ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs DC) ತಂಡಗಳು ಸೆಣಸಾಡಿದವು. ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್ (David Warner) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸುವ ಮೂಲಕ ಡೆಲ್ಲಿ ತಂಡಕ್ಕೆ 175 ರನ್ಗಳ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ 20 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 151 ರನ್ ಗಳಿಸುವ ಮೂಲಕ 23 ರನ್ಗಳಿಂದ ಸೋಲನ್ನಪ್ಪಿತು. ಈ ಮೂಲಕ ಆರ್ಸಿಬಿ ತಂಡ ತವರಿನಲ್ಲಿ ಮತ್ತೊಂದು ಗೆಲುವು ಸಾಧಿಸಿತು. ಈ ಮೂಲಕ ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ 2 ಗೆಲುವಿನೊಂದಿಗೆ 4 ಅಂಕ ಗಳಿಸಿ 7ನೇ ಸ್ಥಾನಕ್ಕೇರಿದೆ.
ಬ್ಯಾಟಿಂಗ್ನಲ್ಲಿ ಎಡವಿದ ಡೆಲ್ಲಿ:
ಇನ್ನು, ಡೆಲ್ಲಿ ತಂಡ 20 ಓವರ್ಗಳಿಗೆ 9 ವಿಕೆಟ್ ನಷ್ಟಕ್ಕೆ 151 ರನ್ ಗಳಿಸಲಷ್ಟೇ ಶಕ್ತವಾಯಿತು. ಡಿಸಿ ಪರ, ನಾಯಕ ಡೇವಿಡ್ ವಾರ್ನರ್ 19 ರನ್, ಪೃಥ್ವಿ ಶಾ ಶೂನ್ಯ, ಮಿಚೆಲ್ ಮಾರ್ಷ್ ಶೂನ್ಯ, ಯಶ್ ಧುಲ್ 1 ರನ್, ಮನೀಶ್ ಪಾಂಡೆ 50 ರನ್, ಅಕ್ಷರ್ ಪಟೇಲ್ 21 ರನ್, ಲಲಿತ್ ಯಾದವ್ 4 ರನ್, ಅಮನ್ ಹಕೀಮ್ ಖಾನ್ 18 ರನ್, ಎನ್ರಿಚ್ ನಾರ್ಟ್ಜೆ 23 ರನ್, ಅಭಿಷೇಕ್ ಪೊರೆಲ್ 5 ರನ್ ಮತ್ತು ಕುಲದೀಪ್ ಯಾದವ್ 7 ರನ್ ಗಳಿಸಿದರು.
Back to winning ways 🙌@RCBTweets register a 23-run win at home and clinch their second win of the season 👏👏
Scorecard ▶️ https://t.co/xb3InbFbrg #TATAIPL | #RCBvDC pic.twitter.com/5lE5gWQm8H
— IndianPremierLeague (@IPL) April 15, 2023
ಸ್ಪರ್ದಾತ್ಮಕ ಟಾರ್ಗೆಟ್ ನೀಡಿದರೂ ಇಂದು ಆರ್ಸಿಬಿ ಬೌಲರ್ಸ್ ಉತ್ತಮ ಪ್ರದರ್ಶನ ನೀಡಿದರು. ಅದರಲ್ಲಿಯೂ ಚೊಚ್ಚಲ ಪಂದ್ಯದಲ್ಲಿಯೇ ಕನ್ನಡಿಗ ವೈಶಾಖ್ ವಿಜಯ್ ಕುಮಾರ್ 4 ಓವರ್ ಮಾಡಿ 20 ರನ್ ನೀಡಿ ಪ್ರಮುಖ 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಮೊಹಮ್ಮದ್ ಸಿರಾಜ್ ಸಹ 4 ಓವರ್ಗೆ 23 ರನ್ ನೀಡಿ 2 ವಿಕೆಟ್ ಪಡೆದರು.
ಕೊಹ್ಲಿ ಉತ್ತಮ ಬ್ಯಾಟಿಂಗ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ 34 ಎಸೆತದಲ್ಲಿ 6 ಬೌಂಡರಿ ಮತ್ತು 1 ಸಿಕ್ಸ್ ಮೂಲಕ ಆಕರ್ಷಕ 50 ರನ್ ಗಳಿಸಿದರು. ಉಳದಂತೆ ನಾಯಕ ಫಾಫ್ ಡುಪ್ಲೇಸಿಸ್ 22 ರನ್, ಮಹಿಪಾಲ್ ಲೊಮ್ರೋರ್ 26 ರನ್, ಗ್ಲೇನ್ ಮ್ಯಾಕ್ಸ್‌ವೆಲ್ 24 ರನ್, ಹರ್ಷಲ್ ಪಟೇಲ್ 6 ರನ್, ದಿನೇಶ್ ಕಾರ್ತಿಕ್ ಶೂನ್ಯ, ಅನುಜ್ ರಾವತ್ 15 ರನ್ ಮತ್ತು ಶಹಬಾಜ್ ಅಹ್ಮದ್ 18 ರನ್ ಗಳಿಸಿದರು.
ಬೌಲಿಂಗ್ನಲ್ಲಿ ಮಿಂಚಿದ ಡೆಲ್ಲಿ ಬಾಯ್ಸ್:
ಡೆಲ್ಲಿ ಪರ ಕುಲದೀಪ್ ಯಾದವ್ ಸತತ 2 ವಿಕೆಟ್ ತೆಗೆಯುವ ಮೂಲಕ ಉತ್ತಮ ಬ್ರೇಕ್ ಥ್ರೂ ನೀಡಿದರು. ಮೊದಲ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಎರಡನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಖಾತೆ ತೆರೆಯದೆ ವಾಪಸ್ ಕಳುಹಿಸಿದರು. ತಪ್ಪಿಸಿದರು ಮತ್ತು ವಿಕೆಟ್ ಕಳೆದುಕೊಂಡರು. ಇನ್ನು, ಅಕ್ಷರ್ ಪಟೇಲ್ 1 ವಿಕೆಟ್, ಲಿಲಿತ್ ಯಾದವ್ 1 ವಿಕೆಟ್, ಮಿಚೆಲ್ ಮಾರ್ಷಲ್ 2 ವಿಕೆಟ್ ಮತ್ತು ಕುಲ್ದೀಪ್ ಯಾದವ್ 2 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ