ಚೆನ್ನೈ ಮತ್ತು ಆರ್‌ಸಿಬಿ (RCB vs CSK) ತಂಡಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium) ಸೆಣಸಾಡುತ್ತಿದೆ. ಈಗಾಗಲೇ ಮೊದಲು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್‌ಸಿಬಿ ನಾಯಕ ಫಾಫ್ ಡು ಪ್ಲೇಸಿಸ್ ಆಲೋಚನೆಯನ್ನು ಚೆನ್ನೈ ಬ್ಯಾಟ್ಸ್ಮನ್ಸ್ ತಲೆಕೆಳಗೆ ಮಾಡಿದರು. ಚೆನ್ನೈ ಪರ ಡ್ವೇನ್ ಕಾನ್ವೆ (Devon Conway) ಮತ್ತು ಶಿವಂ ದುಭೆ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಆರ್‌ಸಿಬಿ ಬೌಲರ್ಗಳ ಬೆವರಿಳಿಸಿದರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸುವ ಮೂಲಕ ರಾಯಲ್ ಚಾಲೆಂಜರ್ಸ್ ತಂಡಕ್ಕೆ 227 ರನ್ಗಳ ಬಿಗ್ ಟಾರ್ಗೆಟ್ ನೀಡಿದರು.
ಬೆಂಗಳೂರಲ್ಲಿ ಅಬ್ಬರಿಸಿದ ಧೋನಿ ಬಾಯ್ಸ್:
ಇನ್ನು, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ, 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಇಂದು ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಕೇವಲ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಬಳಿಕ ಡೆವೊನ್ ಕಾನ್ವೆ ಅಬ್ಬರ ಆರಂಭವಾಯಿತು. ಅವರು 45 ಎಸೆತದಲ್ಲಿ 6 ಸಿಕ್ಸ್ ಮತ್ತು 6 ಫೋರ್ ಮೂಲಕ ಬರೋಬ್ಬರಿ 83 ರನ್ ಗಳಿಸಿದರು. ಅವರ ಜೊತೆ ಶಿವಂ ದುಬೆ ಸಹ ಕೇವಲ 27 ಎಸೆತದಲ್ಲಿ 5 ಸಿಕ್ಸ್ ಮತ್ತು 2 ಪೋರ್ ಮೂಲಕ 52 ರನ್ ಸಿಡಿಸಿದರು. ಉಳಿದಂತೆ ಅಜಿಂಕ್ಯ ರಹಾನೆ 20 ಎಸೆತದಲ್ಲಿ 37 ರನ್, ಅಂಬಟಿ ರಾಯುಡು 14 ರನ್, ರವೀಂದ್ರ ಜಡೇಜಾ 10 ರನ್, ಮೋಯಿನ್ ಅಲಿ 19 ರನ್ ಮತ್ತು ಕೊನೆಯಲ್ಲಿ ಬಂದ ನಾಯಕ ಧೋನಿ 1 ರನ್ ಗಳಿಸಿದರು.
Innings Break!
It was raining boundaries in the first innings as @ChennaiIPL post a mighty total of 226/6!
Another high-scoring thriller on the cards? We will find out soon 😉
Scorecard ▶️ https://t.co/nvoo5Sl96y #TATAIPL | #RCBvCSK pic.twitter.com/DpQbs56QQj
— IndianPremierLeague (@IPL) April 17, 2023
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆರ್‌ಸಿಬಿ ಲೆಕ್ಕಾಚಾರ ತಲೆಕೆಳಗಾಗಿತ್ತು. ಚೆನ್ನೈ ಬ್ಯಾಟ್ಸ್ಮನ್ಸ್ಗಳನ್ನು ಕಟ್ಟಿಹಾಕುವಲ್ಲಿ ಯಾರೊಬ್ಬರ ಹತ್ತಿರವೂ ಸಾಧ್ಯವಾಗಲಿಲ್ಲ. ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 30 ರನ್ ನೀಡಿ 1 ವಿಕೆಟ್, ವಾರ್ನೆ ಪರ್ನೆಲ್ 48 ರನ್ ನೀಡಿ 1 ವಿಕೆಟ್, ವೈಶಾಕ್ ವಿಜಯ್‌ಕುಮಾರ್ 62 ರನ್ ನೀಡಿ 1 ವಿಕೆಟ್, ಹಸರಂಗ ಮತ್ತು ಹರ್ಷಲ್ ಪಟೇಲ್ ಮತ್ತು ಗ್ಲೇನ್ ಮ್ಯಾಕ್ಸ್‌ವೆಲ್ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: RCB vs CSK Rivalry: ಮತ್ತೆ ಶುರುವಾಯ್ತು ಆರ್‌ಸಿಬಿ-ಸಿಎಸ್ಕೆ ಫ್ಯಾನ್ಸ್ ವಾರ್, ಪ್ರತಿ ಬಾರಿ ಹೀಗಾಗೋದ್ಯಾಕೆ?
ಐಪಿಎಲ್ 2023 ಅಂಕಪಟ್ಟಿ:
ಇನ್ನು, ಐಪಿಎಲ್ 2023ರ 16ನೇ ಸೀಸನ್ನ ಅಂಕಪಟ್ಟಿಯಲ್ಲಿ 5 ಪಂದ್ಯದಲ್ಲಿ 4 ಪಂದ್ಯ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ಅಗ್ರಸ್ಥಾನದಲ್ಲಿದೆ. ಚೆನ್ನೈ ಮತ್ತು ಬೆಂಗಳೂರು ತಂಡಗಳು ಆಡಿರುವ 4 ಪಂದ್ಯದಲ್ಲಿ 2ರಲ್ಲಿ ಗೆದ್ದು 2ರಲ್ಲಿ ಸೋತು ಕ್ರಮವಾಗಿ ಸಿಎಸ್ಕೆ 6ನೇ ಸ್ಥಾನ ಮತ್ತು ಆರ್‌ಸಿಬಿ 7ನೇ ಸ್ಥಾನದಲ್ಲಿದೆ. ಹೀಗಾಗಿ ಇಂದು ಗೆದ್ದ ತಂಡ ಅಂಕಪಟ್ಟಿಯಲ್ಲಿ ಮೇಲೇರಲಿದೆ.
ಸಿಎಸ್ಕೆ - ಆರ್‌ಸಿಬಿ ಪ್ಲೇಯಿಂಗ್ 11:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ವಿಜಯ್‌ಕುಮಾರ್ ವೈಶಾಕ್, ಮೊಹಮ್ಮದ್ ಸಿರಾಜ್.
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (w/c),ಮತೀಶ ಪತಿರಾನ, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ