• ಹೋಂ
 • »
 • ನ್ಯೂಸ್
 • »
 • ಕ್ರೀಡೆ
 • »
 • IPL 2023: ಐಪಿಎಲ್​ 16ನೇ ಸೀಸನ್​ಗೆ ದಿನಗಣನೆ; ಇಲ್ಲಿದೆ RCB ತಂಡದ ಸಂಪೂರ್ಣ ವೇಳಾಪಟ್ಟಿ, ತಂಡದ ವಿವರ

IPL 2023: ಐಪಿಎಲ್​ 16ನೇ ಸೀಸನ್​ಗೆ ದಿನಗಣನೆ; ಇಲ್ಲಿದೆ RCB ತಂಡದ ಸಂಪೂರ್ಣ ವೇಳಾಪಟ್ಟಿ, ತಂಡದ ವಿವರ

RCB Team

RCB Team

RCB 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡ ಮುಂಬೈ ಎದುರು ಎಪ್ರಿಲ್​ 2ರಂದು ತನ್ನ ಮೊದಲ ಪಂದ್ಯವಾಡಲಿದೆ. ಹಾಗಿದ್ದರೆ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ ನೋಡಿ.

 • Share this:

ಮಾರ್ಚ್ 31ರಿಂದ ಐಪಿಎಲ್​ 16ನೇ (IPl 2023) ಸೀಸನ್​ ಆರಂಭವಾಗಲದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಗುಜರಾತ್ ಟೈಟನ್ಸ್ ಮತ್ತು ಚೆನ್ನೈ ಸೂಪರ್​ ಕಿಂಗ್ಸ್ (GT vs CSk) ಸೆಣಸಾಡಲಿದೆ. ಬರೋಬ್ಬರಿ 4 ವರ್ಷಗಳ ಬಳಿಕ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಸಹ ಇರಲಿದ್ದಾರೆ ಎನ್ನಲಾಗಿದೆ. ಈ ಮೆಗಾ ಟೂರ್ನಿಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ತಂಡ ಭರ್ಜರಿ ತಯಾರಿ ಆರಂಬಿಸಿದೆ. ಈಗಾಗಲೇ ತಂಡದ ಎಲ್ಲಾ ಆಟಗಾರರು ತಂಡವನ್ನು ಸೇರಿಕೊಂಡಿದ್ದು, ಈ ಬಾರಿಯಾದರೂ ಕಪ್​ ಗೆಲ್ಲಲೇ ಬೇಕೆಂಬ ಹಠದಿಂದ ನೆಟ್ಸ್​ನಲ್ಲಿ ಭರ್ಜರಿ ಬೆವರು ಹರಿಸುತ್ತಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​ಸಿಬಿ ತಂಡ ಮುಂಬೈ ಎದುರು ಎಪ್ರಿಲ್​ 2ರಂದು ತನ್ನ ಮೊದಲ ಪಂದ್ಯವಾಡಲಿದೆ. ಹಾಗಿದ್ದರೆ ಬೆಂಗಳೂರು ತಂಡದ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ ನೋಡಿ.


ಆರ್​ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ:


ಏಪ್ರಿಲ್ 2 - RCB vs MI - ಚಿನ್ನಸ್ವಾಮಿ ಕ್ರೀಡಾಂಗಣ (ಸಂಜೆ 7:30)
ಏಪ್ರಿಲ್ 6 - KKR vs RCB - ಕೋಲ್ಕತ್ತಾ (ಸಂಜೆ 7:30)
ಏಪ್ರಿಲ್ 10 - RCB vs LSG - ಚಿನ್ನಸ್ವಾಮಿ ಕ್ರೀಡಾಂಗಣ (ಮಧ್ಯಾಹ್ನ 3:30)
ಏಪ್ರಿಲ್ 15 - RCB vs DC - ಬೆಂಗಳೂರು (ಮಧ್ಯಾಹ್ನ 3:30)
ಏಪ್ರಿಲ್ 17 - RCB vs CSK - ಬೆಂಗಳೂರು (ಸಂಜೆ 7:30)
ಏಪ್ರಿಲ್ 20 - PBKS vs RCB - ಮೊಹಾಲಿ (ಮಧ್ಯಾಹ್ನ 3:30)
ಏಪ್ರಿಲ್ 23 - RCB vs RR - ಬೆಂಗಳೂರು (ಮಧ್ಯಾಹ್ನ 3:30)


ಏಪ್ರಿಲ್ 26 - RCB vs KKR - ಬೆಂಗಳೂರು (ಸಂಜೆ 7:30)
ಮೇ 1 - LSG vs RCB ಲಕ್ನೋ (ಸಂಜೆ 7:30)
ಮೇ 6 - DC vs RCB - ದೆಹಲಿ (ಸಂಜೆ 7:30)
ಮೇ 9 - MI vs RCB - ಮುಂಬೈ (ಸಂಜೆ 7:30)
ಮೇ 14 - RR vs RCB - ಜೈಪುರ (ಮಧ್ಯಾಹ್ನ 3:30)
ಮೇ 18 - SRH vs RCB - ಹೈದರಾಬಾದ್ (ಸಂಜೆ 7:30)
ಮೇ 21 - RCB vs GT - ಬೆಂಗಳೂರು (ಸಂಜೆ 7:30)


ಇದನ್ನೂ ಓದಿ: Royal Challengers Bengaluru: ಆರ್​ಸಿಬಿ ತಂಡದ ಸ್ಟ್ರೆಂಥ್​-ವೀಕ್ನೆಸ್​ ಏನು? ಇಲ್ಲಿದೆ ಬೆಂಗಳೂರು ತಂಡದ ಪ್ಲೇಯಿಂಗ್​ 11


ಗುಂಪು ಬಿ ತಂಡಗಳು:


ರಾಯಲ್​ ಚಾಲೆಂಜರ್ಸ್​ ಬೆಂಗಳೂರು
ಚೆನ್ನೈ ಸೂಪರ್ ಕಿಂಗ್ಸ್
ಗುಜರಾತ್ ಟೈಟನ್ಸ್
ಪಂಜಾಬ್ ಕಿಂಗ್ಸ್
ಸನ್​ ರೈಸರ್ಸ್​ ಹೈದರಾಬಾದ್


ಬೆಂಗಳೂರು ತಂಡ:


ಫಾಫ್ ಡು ಪ್ಲೆಸಿಸ್ (ಸಿ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ಮಿಚೆಲ್ ಬ್ರಾಸ್ವೆ, ಅನುಜ್ ರಾವತ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗೆ, ಆಕಾಶ್ ಭಾಂಡಗೆ, ಜೋ ಹ್ಯಾಜಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ (ಇಎನ್‌ಜಿ), ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ.
ಐಪಿಎಲ್​ಗೂ ಮುನ್ನ ಕೊಹ್ಲಿ ಲುಕ್​ ಚೆಂಜ್​:

top videos


  ಇನ್ನು, ಬೆಂಗಳೂರು ತಂಡದ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ ಐಪಿಎಲ್​ ಆರಂಭಕ್ಕೂ ಮುನ್ನ ತಮ್ಮ ಲುಕ್​ ಬದಲಿಸಿಕೊಂಡಿದ್ದಾರೆ. ಹೌದು, ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಅಲೀಮ್ ಹಕೀಮ್ ಅವರು ವಿರಾಟ್ ಕೊಹ್ಲಿಗೆ ಹೇರ್​ಸ್ಟೈಲ್​ ಮಾಡಿದ್ದು, ಸಖತ್​ ಆಗಿ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಕೊಹ್ಲಿ ಹಂಚಿಕೊಂಡ ಫೋಟೋ ನೋಡಿ ಇದೀಗ ಅವರ ಲುಕ್​ ಎಲ್ಲಡೆ ಸಖತ್​ ವೈರಲ್​ ಆಗುತ್ತಿದೆ.

  First published: