ಐಪಿಎಲ್ನ 20ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು (DC vs RCB ) ತಂಡವನ್ನು ಎದುರಿಸುತ್ತಿದೆ. ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಡೇವಿಡ್ ವಾರ್ನರ್ (David Warner) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ರೋವ್‌ಮನ್ ಪೊವೆಲ್ ಬದಲಿಗೆ ಮಿಚೆಲ್ ಮಾರ್ಷ್ ಡೆಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ, ಬೆಂಗಳೂರು ತಂಡವು ಡೇವಿಡ್ ವಿಲ್ಲಿ ಬದಲಿಗೆ ವನಿಂದು ಹಸರಂಗ (Wanindu Hasaranga) ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಇರಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು ನಿಗದಿರ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸುವ ಮೂಲಕ ಡೆಲ್ಲಿ ತಂಡಕ್ಕೆ 175 ರನ್ಗಳ ಟಾರ್ಗೆಟ್ ನೀಡಿದೆ.
ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. ಬೆಂಗಳೂರು ತಂಡದ ಪರ ವಿರಾಟ್ ಕೊಹ್ಲಿ 34 ಎಸೆತದಲ್ಲಿ 6 ಬೌಂಡರಿ ಮತ್ತು 1 ಸಿಕ್ಸ್ ಮೂಲಕ ಆಕರ್ಷಕ 50 ರನ್ ಗಳಿಸಿದರು. ಉಳದಂತೆ ನಾಯಕ ಫಾಫ್ ಡುಪ್ಲೇಸಿಸ್ 22 ರನ್, ಮಹಿಪಾಲ್ ಲೊಮ್ರೋರ್ 26 ರನ್, ಗ್ಲೇನ್ ಮ್ಯಾಕ್ಸ್‌ವೆಲ್ 24 ರನ್, ಹರ್ಷಲ್ ಪಟೇಲ್ 6 ರನ್, ದಿನೇಶ್ ಕಾರ್ತಿಕ್ ಶೂನ್ಯ, ಅನುಜ್ ರಾವತ್ 15 ರನ್ ಮತ್ತು ಶಹಬಾಜ್ ಅಹ್ಮದ್ 18 ರನ್ ಗಳಿಸಿದರು.
A collective effort by the @DelhiCapitals bowlers helps restrict #RCB to 174-6 🙌
Virat Kohli with another 5️⃣0️⃣
Mitchell Marsh and Kuldeep Yadav with 2️⃣ wickets each 👏
Scorecard ▶️ https://t.co/xb3InbFbrg #TATAIPL | #RCBvDC pic.twitter.com/g7AddC71wt
— IndianPremierLeague (@IPL) April 15, 2023
ಟಾಸ್ ಗೆದ್ದು ಬೌಲಿಂಗ್ ಆರಂಭಿಸಿದ ಡೆಲ್ಲಿ ತಂಡ ಆರ್ಸಿಬಿ ವಿರಿದ್ಧ ಸಂಘಟಿತ ದಾಳಿ ನಡೆಸಿತು. ಡೆಲ್ಲಿ ಪರ ಕುಲದೀಪ್ ಯಾದವ್ ಸತತ 2 ವಿಕೆಟ್ ತೆಗೆಯುವ ಮೂಲಕ ಉತ್ತಮ ಬ್ರೇಕ್ ಥ್ರೂ ನೀಡಿದರು. ಮೊದಲ ಎಸೆತದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಎರಡನೇ ಎಸೆತದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಖಾತೆ ತೆರೆಯದೆ ವಾಪಸ್ ಕಳುಹಿಸಿದರು. ತಪ್ಪಿಸಿದರು ಮತ್ತು ವಿಕೆಟ್ ಕಳೆದುಕೊಂಡರು. ಇನ್ನು, ಅಕ್ಷರ್ ಪಟೇಲ್ 1 ವಿಕೆಟ್, ಲಿಲಿತ್ ಯಾದವ್ 1 ವಿಕೆಟ್, ಮಿಚೆಲ್ ಮಾರ್ಷಲ್ 2 ವಿಕೆಟ್ ಮತ್ತು ಕುಲ್ದೀಪ್ ಯಾದವ್ 2 ವಿಕೆಟ್ ಪಡೆದರು.
ಇದನ್ನೂ ಓದಿ: RCB vs DC: ಆರ್ಸಿಬಿ ತಂಡದ ಪರ ಕಣಕ್ಕಿಳಿದ ಕನ್ನಡಿಗ, ಐಪಿಎಲ್ಗೆ ಪಾದಾರ್ಪಣೆ ಮಾಡಿದ ವೈಶಾಖ್
ಐಪಿಎಲ್ ಅಂಕಪಟ್ಟಿ:
ಇನ್ನು, ಪಂದ್ಯಕ್ಕೂ ಮುನ್ನ ಐಪಿಎಲ್ 2023 ಅಂಕಪಟ್ಟಿ ನೋಡುವುದಾದರೆ, ರಾಜಸ್ಥಾನ್ ರಾಯಲ್ಸ್ ತಂಡವು 6 ಅಂಕಗಳೊಮಂದಿಗೆ ಅಗ್ರಸ್ಥಾನದಲ್ಲಿದೆ. ಬಳಿಕ ಕ್ರಮವಾಗಿ ಲಕ್ನೋ, ಗುಜರಾತ್, ಕೋಲ್ಕತ್ತಾ, ಚೆನ್ನೈ , ಪಂಜಾಬ್, ಹೈದರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಮತ್ತು ಕೊನೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿವೆ. ಇಂದಿನ ಪಂದ್ಯ ಆರ್ಸಿಬಿ ಗೆದ್ದರೆ, 8ನೇ ಸ್ಥಾನದಿಂದ 6 ಅಥವಾ 7ನೇ ಸ್ಥಾನಕ್ಕೇರಲಿದೆ.
ಆರ್ಸಿಬಿ - ಡೆಲ್ಲಿ ಪ್ಲೇಯಿಂಗ್ 11:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (C), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ವನಿಂದು ಹಸರಂಗ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವಿಜಯ್‌ಕುಮಾರ್ ವೈಶಾಕ್.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (C), ಮಿಚೆಲ್ ಮಾರ್ಷ್, ಯಶ್ ಧುಲ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಅಭಿಷೇಕ್ ಪೊರೆಲ್ (WK), ಕುಲದೀಪ್ ಯಾದವ್, ಎನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ