• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • IPL 2023, RCB vs LSG: ಟಾಸ್​ ಗೆದ್ದ ಕೆಎಲ್​ ರಾಹುಲ್​, ಲಕ್ನೋ ವಿರುದ್ಧ ಬಲಿಷ್ಠ ತಂಡ ಕಣಕ್ಕಿಳಿಸಿದ ಆರ್​ಸಿಬಿ

IPL 2023, RCB vs LSG: ಟಾಸ್​ ಗೆದ್ದ ಕೆಎಲ್​ ರಾಹುಲ್​, ಲಕ್ನೋ ವಿರುದ್ಧ ಬಲಿಷ್ಠ ತಂಡ ಕಣಕ್ಕಿಳಿಸಿದ ಆರ್​ಸಿಬಿ

RCB vs LSG

RCB vs LSG

LSG vs RCB: ಡುಪ್ಲೆಸಿ ನಾಯಕತ್ವದ ಆರ್‌ಸಿಬಿ ತಂಡ ಹ್ಯಾಟ್ರಿಕ್ ಗೆಲುವಿನ ಉದ್ದೇಶದಿಂದ ಕಣಕ್ಕಿಳಿಯುತ್ತಿವೆ. ಈಗಾಗಲೇ ಟಾಸ್​ ಗೆದ್ದಿರುವ ಲಕ್ನೋ ತಂಡದ ನಾಯಕ ಕೆಎಲ್​ ರಾಹುಲ್​ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

 • Share this:

ಐಪಿಎಲ್ 2023ರ (IPL 2023) ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್‌ ಜೈಂಟ್ಸ್ (RCB vs LSG) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಆರ್‌ಸಿಬಿ ತವರು ಮೈದಾನದಲ್ಲಿ ಅಂದರೆ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium Bengaluru) ನಡೆಯುತ್ತಿದೆ. ಒಟ್ಟಾರೆ ಐಪಿಎಲ್ ಇತಿಹಾಸದಲ್ಲಿ ಎರಡೂ ತಂಡಗಳು ಮೂರನೇ ಬಾರಿ ಮುಖಾಮುಖಿಯಾಗಿವೆ. ಆರ್‌ಸಿಬಿ ಕಳೆದ ಎರಡು ಬಾರಿ ಗೆದ್ದಿತ್ತು. ಡುಪ್ಲೆಸಿ ನಾಯಕತ್ವದ ಆರ್‌ಸಿಬಿ ತಂಡ ಹ್ಯಾಟ್ರಿಕ್ ಗೆಲುವಿನ ಉದ್ದೇಶದಿಂದ ಕಣಕ್ಕಿಳಿಯುತ್ತಿವೆ. ಈಗಾಗಲೇ ಟಾಸ್​ ಗೆದ್ದಿರುವ ಲಕ್ನೋ ತಂಡದ ನಾಯಕ ಕೆಎಲ್​ ರಾಹುಲ್​ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.


ಇಂದಿನ ಪಂದ್ಯವನ್ನು ನೀವು ಸ್ಟಾರ್​ ಸ್ಪೋರ್ಟ್ಸ್​ ನೆಟವರ್ಕ್​ನಲ್ಲಿ ನೇರಪ್ರಸಾರವನ್ನು ಮತ್ತು ಜಿಯೋ ಸಿನಿಮಾದಲ್ಲಿ ಉಚಿತವಾಗಿ ಲೈವ್​ ಸ್ಟ್ರೀಮಿಂಗ್​ನ್ನು ನೋಡಬಹುದು. ಈಗಾಗಲೇ ಡಿಜಟಲ್​ ಪ್ರಸಾರದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತಿದೆ.


ಉಭಯ ತಂಡಗಳ ಹೆಡ್​ ಟು ಹೆಡ್​:


ಕಳೆದ ಪಂದ್ಯದಲ್ಲಿ ಆರ್‌ಸಿಬಿಯನ್ನು ಕೋಲ್ಕತ್ತಾ 81 ರನ್‌ಗಳಿಂದ ಸೋಲಿಸಿತ್ತು. ಅಂತಹ ಪರಿಸ್ಥಿತಿಯಲ್ಲಿ, ಅವಳು ತನ್ನ ಮನೆಯಲ್ಲಿ ಗೆಲುವಿನ ಟ್ರ್ಯಾಕ್​ಗೆ ಮರಳಲು ಸಿದ್ಧರಾಗಿದ್ದಾರೆ. ಕಳೆದ ಸೀಸನ್‌ನಲ್ಲಿ ಅಂದರೆ ಐಪಿಎಲ್‌ನ 15ನೇ ಋತುವಿನಲ್ಲಿ ಇಬ್ಬರೂ ಎರಡು ಬಾರಿ ಮುಖಾಮುಖಿಯಾಗಿದ್ದರು, ಅಲ್ಲಿ ಲೀಗ್ ಹಂತದಲ್ಲಿ ಆಡಿದ ಪಂದ್ಯದಲ್ಲಿ RCB ಲಕ್ನೋವನ್ನು 18 ರನ್‌ಗಳಿಂದ ಸೋಲಿಸಿತು. ಕಳೆದ ವರ್ಷ ಎಲಿಮಿನೇಟರ್‌ನಲ್ಲಿ ಇಬ್ಬರೂ ಮುಖಾಮುಖಿಯಾಗಿದ್ದರು, ಅಲ್ಲಿ ಬೆಂಗಳೂರು 14 ರನ್‌ಗಳಿಂದ ಗೆದ್ದಿತ್ತು.ಬೆಂಗಳೂರು ರಸ್ತೆ ಸಂಚಾರದಲ್ಲಿ ಬದಲಾವಣೆ:


ಇಂದು ಈ ಪ್ರದೇಶದಲ್ಲಿ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ. ಮ್ಯೂಸಿಯಂ ರೋಡ್, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಸೇಂಟ್ ಮಾರ್ಕ್ಸ್​ ರೋಡ್, ಅಂಬೇಡ್ಕರ್​ ರಸ್ತೆ, ಟ್ರಿನಿಟಿ ಜಂಕ್ಷನ್, ವಿಟ್ಟಲ್ ಮಲ್ಯ ರಸ್ತೆ, ಎಂಜಿ ರೋಡ್​, ರಾಜಭವನ ರಸ್ತೆ, ಕಸ್ತೂರ್ಬಾ ರಸ್ತೆ, ಲ್ಯಾವೆಲ್ಲೆ ರೋಡ್‌, ಕ್ವೀನ್ಸ್ ರಸ್ತೆ, ಕಬ್ಬನ್ ರಸ್ತೆ ಹಾಗೂ ನೃಪತುಂಗ ರಸ್ತೆಯ ಸುತ್ತಮುತ್ತ. ಅದರಂತೆ ಈ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡಬಹುದು: ಕಂಠೀರವ ಸ್ಟೇಡಿಯಂ, ಶಿವಾಜಿನಗರ ಬಿಎಂಟಿಸಿ ಬಸ್​ ನಿಲ್ದಾಣ, ಯುಬಿ ಸಿಟಿ ಪಾರ್ಕಿಂಗ್ ಪ್ರದೇಶ, ಹಳೆ ಕೆಜಿಐಡಿ ಕಟ್ಟಡ, ಕಿಂಗ್ಸ್ ರಸ್ತೆ, ಬಿಆರ್​ವಿ ಗ್ರೌಂಡ್ ಸುತ್ತಮುತ್ತ, ಓಲ್ಡ್ ಕೆಜಿಐಡಿ ಬಿಲ್ಡಿಂಗ್​ಸಮೀಪ ವಾಹನ ನಿಲುಗಡೆ ಮಾಡಬಹುದು.


ಇದನ್ನೂ ಓದಿ: IPL 2023, LSG vs RCB: ಬೆಂಗಳೂರು ತಂಡಕ್ಕೆ ತವರಿನ ಹುಡುಗನೇ ಮುಳುವಾಗ್ತಾನಾ? ಮಾಜಿ ಆರ್​ಸಿಬಿ ಆಟಗಾರನಿಂದಲೇ ಕಂಟಕ?


ಇನ್ನು, ನಾಯಂಡಹಳ್ಳಿ, ಪಿಇಎಸ್ ವಿಶ್ವವಿದ್ಯಾಲಯ ಮತ್ತು ಕೆರೆಕೋಡಿ ಕಡೆಯಿಂದ ಬರುವ ವಾಹನಗಳನ್ನು ತಾತ್ಕಾಲಿಕವಾಗಿ ಏಕಮುಖ ಮಾರ್ಗವಾಗಿ ಬದಲಾಯಿಸಲಾಗಿದೆ. ನಾಯಂಡಹಳ್ಳಿ ಮತ್ತು ಪಿಇಎಸ್ ವಿಶ್ವವಿದ್ಯಾಲಯದಿಂದ ಬರುವ ವಾಹನಗಳು ವೀರಭದ್ರನಗರ ಸಿಗ್ನಲ್ ದಾಟಿ ಪಿಇಎಸ್ ವಿಶ್ವವಿದ್ಯಾಲಯ ಜಂಕ್ಷನ್​ನಲ್ಲಿ ಬಲಕ್ಕೆ ಪ್ರಯಾಣಿಸಲು ಸೂಚಿಸಲಾಗಿದೆ.
ಬೆಂಗಳೂರು- ಲಕ್ನೋ ಪ್ಲೇಯಿಂಗ್​ 11:


ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿ (ಸಿ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ನದೀಮ್, ದಿನೇಶ್ ಕಾರ್ತಿಕ್ (ವಿಕಿ), ಅನುಜ್ ರಾವತ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

top videos


  ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಕೆಎಲ್ ರಾಹುಲ್ (ಸಿ), ಕೈಲ್ ಮೈಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (wk), ಜಯದೇವ್ ಉನದ್ಕತ್, ಅಮಿತ್ ಮಿಶ್ರಾ, ಅವೇಶ್ ಖಾನ್, ಮಾರ್ಕ್ ವುಡ್ ರವಿ ಬಿಷ್ಣೋಯಿ.

  First published: