• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • RCB vs DC: ಟಾಸ್​ ಗೆದ್ದ ಆರ್​ಸಿಬಿ, ಫಾಫ್​ ಪಡೆಗೆ ಎಂಟ್ರಿಕೊಟ್ಟ ಸ್ಟಾರ್​ ಆಲ್​ರೌಂಡರ್​

RCB vs DC: ಟಾಸ್​ ಗೆದ್ದ ಆರ್​ಸಿಬಿ, ಫಾಫ್​ ಪಡೆಗೆ ಎಂಟ್ರಿಕೊಟ್ಟ ಸ್ಟಾರ್​ ಆಲ್​ರೌಂಡರ್​

IPl 2023, RCB vs DC

IPl 2023, RCB vs DC

IPl 2023, RCB vs DC: ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಅವರಂತಹ ಅನುಭವಿ ಆಟಗಾರರು ಡೆಲ್ಲಿಯನ್ನು ತೊಂದರೆಗೊಳಿಸಬಹುದು.

  • Share this:

ಐಪಿಎಲ್​ನ 50ನೇ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (DC vs RCB) ಸೆಣಸಾಡುತ್ತಿವೆ. ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಈ ಪಂದ್ಯ ಆರಮಭವಾಗಿದ್ದು, ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಎರಡೂ ತಂಡಗಳು ಪರಸ್ಪರ ಪೈಪೋಟಿ ನಡೆಸುತ್ತಿವೆ. ಕಳೆದ ಪಂದ್ಯದಲ್ಲಿ ಡೆಲ್ಲಿ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ತಂಡವನ್ನು ತನ್ನ ತವರಿನಲ್ಲಿ ಸೋಲಿಸಿದ್ದರೆ, ಆರ್‌ಸಿಬಿ ಲಕ್ನೋವನ್ನು ಸೋಲಿಸಿತ್ತು. ತವರು ಮೈದಾನದ ಲಾಭ ಪಡೆದಿರುವ ಡೆಲ್ಲಿ ತಂಡ ಸತತ ಎರಡನೇ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಆರ್‌ಸಿಬಿ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಅವರಂತಹ ಅನುಭವಿ ಆಟಗಾರರು ಡೆಲ್ಲಿಯನ್ನು ತೊಂದರೆಗೊಳಿಸಬಹುದು. ಈ ಪಂದ್ಯವನ್ನು ಗೆದ್ದ ನಂತರ, RCB, ರಾಜಸ್ಥಾನವನ್ನು ಹಿಂದೆ ಬಿಟ್ಟು ಅಗ್ರ-4 ತಲುಪುವ ಭರವಸೆಯಲ್ಲಿದೆ.


ಹೆಡ್​ ಟು ಹೆಡ್​:


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅತ್ಯುತ್ತಮ ದಾಖಲೆಯನ್ನು ಹೊಂದಿದೆ. ಉಭಯ ತಂಡಗಳ ನಡುವೆ ಇದುವರೆಗೆ ಒಟ್ಟು 30 ಪಂದ್ಯಗಳು ನಡೆದಿವೆ. ಇದರಲ್ಲಿ RCB 18 ಪಂದ್ಯಗಳನ್ನು ಗೆದ್ದಿದೆ ಮತ್ತು ಡೆಲ್ಲಿ 10 ಗೆಲುವುಗಳನ್ನು ದಾಖಲಿಸಿದೆ. ಡೆಲ್ಲಿ ವಿರುದ್ಧ ಕಳೆದ 4 ಪಂದ್ಯಗಳಲ್ಲಿ ಆರ್‌ಸಿಬಿ ಜಯ ಸಾಧಿಸಿದೆ. ಈ ಮೂಲಕ ಆರ್‌ಸಿಬಿ ಮೇಲುಗೈ ಸಾಧಿಸಿದೆ. ಈ ಎರಡೂ ತಂಡಗಳು ಐಪಿಎಲ್ 2023ರಲ್ಲೂ ಪರಸ್ಪರ ಮುಖಾಮುಖಿಯಾಗಿದ್ದು, ಇದರಲ್ಲಿ ಆರ್‌ಸಿಬಿ 23 ರನ್‌ಗಳಿಂದ ಗೆದ್ದಿತ್ತು. ಹೀಗಾಗಿ ಇಂದು ಆರ್​ಸಿಬಿ ಗೆಲ್ಲುವ ಫೇವರೇಟ್​ ತಂಡವಾಗಿದೆ.


ಆರ್​ಸಿಬಿ ತಂಡಕ್ಕೆ ಜಾದವ್​ ಎಂಟ್ರಿ:


38 ವರ್ಷದ ಕೇದಾರ್ ಜಾಧವ್ ಇದೀಗ ಆರ್​ಸಿಬಿ ತಂಡವನ್ನು ಸೇರಿಕೊಂಡಿದ್ದು, ನೆಟ್ಸ್​ನಲ್ಲಿ ಭರ್ಜರಿ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು, ವಿಶ್ರಾಂತಿಯಿಂದ ಬಂದಿದ್ದು, ಕ್ರಿಕೆಟ್​ ಆಡುವುದು ನನ್ನ ಫ್ಯಾಶನ್​ ಎಂದು ಹೇಳಿಕೊಂಡಿದ್ದಾರೆ. ಕೇದಾರ್ ಜಾಧವ್ 2010 ರಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು.


ಇದನ್ನೂ ಓದಿ: CSK vs MI: ಮುಂಬೈ ವಿರುದ್ಧ ಚೆನ್ನೈಗೆ ಭರ್ಜರಿ ಗೆಲುವು, ಅಂಕಪಟ್ಟಿಯಲ್ಲಿ ಮೇಲಕ್ಕೇರಿದ ಧೋನಿ ಬಾಯ್ಸ್


ಅವರು ಒಟ್ಟು 93 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಇದುವರೆಗೆ 1196 ರನ್ ಗಳಿಸಿದ್ದಾರೆ. ಬಲಗೈ ಬ್ಯಾಟರ್ ಆಗಿ, ಜಾಧವ್ ಈ ಹಿಂದೆ RCB ಪರ 17 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಜಾಧವ್ ಆರ್​ಸಿಬಿ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಹೆಚ್ಚು ಬಲ ತುಂಬಲಿದ್ದಾರೆ. ಸದ್ಯ ಆರ್​ಸಿಬಿ ತಂಡದಲ್ಲಿ ಕೊಹ್ಲಿ, ಮ್ಯಾಕ್ಸ್​ವೆಲ್​ ಮತ್ತು ಡು ಪ್ಲೇಸಿಸ್​ ಬಿಟ್ಟರೆ ಯಾರೂ ಸಹ ಉತ್ತಮ ಬ್ಯಾಟಿಂಗ್​ ಮಾಡುತ್ತಿಲ್ಲ.




ಆರ್​ಸಿಬಿ - ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್​ 11:


ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕೇದಾರ್ ಜಾಧವ್, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.


ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್​ 11: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೆ ರುಸ್ಸೋ, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

top videos
    First published: