• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • RCB vs LSG, IPL 2023: ಲಕ್ನೋ ಎದುರು ಸೇಡು ತೀರಿಸಿಕೊಂಡ ಆರ್​ಸಿಬಿ, ಫಾಫ್​ ಪಡೆಗೆ ಭರ್ಜರಿ ಗೆಲುವು

RCB vs LSG, IPL 2023: ಲಕ್ನೋ ಎದುರು ಸೇಡು ತೀರಿಸಿಕೊಂಡ ಆರ್​ಸಿಬಿ, ಫಾಫ್​ ಪಡೆಗೆ ಭರ್ಜರಿ ಗೆಲುವು

ಆರ್​ಸಿಬಿಗೆ ಜಯ

ಆರ್​ಸಿಬಿಗೆ ಜಯ

LSG vs RCB: ಲಕ್ನೋ ತಂಡವು ನಿಗದಿತ 19.5 ಓವರ್​ಗಳಿಗೆ 10 ವಿಕೆಟ್​ ನಷ್ಟಕ್ಕೆ 108 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆರ್​ಸಿಬಿ 18 ರನ್​ ಗಳಿಂದ ಗೆದ್ದು, ಹಿಂದಿನ ಸೋಲಿನ ಸೇಡನ್ನು ಭರ್ಜರಿಯಾಗಿ ತೀರಿಸಿಕೊಂಡಿತು.

 • Share this:

ಐಪಿಎಲ್ 2023ರ 43ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 126 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ಡುಪ್ಲೆಸಿ ಹೊರತುಪಡಿಸಿ ಉಳಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಿಗೆ ಲಕ್ನೋ ಪಿಚ್‌ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಅಲ್ಲದೇ ಮಳೆಯ ಕಾರಣ ಬ್ಯಾಟಿಂಗ್​ಗೆ ತೊಂದರೆ ನೀಡತು. ಈ ಮೊತ್ತ ಬೆನ್ನಟ್ಟಿದ ಲಕ್ನೋ ತಂಡವು ನಿಗದಿತ 19.5 ಓವರ್​ಗಳಿಗೆ 10 ವಿಕೆಟ್​ ನಷ್ಟಕ್ಕೆ 108 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಆರ್​ಸಿಬಿ 18 ರನ್​ ಗಳಿಂದ ಗೆದ್ದು, ಹಿಂದಿನ ಸೋಲಿನ ಸೇಡನ್ನು ಭರ್ಜರಿಯಾಗಿ ತೀರಿಸಿಕೊಂಡಿತು.


ಬ್ಯಾಟಿಂಗ್​ನಲ್ಲಿ ಎಡವಿದ ಲಕ್ನೋ:


ಇನ್ನು, ಆರ್​ಸಿಬಿ ನೀಡಿದ ಅಲ್ಪ ಮೊತ್ತದ ಟಾರ್ಗೆಟ್​ ಬೆನ್ನಟ್ಟಿದ ಲಕ್ನೋ ತಂಡವು 10 ವಿಕೆಟ್​ ನಷ್ಟಕ್ಕೆ 108 ರನ್​ ಗಳಿಸಲಷ್ಟೇ ಶಕ್ತವಾಯಿತು. ಇನ್ನು, ಲಕ್ನೋ ಪರ ಕೈಲ್ ಮೇಯರ್ಸ್ ಶೂನ್ಯ, ದೀಪಕ್ ಹೂಡಾ 1 ರನ್, ಮಾರ್ಕಸ್ ಸ್ಟೊಯಿನಿಸ್ 13 ರನ್, ಕೃನಾಲ್ ಪಾಂಡ್ಯ 14 ರನ್, ನಿಕೋಲಸ್ ಪೂರನ್ 9 ರನ್, ಕೃಷ್ಣಪ್ಪ ಗೌತಮ್ 23 ರನ್, ರವಿ ಬಿಷ್ಣೋಯ್ 5 ರನ್, ನವೀನ್-ಉಲ್-ಹಕ್ 13 ರನ್ ಮತ್ತು ಅಮೀತ್​ ಮಿಶ್ರಾ 19 ರನ್ ಗಳಿಸಿದರು.


ಮಿಂಚಿದ ಬೌಲರ್​ಗಳು:


ಲಕ್ನೋ ಮತ್ತು ಆರ್​ಸಿಬಿ ನಡುವಿನ ಪಂದ್ಯದಲ್ಲಿ ಬ್ಯಾಟ್ಸ್​ಮನ್​ಗಳಿಗಿಂತ ಹೆಚ್ಚು ಬೌಲರ್​ಗಳು ಇಂದು ಅಬ್ಬರಿಸಿದರು. ಬ್ಯಾಕ್​ ಟು ಬ್ಯಾಕ್​ ವಿಕೆಟ್​ ತೆಗೆಯುವ ಮೂಲಕ ಹೆಚ್ಚು ಆಕ್ರಮಣಕಾರಿಯಾದರು. ಅದರಂತೆ ಲಕ್ನೋ ಸೂಪರ್​ ಜೈಂಟ್ಸ್​ ಪರ ನವೀನ್-ಉಲ್-ಹಕ್ 4 ಓವರ್​​ಗೆ 3 ವಿಕೆಟ್​ ಪಡೆದರು. ಉಳಿಂದತೆ ರವಿ ಬಿಷ್ನೋಯ್​ ಮತ್ತು ಅಮಿತ್​ ಮಿಶ್ರಾ ತಲಾ 2 ವಿಕೆಟ್​ ಹಾಗೂ ಕೃಷ್ಣಪ್ಪ ಗೌತಮ್​ 1 ವಿಕೆಟ್​ ಪಡೆದು ಮಿಂಚಿದರು. ಇತ್ತ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಲ್ಲಿ ಕರಣ್​ ಶರ್ಮಾ 2 ವಿಕೆಟ್​, ವನಿಂದು ಹಸರಂಗ 1 ವಿಕೆಟ್, ಮೊಹಮದಮ್ ಸಿರಾಜ್​ 1 ವಿಕೆಟ್​, ಜೋಸ್​ ಹೇಝಲ್​ವುಡ್​ 2 ವಿಕೆಟ್​, ಗ್ಲೇನ್​ ಮ್ಯಾಕ್ಸ್​ವೆಲ್ 1 ವಿಕೆಟ್ ಪಡೆದು ಮಿಂಚಿದರು.


ಇದನ್ನೂ ಓದಿ: IPL 2023: ರಾಜಸ್ಥಾನ್​-ಮುಂಬೈ ಪಂದ್ಯ ಫಿಕ್ಸ್ ಆಗಿತ್ತು ಅಂತಿದ್ದಾರೆ ಫ್ಯಾನ್ಸ್, ಸಾಕ್ಷಿನೂ ಕೊಟ್ರು!


ಫಾಫ್​ -ಕೊಹ್ಲಿ ಉತ್ತಮ ಜೊತೆಯಾಟ:


ಇನ್ನು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ಫಾಫ್​ ಡು ಫ್ಲೇಸಿಸ್​ ಮೊದಲ ವಿಕೆಟ್‌ಗೆ 62 ರನ್ ಸೇರಿಸಿದರು. ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ 31 ರನ್ ಮತ್ತು ಡುಪ್ಲೆಸಿ 40 ಎಸೆತಗಳಲ್ಲಿ 44 ರನ್ ಗಳಿಸಿದರು. ಇದಲ್ಲದೇ ದಿನೇಶ್ ಕಾರ್ತಿಕ್ (16) ಮೂರನೇ ಅತ್ಯುತ್ತಮ ಸ್ಕೋರ್ ಗಳಿಸಿದರು. ಉಳಿದ ಯಾವುದೇ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತವನ್ನು ತಲುಪಲಿಲ್ಲ.
ಆರ್​ಸಿಬಿ ಪರ ಉಳಿಂದತೆ, ಅನುಜ್​ ರಾವತ್ 9 ರನ್, ಗ್ಲೇನ್​ ಮ್ಯಾಕ್ಸ್​ವೆಲ್ 4 ರನ್, ಸುಯಾಶ್​ ಪ್ರಭುದೇಸಾಯಿ 6 ರನ್, ಮಹಿಪಾಲ್​ ಲೊಮ್ರೋರ 3 ರನ್, ವನಿಂದು ಹಸರಂಗ 8 ರನ್, ಕರಣ್ ಶರ್ಮಾ 2 ರನ್, ಮೊಹಮ್ಮದ್ ಸಿರಾಜ್​ 0 ರನ್ ಮತ್ತು ಜೋಸ್​ ಹೆಐಲ್​ವುಡ್​ 1 ರನ್ ಗಳಿಸಿದರು.


ಬೇಡದ ದಾಖಲೆ ಬರೆದ ಆರ್​ಸಿಬಿ:

top videos


  ಈ ಪಂದ್ಯದ ವೇಳೆ ಆರ್‌ಸಿಬಿ ಹೆಸರಿನಲ್ಲಿ ಮುಜುಗರದ ದಾಖಲೆಯೊಂದು ದಾಖಲಾಗಿದೆ. ಇಡೀ ಇನಿಂಗ್ಸ್‌ನಲ್ಲಿ ಬೆಂಗಳೂರು ಬ್ಯಾಟ್ಸ್‌ಮನ್‌ಗಳು ಕೇವಲ 8 ಬೌಂಡರಿಗಳನ್ನು ಹೊಡೆಯಲು ಶಕ್ತರಾದರು. ಈ ಪೈಕಿ ವಿರಾಟ್-ಫಾಫ್ 5 ಬೌಂಡರಿ ಬಾರಿಸಿದರು. ಕೊಹ್ಲಿ ಗರಿಷ್ಠ 3 ಬೌಂಡರಿಗಳನ್ನು ಬಾರಿಸಿದರು. ಫಾಫ್ ಬ್ಯಾಟ್‌ನಿಂದ 1 ಬೌಂಡರಿ ಮತ್ತು 1 ಸಿಕ್ಸರ್ ಹೊರಬಂದವು. ಐಪಿಎಲ್ 2023 ರಲ್ಲಿ ಯಾವುದೇ ತಂಡಕ್ಕೆ ಇದಕ್ಕಿಂತ ಕಡಿಮೆ ಬೌಂಡರಿಗಳಿಸಿರಲಿಲ್ಲ. ಇಡೀ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್‌ ಗಳು ಸಿಡಿದಿವೆ. ಇದಕ್ಕೂ ಮೊದಲು, ಐಪಿಎಲ್ 2023 ರಲ್ಲಿ ಒಂದು ಪಂದ್ಯದಲ್ಲಿ ಹೊಡೆದ ಅತಿ ಕಡಿಮೆ ಸಂಖ್ಯೆಯ ಬೌಂಡರಿಗಳು 13 ಆಗಿತ್ತು. ಆದರೆ, ಆರ್‌ಸಿಬಿ ಸ್ಥಿತಿ ಇದಕ್ಕಿಂತ ಕಡಿಮೆ ಹೊಡೆಯುವ ಮೂಲಕ ಬೇಡದ ದಾಖಲೆಯನ್ನು ಮಾಡಿದೆ.

  First published: