ಕಳೆದ ಒಂದು ವರ್ಷದಲ್ಲಿ ರವೀಂದ್ರ ಜಡೇಜಾ (Ravindra Jadeja) ಅವರು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಜೊತೆಗಿಂದ ಹೊರಬಂದಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಜಡೇಜಾ CSK ತೊರೆಯಲಿದ್ದಾರೆ ಎಂಬ ಸುದ್ದಿ ಆಗಾಗ ಬರುತ್ತಲೇ ಇತ್ತು. ಇಂತಹ ಸುದ್ದಿಗಳ ಬಗ್ಗೆ ಫ್ರಾಂಚೈಸಿ ಪರವಾಗಿ ಪದೇ ಪದೇ ಸ್ಪಷ್ಟೀಕರಣ ನೀಡಿತ್ತು. ಇದಾದ ಬಳಿಕ ಐಪಿಎಲ್ 2023ಗಾಗಿ (IPL 2023) ಚೆನ್ನೈ ತಂಡ ಜಡ್ಡು ಅವರನ್ನು ರಿಟೈನ್ ಮಾಡುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿತ್ತು. ಇದರ ನಂತರ ಸಿಎಸ್ಕೆ ಅಭಿಮಾನಿಗಳೂ ಸಹ ಸಂತಹ ವ್ಯಕ್ತಪಡಿಸಿದ್ದರು. ಇದೀಗ, ಜಡ್ಡು ಸಾಮಾಜಿಕ ಮಾಧ್ಯಮದಲ್ಲಿ ಎರಡು ಪದಗಳ ಒಂದು ಫೋಸ್ಟ್ನ್ನು ಹಂಚಿಕೊಂಡಿದ್ದಾರೆ, ಇದು ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಈ ಫೋಸ್ಟ್ ಸಹ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ವಣಕ್ಕಂ ಚೆನ್ನೈ ಎಂದ ಜಡ್ಡು:
ಸದ್ಯ ರವೀಂದ್ರ ಜಡೇಜಾ ಕ್ರಿಕೆಟ್ನಿಂದ ಕೆಲ ತಿಂಗಳುಗಳ ಕಾಲದಿಂದ ದೂರವಿದ್ದರು. ಆದರೆ ಇದೀಗ ಅವರು ಫಿಟ್ ಆಗಿದ್ದಾರೆ ಮತ್ತು ಭಾರತ ತಂಡಕ್ಕೆ ಮರಳಲು ಕಾಯುತ್ತಿದ್ದಾರೆ. ಏತನ್ಮಧ್ಯೆ, ಭಾನುವಾರ ಮಧ್ಯಾಹ್ನ ಅವರು ಟ್ವಿಟರ್ನಲ್ಲಿ "ವಣಕ್ಕಂ ಚೆನ್ನೈ" ಎಂದು ಟ್ವೀಟ್ ಮಾಡಿದ್ದಾರೆ. ತಮಿಳು ಭಾಷೆಯಲ್ಲಿ ವಣಕ್ಕಂ ಎಂಬ ಪದಕ್ಕೆ ಹಲೋ, ನಮಸ್ತೆ ಎಂದು ಹೇಳುವ ಅರ್ಥ ಇದೆ. ಜಡ್ಡು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಹೆಚ್ಚು ಬರೆದಿಲ್ಲ ಆದರೆ ಈ ಎರಡು ಮಾತುಗಳಿಂದ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
Vanakkam Chennai..👋
— Ravindrasinh jadeja (@imjadeja) January 22, 2023
ರವೀಂದ್ರ ಜಡೇಜಾ ಅವರ ಈ ಸಂದೇಶದ ನಂತರ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿಂದ ಪ್ರತಿಕ್ರಿಯೆಗಳು ಬರುತ್ತಿವೆ. ಜಡೇಜಾ ತಂಡದಲ್ಲಿರುವುದಕ್ಕೆ ಚೆನ್ನೈ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಕಳೆದ ಋತುವಿನಲ್ಲಿ ಧೋನಿ ಬದಲಿಗೆ ಜಡೇಜಾ ಅವರನ್ನು ಚೆನ್ನೈ ಫ್ರಾಂಚೈಸಿಯ ನಾಯಕರನ್ನಾಗಿ ಮಾಡಿತ್ತು. ಆದರೆ ಟೂರ್ನಿ ಮುಗಿಯುವ ಮುನ್ನವೇ ಜಡೇಜಾ ನಾಯಕತ್ವದಿಂದ ಕೆಳಗಿಳಿದಿದ್ದರು.
ಇದನ್ನೂ ಓದಿ: CSK Dhoni: ಚೆನ್ನೈ ಕ್ಯಾಪ್ಟನ್ ಆಗ್ತಾರಾ ಬೆನ್ ಸ್ಟೋಕ್ಸ್? CSK ನಾಯಕತ್ವದ ಕುರಿತು ಹೊರಬಿತ್ತು ಬಿಗ್ ಅಪ್ಡೇಟ್
ನಂತರ ಮತ್ತೆ ಧೋನಿ ತಂಡದ ನಾಯಕತ್ವ ವಹಿಸಿಕೊಂಡರು. ಬಳಿಕ ಧೋನಿ ಹೇಳಿಕೆಯ ನಂತರ, ಜಡೇಜಾ ಗಾಯದ ಹೆಸರಿನಲ್ಲಿ ಪೂರ್ಣ ಋತುವನ್ನು ಆಡದೆ ಐಪಿಎಲ್ನಿಂದ ಹೊರಬಂದರು. ನಂತರ, ಅವರು CSK ಗೆ ಸಂಬಂಧಿಸಿದ ಟ್ವೀಟ್ಗಳನ್ನು ಅಳಿಸಿದ್ದರು.
ಚೆನ್ನೈ ನಾಯಕರಾಗ್ತಾರಾ ಸ್ಟೋಕ್ಸ್?:
ಎಂಎಸ್ ಧೋನಿಯಂತಹ ಮತ್ತೊಬ್ಬ ನಾಯಕನನ್ನು ಪಡೆಯುವುದು ಸಿಎಸ್ಕೆಗೆ ತುಂಬಾ ಕಷ್ಟ. ಮಹಿ ನಾಯಕತ್ವದಲ್ಲಿ ಚೆನ್ನೈ ತಂಡ ನಾಲ್ಕು ಬಾರಿ ಪ್ರಶಸ್ತಿ ಜಯಿಸಿದೆ. ಐಪಿಎಲ್ 2023 ರಲ್ಲಿ ಸಹ, ಸಿಎಸ್ಕೆ ಅಭಿಮಾನಿಗಳು ಧೋನಿ ಅವರನ್ನು ನಾಯಕನಾಗಿ ನೋಡಲು ಉತ್ಸುಕರಾಗಿದ್ದಾರೆ. ಆದರೆ ಮುಂಬರುವ ಋತುವಿನಲ್ಲಿ ಮಾಹಿ ಬದಲಿಗೆ ಬೆನ್ ಸ್ಟೋಕ್ಸ್ ನಾಯಕತ್ವ ವಹಿಸಬಹುದು ಎಂದು ಊಹಿಸಲಾಗಿದೆ. ಈ ಬಗ್ಗೆ ಧೋನಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾಶಿ ವಿಶ್ವನಾಥ್ ಹೇಳಿದ್ದಾರೆ. ಕಳೆದ ಋತುವಿನಲ್ಲಿ ಚೆನ್ನೈನ ಪ್ರದರ್ಶನ ಸಾಕಷ್ಟು ನಿರಾಶಾದಾಯಕವಾಗಿತ್ತು.
ಐಪಿಎಲ್ 2023ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ:
ಮಹೇಂದ್ರ ಸಿಂಗ್ ಧೋನಿ (c), ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಪತಿರ್ನಾ ಜಡೇಜಾ, ಮುಖೇಶ್ ದೇಶಪಾಂಡೆ, , ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಭಗತ್ ವರ್ಮಾ, ಅಜಯ್ ಮಂಡಲ್, ಕೈಲ್ ಜೇಮಿಸನ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್ , ಅಜಿಂಕ್ಯ ರಹಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ