ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (LSG vs RCB) ತಂಡಗಳು ಲಕ್ನೋದ ಏಕಾನ ಸ್ಟೇಡಿಯಂನಲ್ಲಿ ಸೆಣಸಾಡುತ್ತಿವೆ. ಕಳೆದ ಪಂದ್ಯದ ಸೋಲಿನ ಹಾಗೂ ಪಂದ್ಯದ ನಂತರ ನಡೆದ ಕೆಲ ಘಟನೆಗಳಿಂದ ಈ ಪಂದ್ಯವು ಈ ಬಾರಿ ಐಪಿಎಲ್ನ (IPL 2023) ರೈವರ್ಲಿ ಮ್ಯಾಚ್ನಲ್ಲಿ ಒಂದಾಗಿದೆ. ಹೀಗಾಗಿ ಪಂದ್ಯವು ಸಾಖಷ್ಟು ರೋಚಕತೆಯಿಂದ ಕೂಡಿರುವ ಸಾದ್ಯತೆ ಇದೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೇಸಿಸ್ (Faf du Plessis) ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಆರ್ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಸ್ಟಾರ್ ಬೌಲರ್ ಕಣಕ್ಕಿಳಿಯುತ್ತಿದ್ದಾರೆ.
ಆರ್ಸಿಬಿ - ಲಕ್ನೋ ತಂಡದ ಬದಲಾವಣೆಗಳು:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೆಲವು ಬದಲಾವಣೆಗಳನ್ನು ಮಾಡಿದೆ. ಜೋಶ್ ಹ್ಯಾಜಲ್‌ವುಡ್ ಫಿಟ್ ಆಗಿದ್ದು, ಋತುವಿನ ಮೊದಲ ಪಂದ್ಯವನ್ನು ಆಡಲಿದ್ದಾರೆ. ಶಹಬಾಜ್ ಅಹ್ಮದ್ ಅವರನ್ನು ಕೈಬಿಡಲಾಗಿದ್ದು, ಅವರ ಬದಲಿಗೆ ಅನುಜ್ ರಾವತ್ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಲಕ್ನೋ ಸೂಪರ್ ಜೈಂಟ್ಸ್ ಒಂದು ಬದಲಾವಣೆಯನ್ನು ಮಾಡಿದೆ - ಅವೇಶ್ ಖಾನ್ ಬದಲಿಗೆ ಕೃಷ್ಣಪ್ಪ ಗೌತಮ್ ಅವರನ್ನು ಆಯ್ಕೆ ಮಾಡಿದೆ.
ಪಿಚ್ ವರದಿ:
ಸ್ಪಿನ್ನರ್‌ಗಳೊಂದಿಗೆ ನಿಧಾನವಾದ ಮೇಲ್ಮೈ ಹೊಂದಿವೆ. ಏಕಾನಾ ಕ್ರಿಕೆಟ್ ಸ್ಟೇಡಿಯಂ ಬೌಲಿಂಗ್ ಹಾಗೂ ಬ್ಯಾಟಿಂಗ್ಗೆ ಸಹಕಾರಿಯಾಗಲಿದೆ. ಅಲ್ಲದೆ, ಇಬ್ಬನಿಯೂ ಇಲ್ಲಿ ದೊಡ್ಡ ವಿಷಯವಲ್ಲ. 40 ರಷ್ಟು ಮಳೆ ಸೂಚನೆ ಇದೆ. ಹವಾಮಾನ ಮುನ್ಸೂಚನೆಯ ಪ್ರಕಾರ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗಬಹುದು. 97 ರಷ್ಟು ಆರ್ದ್ರತೆ ಇರುತ್ತದೆ.
ಇದನ್ನೂ ಓದಿ: RCB vs LSG: ಆರ್ಸಿಬಿ ಸ್ಟಾರ್ ಬೌಲರ್ ಔಟ್, ಕೊಹ್ಲಿ ಪಾಳಯ ಸೇರಿಕೊಂಡ CSK ಮಾಜಿ ಆಲ್‌ರೌಂಡರ್
ಆರ್ಸಿಬಿಗೆ ಕೇದಾರ್ ಜಾದವ್ ಎಂಟ್ರಿ:
ಇಂಗ್ಲೆಂಡ್ ಆಲ್‌ರೌಂಡರ್ ಡೇವಿಡ್ ವಿಲ್ಲಿ ಈ ಋತುವಿನಲ್ಲಿ RCB ಪರ ನಾಲ್ಕು ಪಂದ್ಯಗಳನ್ನು ಆಡಿದ್ದರು ಮತ್ತು ಗಾಯದ ಕಾರಣದಿಂದ ಹೊರಗುಳಿಯುತ್ತಿದ್ದಾರೆ. ಈ ವಿಚಾರವನ್ನು ಅಧಿಕೃತವಾಗಿ ಆರ್ಸಿಬಿ ಪ್ರಾಂಚೈಸಿಯೇ ತಿಳಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023 ರ ಉಳಿದ ಪಂದ್ಯಗಳಿಗೆ ಡೇವಿಡ್ ವಿಲ್ಲಿ ಬದಲಿಗೆ ಕೇದಾರ್ ಜಾಧವ್ ಅವರನ್ನು ಹೆಸರಿಸಿದೆ. ಜಾದವ್ ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿದ್ದರು. ಕೇದಾರ್ ಜಾಧವ್ 2010 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಅವರು ಒಟ್ಟು 93 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಇದುವರೆಗೆ 1196 ರನ್ ಗಳಿಸಿದ್ದಾರೆ. ಬಲಗೈ ಬ್ಯಾಟರ್ ಆಗಿ, ಜಾಧವ್ ಈ ಹಿಂದೆ RCB ಯನ್ನು 17 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.
ಆರ್ಸಿಬಿ - ಲಕ್ನೋ ಪ್ಲೇಯಿಂಗ್ 11:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (WK), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (WK), ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಯಶ್ ಠಾಕೂರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ