ಐಪಿಎಲ್‌ನ 9ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (RCB vs KKR) ನಡುವೆ ನಡೆಯುತ್ತಿದೆ. ಕೋಲ್ಕತ್ತಾ ತಂಡ ಈ ಪಂದ್ಯವನ್ನು ತನ್ನ ತವರು ಮೈದಾನ ಈಡನ್ ಗಾರ್ಡನ್‌ನಲ್ಲಿ (Eden Gardens) ಆಡುತ್ತಿದೆ. ಟಾಸ್ ಗೆದ್ದ RCB ಮೊದಲು ಬೌಲಿಂಗ್ ಮಾಡುವ ಮೂಲಕ ಕೋಲ್ಕತ್ತಾ ತಂಡವು ಬ್ಯಾಟಿಂಗ್ ಮಾಡಿತು. KKR ತಂಡವು ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸುವ ಮೂಲಕ ಬೆಂಗಳೂರು ತಂಡಕ್ಕೆ 205 ರನ್ಗಳ ಟಾರ್ಗೆಟ್ ನೀಡಿದೆ. ಇಂದಿನ ಪಂದ್ಯಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಆಗಮಿಸಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಕಿಂಗ್ಗಳು ಒಂದೇ ಕಡೆ ಸೇರಿದ್ದಾರೆ ಎಂದು ಕೊಹ್ಲಿ ಮತ್ತು ಶಾರುಖ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
ಅಬ್ಬರಿಸಿದ ಶಾರ್ದೂಲ್ ಠಾಕೂರ್:
ಇನ್ನು, ಟಾಸ್ಸ ಓತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ನೈಟ್ ರೈಡರ್ಸ್ ಪರ, ರಹಮಾನುಲ್ಲಾ ಗುರ್ಬಾಜ್ 44 ಎಸೆತದಲ್ಲಿ 3 ಸಿಕ್ಸ್ ಮತ್ತು 6 ಫೋರ್ ಮೂಲಕ 57 ರನ್ ಗಳಿಸಿದರು, ವೆಂಕಟೇಶ್ ಅಯ್ಯರ್ 3 ರನ್, ಮನ್‌ದೀಪ್ ಸಿಂಗ್ ಶೂನ್ಯ, ನಿತೀಶ್ ರಾಣಾ 1 ರನ್, ಆಂಡ್ರೆ ರಸೆಲ್ 0 ರನ್, ರಿಂಕು ಸಿಂಗ್ 46 ರನ್, ಸುನಿಲ್ ನರೈನ್ ಶೂನ್ಯ, ಉಮೇಶ್ ಯಾದವ್ 4 ರನ್ ಗಳಿಸಿದರು. ಆದರೆ ಶಾರ್ದೂಲ್ ಠಾಕೂರ್ ಇಂದು ಅಬ್ಬರಿಸಿದ್ದು, 29 ಎಸೆತದಲ್ಲಿ 9 ಪೋರ್ ಮತ್ತು 3 ಸಿಕ್ಸ್ ಮೂಲಕ 68 ರನ್ ಗಳಿಸಿದರು.
Innings break!@KKRiders post a mammoth total of 204/7 in the first innings!
A challenging chase coming up for @RCBTweets. Can they do it ❓ #TATAIPL | #KKRvRCB
Scorecard ▶️ https://t.co/J6wVwbrI5u#TATAIPL | #KKRvRCB pic.twitter.com/dxCQXKYvAW
— IndianPremierLeague (@IPL) April 6, 2023
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ಸಿಬಿ ತಂಡ ಇಂದು ಕೋಲ್ಕತ್ತಾ ವಿರುದ್ಧ ಕೊಂಚ ಎಡವಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಡೇವಿಡ್ ವಿಲ್ಲೆ 2 ವಿಕೆಟ್ ಮತ್ತು ಕರಣ್ ಶರ್ಮಾ 2 ವಿಕೆಟ್ ಪಡೆದರು. ಉಳಿಂದತೆ ಮಿಚೆಲ್ ಬ್ರಾಸ್ವೆಲ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಸಹ 1 ವಿಕೆಟ್ ಪಡೆದರು.
ಇದನ್ನೂ ಓದಿ: Kane Williamson: ಐಪಿಎಲ್ನಿಂದ ವಿಶ್ವ ಚಾಂಪಿಯನ್ ನಾಯಕನ ವೃತ್ತಿಜೀವನವನ್ನು ಕೊನೆಗೊಳುತ್ತಾ? ಹೊರಬಿತ್ತು ಶಾಕಿಂಗ್ ಮಾಹಿತಿ
4 ವರ್ಷಗಳ ನಂತರ ಕೋಲ್ಕತ್ತಾದಲ್ಲಿ ಕೆಕೆಆರ್ ಪಂದ್ಯ:
ಇನ್ನು, ಕೋಲ್ಕತ್ತಾ ತಂಡ ಈ ಪಂದ್ಯವನ್ನು ತನ್ನ ತವರು ಮೈದಾನ ಈಡನ್ ಗಾರ್ಡನ್‌ನಲ್ಲಿ ಆಡುತ್ತಿದೆ. ಕೆಕೆಆರ್ ತಂಡ 2019ರ ನಂತರ ಮೊದಲ ಬಾರಿಗೆ ತವರು ನೆಲದಲ್ಲಿ ಆಡುತ್ತಿದೆ. ಈ ಪಂದ್ಯಕ್ಕೂ ಮುನ್ನ ಕೋಲ್ಕತ್ತಾ ನಗರದಲ್ಲಿ ತಂಡವನ್ನು ಸ್ವಾಗತಿಸಲು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ರಾತ್ರಿಯಾದ ಕೂಡಲೇ ಇಡೀ ಕೋಲ್ಕತ್ತಾ ನೇರಳೆ ಬಣ್ಣದಿಂದ ಬೆಳಗುತ್ತಿತ್ತು. ಕೋಲ್ಕತ್ತಾ ಮಾತ್ರವಲ್ಲ, ಎಲ್ಲಾ ತಂಡಗಳು ತಮ್ಮ ತವರು ಮೈದಾನದಲ್ಲಿ ಅರ್ಧದಷ್ಟು ಪಂದ್ಯಗಳನ್ನು ಆಡುತ್ತವೆ. ಸಂಪೂರ್ಣ ಕೋಲ್ಕತ್ತಾ ನಗರವನ್ನು ನೇರಳೆ ಬಣ್ಣದಲ್ಲಿ ಚಿತ್ರಿಸಲಾಗಿದೆ. ಸೇತುವೆಯಿಂದ ರಸ್ತೆಯವರೆಗೆ ಎಲ್ಲೆಂದರಲ್ಲಿ ನೇರಳೆ ದೀಪಗಳು ಗೋಚರಿಸುತ್ತವೆ.
RCB vs KKR ಪ್ಲೇಯಿಂಗ್ 11:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ಫಾಫ್ ಡುಪ್ಲೆಸಿಸ್ (C), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ಕರಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್.
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ 11: ಮನ್‌ದೀಪ್ ಸಿಂಗ್, ರಹಮಾನುಲ್ಲಾ ಗುರ್ಬಾಜ್ (wk), ನಿತೀಶ್ ರಾಣಾ (c), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೈನ್, ಸುಯಶ್ ಶರ್ಮಾ, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ