ಐಪಿಎಲ್ (IPL 2023) ಟೂರ್ನಿ ಆರಂಭವಾದ ಸಮಯದಿಂದಲೂ ಒಮ್ಮೆಯೂ ಟ್ರೋಫಿ ಗೆಲ್ಲದ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಒಂದು. ಟ್ರೋಫಿ ಗೆಲ್ಲುವ ಸಾಮರ್ಥ್ಯವಿದ್ದರೂ ಅದೃಷ್ಟ ಮಾತ್ರ ತಂಡದ ಕೈ ಹಿಡಿದಿಲ್ಲ. ಕಳೆದ ವರ್ಷ ಎಲಿಮಿನೇಟರ್ ಹಂತಕ್ಕೂ ಎಂಟ್ರಿ ಕೊಟ್ಟಿದ್ದ ಆರ್ಸಿಬಿ (RCB), ರಾಜಸ್ಥಾನ ರಾಯಲ್ಸ್ (Rajasthan Royals) ತಂಡದ ವಿರುದ್ಧ ಸೋಲುಂಡು ಮನೆ ಹಿಂದಿರುಗಿಸಿತ್ತು. ಆದರೆ ಈ ಬಾರಿ ತಂಡ ಬ್ಯಾಲೆನ್ಸ್ ಆಗಿ ಕಾಣುತ್ತಿದೆ. ಆದರೆ ಆರಂಭಿಕ ಜೋಡಿಯ ಸಮಸ್ಯೆ ಮಾತ್ರ ತಂಡವನ್ನು ಕಾಡುತ್ತಿದೆ ಎಂದು ಹೇಳಬಹುದು.
ಹಳೆ ಫಾರ್ಮಲಾವನ್ನೇ ಮುಂದುವರಿಸುತ್ತಾರಾ?
ಆರ್ಸಿಬಿ ತಂಡದ ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಸದ್ಯ ತಂಡದ ನಾಯಕರಾಗಿರುವ ಫಾಫ್ ಡು ಪ್ಲೆಸ್ಸಿಸ್ ಕೂಡ ಉತ್ತಮ ಆಟಗಾರರಾಗಿದ್ದರೆ. ಇಬ್ಬರು ಉತ್ತಮ ಫಾರ್ಮ್ನಲ್ಲಿ ಒಂದಾದರೆ ಆ ಪಂದ್ಯದಲ್ಲಿ ತಂಡಕ್ಕೆ ಅತ್ಯುತ್ತಮ ಆರಂಭ ಲಭ್ಯವಾಗೋದು ಖಚಿತ ಅಂತಲೇ ಹೇಳಬಹುದು.
ಕಳೆದ ವರ್ಷ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ನಲ್ಲಿ ಇಲ್ಲದಿದ್ದರೂ ಇಬ್ಬರ ಜೋಡಿ ಉತ್ತಮ ಆರಂಭವನ್ನೇ ನೀಡಿತ್ತು. ಈ ಕಾರಣದಿಂದ ಮುಂದಿನ ವರ್ಷದಲ್ಲೂ ಈ ಇಬ್ಬರೇ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಏಕೆಂದರೆ ಕೊಹ್ಲಿ ಇತ್ತೀಚೆಗೆ ಉತ್ತಮ ಫಾರ್ಮ್ಗೆ ಮರಳಿದ್ದು, ಡು ಪ್ಲೆಸ್ಸಿಸ್ ಕೂಡ ಫಾರ್ಮ್ನಲ್ಲಿದ್ದಂತೆ ಕಾಣುತ್ತಿದೆ.
ಇದನ್ನೂ ಓದಿ: IPL 2023: ಈ ಸ್ಟಾರ್ ಕ್ರಿಕೆಟಿಗರ ಪ್ರೀತಿಗೆ ಐಪಿಎಲ್ ಕಾರಣವಂತೆ, ತಾಜ್ಮಹಲ್ ಎದುರು ಪ್ರಪೋಸ್ ಮಾಡಿದ RCB ಆಟಗಾರ
ಯುವ ಆಟಗಾರನಿಗೆ ಸಿಗುತ್ತಾ ಚಾನ್ಸ್?
ಆರ್ಸಿಬಿ ತಂಡದಲ್ಲಿ ಯುವ ವಿಕೆಟ್ ಕೀಪರ್, ಬ್ಯಾಟರ್ ಅನೂಜ್ ರಾವತ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ವರ್ಷದ ಆವೃತ್ತಿಯಲ್ಲಿ ಆರಂಭಿಕರಾಗಿ ರಾವತ್ಗೆ ಕೆಲ ಅವಕಾಶಗಳು ಸಿಕ್ಕಿದರೂ ಹೇಳಿಕೊಳ್ಳುವಂತ ಪ್ರದರ್ಶನ ಸಿಕ್ಕಿರಲಿಲ್ಲ. ಆ ಬಳಿಕ ವಿರಾಟ್ ಕೊಹ್ಲಿಯನ್ನು ಆರಂಭಿಕರಾಗಿ ಕಣಕ್ಕೆ ಇಳಿಸಿಲಾಗಿತ್ತು.
ಈ ಬಾರಿಯ ಆವೃತ್ತಿಯಲ್ಲೂ ಮೊದಲು ರಾವತ್ಗೆ ಕೆಲ ಅವಕಾಶಗಳನ್ನು ನೀಡುವ ಸಾಧ್ಯತೆ ಇದೆ. ಆದರೆ ದಿನೇಶ್ ಕಾರ್ತಿಕ್ರಂತಹ ಆಟಗಾರರು ತಂಡದಲ್ಲಿರೋ ಕಾರಣ, ರಾವತ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಸಿಗೋದು ಕಷ್ಟ ಅಂತ ಹೇಳಲಾಗುತ್ತಿದೆ.
ಹೊಸ ಪ್ರಯೋಗಕ್ಕೆ ಮುಂದಾಗುತ್ತಾರಾ?
ಕಳೆದ ಎರಡು ಆವೃತ್ತಿಗಳಲ್ಲಿ ಆರ್ಸಿಬಿ ತಂಡದೊಂದಿಗೆ ಪ್ರಯಾಣ ಮಾಡುತ್ತಿರುವ ಮತ್ತೊರ್ವ ವಿಕೆಟ್ ಕೀಪರ್, ಬ್ಯಾಟರ್ ಫಿನ್ ಅಲೆನ್. ಕಿವೀಸ್ ಆಟಗಾರರಾಗಿರುವ ಅಲೆನ್ಗೆ ಇದುವರೆಗೂ ಆರ್ಸಿಬಿ ಪರ ಆಡುವ ಅವಕಾಶ ಸಿಕ್ಕಿಲ್ಲ. ಆದರೆ ನ್ಯೂಜಿಲೆಂಡ್ ಪರ 160 ಸ್ಟ್ರೈಕ್ ರೆಟ್ನೊಂದಿಗೆ ಬ್ಯಾಟ್ ಮಾಡಿರೋ ಅಲೆನ್ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಈ ಅಂಶವನ್ನು ನೋಡಿದರು ಆರ್ಸಿಬಿ ಮ್ಯಾನೇಜ್ಮೆಂಟ್ ಅವರನ್ನು ಬೆಂಚ್ಗೆ ಸೀಮಿತ ಮಾಡಿದರೆ ಬಹುದೊಡ್ಡ ತಪ್ಪಾಗುತ್ತದೆ ಅಂತ ಎಲ್ಲರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: IPL 2023: ಐಪಿಎಲ್ 10 ತಂಡಗಳ ಸಂಪೂರ್ಣ ಆಟಗಾರರ ಲಿಸ್ಟ್, ಯಾವ ತಂಡ ಬಲಿಷ್ಠವಾಗಿದೆ?
ನ್ಯೂಜಿಲೆಂಡ್ ತಂಡದ ಓಪನರ್ ಆಗಿ ಮಿಂಚುತ್ತಿರುವ ಅಲೆನ್ಗೆ ಆರ್ಸಿಬಿ ತಂಡದ ಪರ ಆರಂಭಿಕರಾದರೆ ಡು ಪ್ಲೆಸ್ಸಿಸ್ ಗೆ ಉತ್ತಮ ಜೋಡಿ ಆಗ್ತಾರೆ ಎನ್ನಲಾಗಿದೆ. ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಆಡಲು ಸಾಧ್ಯವಾಗಲಿದೆ. ಈ ಮೂವರು ಆಟಗಾರರಲ್ಲಿ ಬೆಂಗಳೂರು ಫ್ರಾಂಚೈಸಿ ಯಾರಿಗೆ ಅವಕಾಶ ನೀಡುತ್ತೆ ಎಂಬುವುದನ್ನು ಕಾದು ನೋಡಬೇಕು.
𝗦𝘁𝗿𝗼𝗻𝗴 𝗰𝗼𝗿𝗲 𝗮𝗻𝗱 𝘁𝗵𝗲𝗻 𝘀𝗼𝗺𝗲 𝗺𝗼𝗿𝗲. 💪
Pretty much sums up our Class of 2023. We’re summer ready! Aren’t we, 12th Man Army? 😍#PlayBold #WeAreChallengers #IPL2023 #ClassOf2023 pic.twitter.com/JhPKnldrP6
— Royal Challengers Bangalore (@RCBTweets) December 24, 2022
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ