• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • RCB vs DC: ಟಾಸ್​ ಗೆದ್ದ ಡೆಲ್ಲಿ ಬೌಲಿಂಗ್​ ಆಯ್ಕೆ, ಕೊನೆಗೂ ರಣಬೇಟೆಗಾರನನ್ನು ಗ್ರೌಂಡ್​ಗೆ ಇಳಿಸಿದ ಆರ್​ಸಿಬಿ

RCB vs DC: ಟಾಸ್​ ಗೆದ್ದ ಡೆಲ್ಲಿ ಬೌಲಿಂಗ್​ ಆಯ್ಕೆ, ಕೊನೆಗೂ ರಣಬೇಟೆಗಾರನನ್ನು ಗ್ರೌಂಡ್​ಗೆ ಇಳಿಸಿದ ಆರ್​ಸಿಬಿ

ಬೆಂಗಳೂರು vs ಡೆಲ್ಲಿ

ಬೆಂಗಳೂರು vs ಡೆಲ್ಲಿ

DC vs RCB: ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್​ ವಾರ್ನರ್​ ಮೊದಲು ಬೌಲಿಂಗ್​ ಆಯ್ಕೆ ಮಾಡಿದ್ದು, ಆರ್​ಸಿಬಿ ಬ್ಯಾಟಿಂಗ್​ ಆರಂಭಿಸಲಿದೆ.

 • Share this:

ಐಪಿಎಲ್ 2023ರ (IPL 2023) 20ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (RCB sv DC) ಸೆಣಸಾಡುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium) ಆರಂಭವಾಗಿದೆ. ಬೆಂಗಳೂರಿನ ತಂಡ, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್‌ಗಳಿಂದ ಅಬ್ಬರಿಸಿ ಗೆದ್ದರೆ, ಬಳಿಕ ಸತತ 2 ಪಂದ್ಯದಲ್ಲಿ ಸೋತಿರುವ ಕಾರಣ ಇಂದಿನ ಪಂದ್ಯವನ್ನು ಬೆಂಗಳೂರು ತಂಡ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್​ ವಾರ್ನರ್​ ಮೊದಲು ಬೌಲಿಂಗ್​ ಆಯ್ಕೆ ಮಾಡಿದ್ದು, ಆರ್​ಸಿಬಿ ಬ್ಯಾಟಿಂಗ್​ ಆರಂಭಿಸಲಿದೆ.


ಉಭಯ ತಂಡಗಳಲ್ಲಿ 1-1 ಬದಲಾವಣೆ:


ಇಂದಿನ ಪಂದ್ಯದಲ್ಲಿ ಉಭಯ ತಂಡಗಳು ಒಂದೊಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ರೋವ್‌ಮನ್ ಪೊವೆಲ್ ಬದಲಿಗೆ ಮಿಚೆಲ್ ಮಾರ್ಷ್ ಸ್ಥಾನ ಪಡೆದಿದ್ದಾರೆ. ಮತ್ತೊಂದೆಡೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೇವಿಡ್ ವಿಲ್ಲಿ ಬದಲಿಗೆ ವನಿಂದು ಹಸರಂಗ ಅವರನ್ನು ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಣಕ್ಕಿಳಿಸುತ್ತಿದೆ.



ಪಿಚ್ ವರದಿ:


ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಟ್ರ್ಯಾಕ್‌ ಬ್ಯಾಟ್ಸ್​ಮನ್​ಗಳಿಗೆ ಹೆಚ್ಚು ಸಹಾಯಕವಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ ಮತ್ತು ಬ್ಯಾಟರ್‌ಗಳು ತಮ್ಮ ಇನ್ನಿಂಗ್ಸ್‌ನ ಆರಂಭದಿಂದಲೇ ಲೈನ್ ಮೂಲಕ ಉತ್ತಮ ಹೊಡೆತಗಳನ್ನು ಹೊಡೆಯಬಹುದಾಗಿದೆ. ಇದು ಬ್ಯಾಟರ್‌ಗಳ ಸ್ವರ್ಗ ಮತ್ತು ಬೌಲರ್‌ಗಳ ದುಃಸ್ವಪ್ನವಾದ ಮೈದಾನ ಎಂದು ಹೇಳಲಾಗುತ್ತದೆ. ಆದರೆ ಇತ್ತೀಚೆಗೆ ವಿಕೆಟ್‌ಗೆ ಕಪ್ಪು ಮಣ್ಣನ್ನು ಬಳಸಲಾಗುತ್ತಿದ್ದು, ವಿಕೆಟ್‌ಗಳು ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತಿದೆ.


ಇದನ್ನೂ ಓದಿ: RCB vs DC: ಡೆಲ್ಲಿ-ಬೆಂಗಳೂರು ಪಂದ್ಯ, ಚಿನ್ನಸ್ವಾಮಿ ಪಿಚ್ ಯಾರಿಗೆ ಸಹಕಾರಿ? ಆರ್​ಸಿಬಿ ದಾಖಲೆ ಹೇಗಿದೆ?


ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ20ಯಲ್ಲಿ ಚೇಸಿಂಗ್ ತಂಡ ಹೆಚ್ಚು ಬಾರಿ ಗೆಲುವು ದಾಖಲಿಸಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಈವರೆಗೆ ಒಟ್ಟು 83 ಐಪಿಎಲ್ ಪಂದ್ಯಗಳು ನಡೆದಿದ್ದು, ಮೊದಲು ಬ್ಯಾಟ್ ಮಾಡಿದ ತಂಡ 33 ಬಾರಿ ಗೆದ್ದರೆ, 2ನೇ ಬ್ಯಾಟ್​ ಮಾಡಿದ ತಂಡ 46 ಬಾರಿ ಗೆದ್ದಿದೆ. 4 ಪಂದ್ಯಗಳ ಫಲಿತಾಂಶ ಬಂದಿಲ್ಲ. ಬೆಂಗಳೂರಿನಲ್ಲಿ ತಾಪಮಾನವು 21 ರಿಂದ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಮಳೆಯ ನಿರೀಕ್ಷೆಯಿಲ್ಲ.


ಹೆಡ್ ಟು ಹೆಡ್: 


ಆರ್‌ಸಿಬಿ ಮತ್ತು ಡಿಸಿ ನಡುವೆ ಒಟ್ಟು 29 ಬಾರಿ ಮುಖಾಮುಖಿಗಳಾಗಿವೆ. RCB 18 ಪಂದ್ಯಗಳನ್ನು ಗೆದ್ದಿದೆ ಮತ್ತು DC ಒಂದು ಪಂದ್ಯವನ್ನು ಮಳೆಯಿಂದ ರದ್ದಾಗಿತ್ತು. 10 ಪಂದ್ಯಗಳನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ದಾಖಲಿಸಿದೆ.


ಐಪಿಎಲ್ ಅಂಕಪಟ್ಟಿ:


ಇನ್ನು, ಪಂದ್ಯಕ್ಕೂ ಮುನ್ನ ಐಪಿಎಲ್ 2023 ಅಂಕಪಟ್ಟಿ ನೋಡುವುದಾದರೆ, ರಾಜಸ್ಥಾನ್​ ರಾಯಲ್ಸ್ ತಂಡವು 6 ಅಂಕಗಳೊಮಂದಿಗೆ ಅಗ್ರಸ್ಥಾನದಲ್ಲಿದೆ. ಬಳಿಕ ಕ್ರಮವಾಗಿ ಲಕ್ನೋ, ಗುಜರಾತ್​, ಕೋಲ್ಕತ್ತಾ, ಚೆನ್ನೈ , ಪಂಜಾಬ್​, ಹೈದರಾಬಾದ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಮುಂಬೈ ಮತ್ತು ಕೊನೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿವೆ. ಇಂದಿನ ಪಂದ್ಯ ಆರ್​ಸಿಬಿ ಗೆದ್ದರೆ, 8ನೇ ಸ್ಥಾನದಿಂದ 6 ಅಥವಾ 7ನೇ ಸ್ಥಾನಕ್ಕೇರಲಿದೆ.


ಆರ್​ಸಿಬಿ - ಡೆಲ್ಲಿ ಪ್ಲೇಯಿಂಗ್​ 11:


ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇಯಿಂಗ್​ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (C), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ವನಿಂದು ಹಸರಂಗ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್, ವಿಜಯ್‌ಕುಮಾರ್ ವೈಶಾಕ್.

top videos


  ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್​ 11: ಡೇವಿಡ್ ವಾರ್ನರ್ (C), ಮಿಚೆಲ್ ಮಾರ್ಷ್, ಯಶ್ ಧುಲ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ಲಲಿತ್ ಯಾದವ್, ಅಭಿಷೇಕ್ ಪೊರೆಲ್ (WK), ಕುಲದೀಪ್ ಯಾದವ್, ಎನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್.

  First published: