ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M. Chinnaswamy Stadium) ಚೆನ್ನೈ ಮತ್ತು ಆರ್‌ಸಿಬಿ (RCB vs CSK) ತಂಡಗಳು ಮುಖಾಮುಖಿ ಆದವು. ಮೊದಲು ಟಾಸ್ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೇಸಿಸ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಚೆನ್ನೈ ಪರ ಡ್ವೇನ್ ಕಾನ್ವೆ (Devon Conway) ಮತ್ತು ಶಿವಂ ದುಭೆ ಭರ್ಜರಿ ಬ್ಯಾಟಿಂಗ್ ಮಾಡಿದರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಆರ್‌ಸಿಬಿ ತಂಡ ನಿಗದಿತ 20 ಓವರ್ಗಳಿಗೆ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸುವ ಮೂಲಕ 8 ರನ್ ಗಳಿಂದ ಸೋಲನ್ನಪ್ಪಿತು.
ಮ್ಯಾಕ್ಸ್ವೆಲ್ -ಫಾಫ್ ಆಟ ವ್ಯರ್ಥ:
ಇನ್ನು, ಚೆನ್ನೈ ನೀಡಿದ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ತಂಡ 20 ಓವರ್ಗಳಿಗೆ 8 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಅನಿರಿಕ್ಷಿತವಾಗಿ ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು. ಅವರು ಕೇವಲ 6 ರನ್ ಗಳಿಸಿ ಫೇವೆಲಿಯನ್ ತಲುಪಿದರು. ಆದರೆ ಬಳಿಕ ಮಹಿಪಾಲ್ ಲೊಮ್ರೋರಾ ಶೂನ್ಯಕ್ಕೆ ಔಟ್ ಆದರು. ನಂತರ ನಾಯಕ ಫಾಫ್ ಡು ಪ್ಲೇಸಿಸ್ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ ಅಬ್ಬರಿಸುವ ಮೂಲಕ ಗೆಲುವಿನ ಆಸೆ ಚಿಗುರಿಸಿದರು. ಡುಪ್ಲೇಸಿಸ್ 33 ಎಸೆಯದಲ್ಲಿ 4 ಸಿಕ್ಸ್ ಮತ್ತು 5 ಪೋರ್ ಮೂಲಕ 62 ರನ್ ಗಳಿಸಿದರು. ಅದರಂತೆ ಗ್ಲೇನ್ ಮ್ಯಾಕ್ಸ್ವೆಲ್ ಸಹ 36 ಎಸೆತದಲ್ಲಿ 8 ಸಿಕ್ಸ್ ಮತ್ತು 3 ಫೋರ್ ಮೂಲಕ 76 ರನ್ ಗಳಿಸಿದರು. ಉಳದಿಂತೆ ಶಾಹಬಾಜ್ ಅಹ್ಮದ್ 12 ರನ್, ದಿನೇಶ್ ಕಾರ್ತಿಕ್ 28 ರನ್, ವಾರ್ನೆ ಪರ್ನೇಲ್ 2 ರನ್ ಗಳಿಸಿದರು.
ಚೆನ್ನೈ ಸಂಘಟಿತ ಬೌಲಿಂಗ್ ದಾಳಿ:
ಆರ್‌ಸಿಬಿಗೆ ಬಿಗ್ ಟಾರ್ಗೆಟ್ ನೀಡಿದರೂ ಚೆನ್ನೈ ಬೌಲರ್ಸ್ ಆರಂಭದಲ್ಲಿ ಉತ್ತಮ ಸ್ಪೆಲ್ ಮಾಡಿದರು. ಆದರೆ ಬಳಿಕ ಫಾಫ್ ಮತ್ತು ಮ್ಯಾಕ್ಸ್ವೆಲ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಚೆನ್ನೈ ಪರ ಇಂದು ತುಷಾರ್ ದೇಶಪಾಂಡೆ 4 ಓವರ್ ಮಾಡಿ 45 ರನ್ ನೀಡಿ ಪ್ರಮುಖ 3 ವಿಕೆಟ್ ಪಡೆದು ಮಿಂಚಿದರು. ಉಳದಂತೆ ಆಕಾಶ್ ಸಿಂಗ್ 1 ವಿಕೆಟ್, ಮಹೀಶಾ ತೀಕ್ಷಣ್ 1 ವಿಕೆಟ್, ಮತೇಶಾ ಪ್ರತಿರಣ್ 2 ವಿಕೆಟ್ ಮತ್ತು ಮೋಯಿನ್ ಅಲಿ 1 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ: IPL 2023, RCB vs CSK: ಬೆಂಗಳೂರಲ್ಲಿ ಮೊಳಗಿದ ಧೋನಿ ಪರ ಘೋಷಣೆ, ಆರ್‌ಸಿಬಿಗೆ ಸಪೋರ್ಟ್ ಮಾಡೋಕೆ ಬಂದ್ರು ಶಿವಣ್ಣ
ಕಾನ್ವೆ - ದುಬೆ ಭರ್ಜರಿ ಬ್ಯಾಟಿಂಗ್:
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಇಂದು ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಕೇವಲ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಬಳಿಕ ಡೆವೊನ್ ಕಾನ್ವೆ ಅಬ್ಬರ ಆರಂಭವಾಯಿತು. ಅವರು 45 ಎಸೆತದಲ್ಲಿ 6 ಸಿಕ್ಸ್ ಮತ್ತು 6 ಫೋರ್ ಮೂಲಕ ಬರೋಬ್ಬರಿ 83 ರನ್ ಗಳಿಸಿದರು. ಅವರ ಜೊತೆ ಶಿವಂ ದುಬೆ ಸಹ ಕೇವಲ 27 ಎಸೆತದಲ್ಲಿ 5 ಸಿಕ್ಸ್ ಮತ್ತು 2 ಪೋರ್ ಮೂಲಕ 52 ರನ್ ಸಿಡಿಸಿದರು. ಉಳಿದಂತೆ ಅಜಿಂಕ್ಯ ರಹಾನೆ 20 ಎಸೆತದಲ್ಲಿ 37 ರನ್, ಅಂಬಟಿ ರಾಯುಡು 14 ರನ್, ರವೀಂದ್ರ ಜಡೇಜಾ 10 ರನ್, ಮೋಯಿನ್ ಅಲಿ 19 ರನ್ ಮತ್ತು ಕೊನೆಯಲ್ಲಿ ಬಂದ ನಾಯಕ ಧೋನಿ 1 ರನ್ ಗಳಿಸಿದರು.
ಮತ್ತೆ ಬೌಲಿಂಗ್ನಲ್ಲಿ ಎಡವಿದ ಫಾಫ್ ಬಾಯ್ಸ್:
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಆರ್‌ಸಿಬಿ ಲೆಕ್ಕಾಚಾರ ತಲೆಕೆಳಗಾಗಿತ್ತು. ಚೆನ್ನೈ ಬ್ಯಾಟ್ಸ್ಮನ್ಸ್ಗಳನ್ನು ಕಟ್ಟಿಹಾಕುವಲ್ಲಿ ಬೆಂಗಳೂರು ತಂಡ ವಿಫಲವಾಯಿತು. ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 30 ರನ್ ನೀಡಿ 1 ವಿಕೆಟ್, ವಾರ್ನೆ ಪರ್ನೆಲ್ 48 ರನ್ ನೀಡಿ 1 ವಿಕೆಟ್, ವೈಶಾಕ್ ವಿಜಯ್ಕುಮಾರ್ 62 ರನ್ ನೀಡಿ 1 ವಿಕೆಟ್, ಹಸರಂಗ ಮತ್ತು ಹರ್ಷಲ್ ಪಟೇಲ್ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ ತಲಾ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ