ಕೆಲ ದಿನಗಳ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಟಾರ್ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ (Rajat Patidar) ಇಂಜುರಿ ಸಮಸ್ಯೆಯಿಂದ ಐಪಿಎಲ್ 16ನೇ ಸೀಸನ್ ಆರಂಭದಲ್ಲಿಯೇ ತಂಡದಿಂದ ಹೊರನಡೆದರು. ಇದರಿಂದಾಗಿ RCB ತಂಡಕ್ಕೆ ಆರಂಭದಲ್ಲಿಯೇ ಆಘಾತ ಎದುರಾಗಿತ್ತು. ಆದರೆ ಇದೀಗ ಹೊಸ ಮಾಹಿತಿ ಲಭ್ಯವಾಗಿದ್ದು, ರಜತ್ ಹೆಚ್ಚಿನ ಚಿಕಿತ್ಸೆಗಾಗಿ ಇಂಗ್ಲೆಂಡ್ ಗೆ ತೆರಳಿದ್ದರು. ಅಲ್ಲಿ ಅವರು ಹಿಮ್ಮಡಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಂಡಿದ್ದಾರೆ. ಗಾಯದಿಂದಾಗಿ ಅವರು ಸಂಪೂರ್ಣ ಐಪಿಎಲ್ 2023 ಸೀಸನ್‌ನಿಂದ (IPl 2023) ಹೊರಗುಳಿದಿದ್ದಾರೆ. ಅಭಿಮಾನಿಗಳು ಕೂಡ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಅವರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ, ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಮಡಿದ್ದಾರೆ.
ಹೆಲ್ತ್ ಅಫ್ಡೇಟ್ ನೀಡಿದ ರಜತ್ ಪಾಟಿದಾರ್:
ತಮ್ಮ ಶಸ್ತ್ರಚಿಕಿತ್ಸೆಯ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ, ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ರಜತ್ ಪಾಟಿದಾರ್, ‘ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ನನ್ನ ಆರೋಗ್ಯದ ಬಗ್ಗೆ ಮಾಹಿತಿ ನೀಡಲು ಬಯಸುತ್ತೇನೆ. ಬಹಳ ಸಮಯದಿಂದ ನನ್ನನ್ನು ಕಾಡುತ್ತಿದ್ದ ಗಾಯಕ್ಕೆ ನಾನು ಇತ್ತೀಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಇದು ಗುಣಮುಖವಾಗಿದೆ ಮತ್ತು ನಾನು ಚೇತರಿಕೆಯ ಹಾದಿಯಲ್ಲಿದ್ದೇನೆ ಎಂದು ಹೇಳಲು ನನಗೆ ಸಂತೋಷವಾಗಿದೆ. ನಾನು ಬೇಗ ಮತ್ತೆ ಮೈದಾನಕ್ಕೆ ಮರಳಲು ಕಾತುರನಾಗಿದ್ದೇನೆ. ನಿಮ್ಮ ಪ್ರಾರ್ಥನೆ ಮತ್ತು ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳು‘ ಎಂದು ಭಾವನಾತ್ಮಕವಾಗಿ ಸಂದೇಶ ಬರೆದಿದ್ದಾರೆ.
Just wanted to give a quick update to all my supporters out there. I recently underwent surgery for an injury that has been troubling me for a while now, but I'm happy to say that it went well and I'm on the road to recovery! Thank you all for prayers ❤️.
Your
RP pic.twitter.com/jSKiTwGr8q
— Rajat Patidar (@rrjjt_01) May 3, 2023
ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ, ರಜತ್ ಪಾಟಿದಾರ್ ಅವರ ಗಾಯದ ವೆಚ್ಚದ ಜವಾಬ್ದಾರಿಯನ್ನು ಬಿಸಿಸಿಐ ವಹಿಸಿಕೊಂಡಿದೆ. ಟಾರ್ಗೆಟ್ ಆಟಗಾರನಾಗಿದ್ದರಿಂದ ಬಿಸಿಸಿಐ ರಜತ್‌ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದೆ. ಕೆಲವು ದಿನಗಳ ಹಿಂದೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರಜತ್ ಅವರನ್ನು ಅಯ್ಕೆ ಮಾಡಲಾಗಿತ್ತು. ಆದರೆ ಅವರು ತಮ್ಮ ಚೊಚ್ಚಲ ಪಂದ್ಯವನ್ನಾಡಲು ಸಾಧ್ಯವಾಗಲಿಲ್ಲ.
ಇದನ್ನೂ ಓದಿ: IPL 2023: ‘ನನ್ನನ್ನು ಯಾಕೆ ಗುರಾಯಿಸಿ ನೋಡಿದ್ರಿ’! ಕೊಹ್ಲಿ-ಗಂಭೀರ್ ಏನೆಲ್ಲಾ ಬೈಕೊಂಡ್ರು? ಇಲ್ಲಿದೆ ಸ್ಪೋಟಕ ಮಾಹಿತಿ
ರಜತ್ ಇದುವರೆಗೆ ಕೇವಲ 12 ಐಪಿಎಲ್ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರು 40ರ ಸರಾಸರಿಯಲ್ಲಿ 404 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 112 ಆಗಿದೆ. ಅವರು ಇಲ್ಲಿಯವರೆಗೆ ಒಟ್ಟು 1 ಶತಕ ಮತ್ತು 2 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಲಕ್ನೋ ವಿರುದ್ಧ ಶತಕ ಬಾರಿಸಿ ಗಮನ ಸೆಳೆದಿದ್ದರು.
ಆರ್ಸಿಬಿ 2023 ಸಂಪೂರ್ಣ ತಂಡ:
ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ