ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2023) ಹೊಸ ಋತುವಿನಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮತ್ತೊಂದು ಸೋಲನ್ನು ಕಂಡಿದೆ. ಸತತ 5 ಪಂದ್ಯಗಳನ್ನು ಆಡಿದ ತಂಡಕ್ಕೆ ಇಲ್ಲಿಯವರೆಗೆ ಒಂದೇ ಒಂದು ಗೆಲುವು ದಾಖಲಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ತಂಡದ ವಿರುದ್ಧ ಏಕಪಕ್ಷೀಯ ಜಯ ದಾಖಲಿಸಿತು. ಪಂದ್ಯದ ನಂತರ ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ (Kohli vs Ganguly) ನಡುವಿನ ದೃಶ್ಯ ಕಂಡುಬಂತು. ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ವಿರಾಟ್ ಕೊಹ್ಲಿ ನಡುವಿನ ಮನಸ್ತಾಪ ಮತ್ತೆ ಬಹಿರಂಗವಾಗಿ ಎಲ್ಲರೆದುರು ಕಂಡುಬಂತು.
ವಿರಾಟ್ ಮತ್ತು ಗಂಗೂಲಿ ವಿಡಿಯೋ ವೈರಲ್:
ಡೆಲ್ಲಿ ಮತ್ತು ಬೆಂಗಳೂರು ನಡುವಿನ ಪಂದ್ಯ ಮುಗಿದ ಬಳಿಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಪಂದ್ಯದ ನಂತರ ಎರಡೂ ತಂಡಗಳ ಆಟಗಾರರು ಪರಸ್ಪರ ಹಸ್ತಲಾಘವ ಮಾಡುವುದು ಸಾಮಾನ್ಯವಾಗಿರುತ್ತದೆ. ಆದರೆ ಈ ವೇಳೆಯ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗಿದೆ. ವಿರಾಟ್ ಕೊಹ್ಲಿ ಡೆಲ್ಲಿಯ ಎಲ್ಲಾ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಯೊಂದಿಗೆ ಹಸ್ತಲಾಘವ ಮಾಡುತ್ತಿರುವುದು ಕಂಡುಬಂದಿದೆ. ಆದರೆ ಸೌರವ್ ಗಂಗೂಲಿಯೊಂದಿಗೆ ಕೈಕುಲುಕಲುಕಿಲ್ಲ. ವಾಸ್ತವವಾಗಿ, ವೈರಲ್ ಆಗಿರುವ ವೀಡಿಯೊದಲ್ಲಿ, ಇಬ್ಬರ ನಡುವೆ ಏನೋ ಸಂಭವಿಸಿದೆ, ಏಕೆಂದರೆ ಅವರು ಪರಸ್ಪರ ಮುಖಾಮುಖಿಯಾಗಲಿಲ್ಲ. ಸೌರವ್ ಗಂಗೂಲಿ ಕೈ ಕುಲುಕದೆ ಮುಂದೆ ಹೋದರು ಮತ್ತು ವಿರಾಟ್ ಕೂಡ ನಿಲ್ಲಲಿಲ್ಲ.
Ignore your life problems same like Sourav Ganguly ignored Virat Kohli ;)#RCBvDC #DCvsRCB pic.twitter.com/utlW0udfmq
— ᴍʀ.ᴠɪʟʟᴀ..!🖤 (@TuJoMilaa) April 15, 2023
Now the video of that kohli stare to ganguly #ViratKohli𓃵 #IPL2023 #RCBvDCpic.twitter.com/rXy2FoDn6v
— Aditt (@Aditt76681140) April 15, 2023
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಶನಿವಾರ ನಡೆದ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಇದು ಈ ಋತುವಿನಲ್ಲಿ ತಂಡದ ಸತತ 5ನೇ ಸೋಲು. ಟಾಸ್ ಗೆದ್ದ ದೆಹಲಿ ನಾಯಕ ಡೇವಿಡ್ ವಾರ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ವಿರಾಟ್ ಕೊಹ್ಲಿ ಅವರ ಅರ್ಧಶತಕದ ಬಲದಿಂದ ಬೆಂಗಳೂರು ತಂಡ 6 ವಿಕೆಟ್‌ಗೆ 174 ರನ್ ಗಳಿಸಿತು. ಗುರಿ ಬೆನ್ನಟ್ಟಿದ ವೇಳೆ ಡೆಲ್ಲಿ ಬ್ಯಾಟ್ಸ್ ಮನ್ ಗಳು ಸೋಲೊಪ್ಪಿಕೊಂಡಿದ್ದು, 98 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ತಂಡ ಅತ್ಯಂತ ಪ್ರಯಾಸದಿಂದ 9 ವಿಕೆಟ್ ಗೆ 151 ರನ್ ಗಳಿಗೆ ತಲುಪಿತು.
ಇದನ್ನೂ ಓದಿ: Virat Kohli: ಐಪಿಎಲ್ನಲ್ಲಿ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ! ಈ ಸಾಧನೆ ಮಾಡಿದ ಮೊದಲ ಆಟಗಾರ ವಿರಾಟ್
ದಾಖಲೆ ಬರೆದ ಕೊಹ್ಲಿ:
ಡೆಲ್ಲಿ ವಿರುದ್ಧ ಕೊಹ್ಲಿ ಒಟ್ಟು 34 ಎಸೆತಗಳನ್ನು ಎದುರಿಸಿದರು. ಏತನ್ಮಧ್ಯೆ, 147.05 ಸ್ಟ್ರೈಕ್ ರೇಟ್‌ನಲ್ಲಿ 50 ರನ್ ಗಳಿಸಿದರು. ಅವರ ಅತ್ಯುತ್ತಮ ಇನ್ನಿಂಗ್ಸ್‌ನಲ್ಲಿ ಅವರು ಒಟ್ಟು ಆರು ಬೌಂಡರಿಗಳು ಮತ್ತು ಒಂದು ಸಿಕ್ಸರ್‌ಗಳನ್ನು ಹೊಡೆದರು. ಡೆಲ್ಲಿ ವಿರುದ್ಧ ಆಡಿದ ಈ ಉತ್ತಮ ಇನ್ನಿಂಗ್ಸ್ ಜೊತೆಗೆ ವಿಶೇಷ ಸಾಧನೆಯನ್ನೂ ಮಾಡಿದ್ದಾರೆ. ಒಂದೇ ಮೈದಾನದಲ್ಲಿ 2500ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ