆ ಮುಂಬೈ ಪರ ಜಾನ್ಸನ್ 4 ಓವರ್ಗೆ 36 ರನ್ ನೀಡಿ 3 ವಿಕೆಟ್, ಕ್ಯಾಮರೂನ್ ಗ್ರೀನ್ 1 ವಿಕೆಟ್, ಕ್ರಿಸ್ ಜೋರ್ಡನ್ 1 ವಿಕೆಟ್, ಕುಮಾರ್ ಕಾರ್ತಿಕೇಯ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ