Anil Kumble: ಕೋಚ್ ಸ್ಥಾನದಿಂದ ಕನ್ನಡಿಗ ಔಟ್, ಇವರ ಜಾಗಕ್ಕೆ ಬರ್ತಾರಾ ಆ ಮಾಜಿ ಸ್ಟಾರ್​ ಆಟಗಾರ?

ಪಂಜಾಬ್ ಕಿಂಗ್ಸ್ ಕೂಡ ತನ್ನ ಕೋಚ್ ಸ್ಥಾನದಿಂದ ಕನ್ನಡಿಗ ಅನಿಲ್ ಕುಂಬ್ಳೆ (Anil Kumble) ಅವರನ್ನು ಕೈಬಿಟ್ಟಿದೆ. ಬದಲಾಗಿ ನೂತನ ಕೋಚ್ ಅನ್ನು ಆಯ್ಕೆ ಮಾಡಲು ಚಿಂತನೆ ನಡೆಇರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಅನಿಲ್ ಕುಂಬ್ಳೆ

ಅನಿಲ್ ಕುಂಬ್ಳೆ

  • Share this:
ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಮುಗಿದು 2 ತಿಂಗಳುಗಳು ಕಳೆದಿವೆ. ಇನ್ನು ಮುಂಬರುವ 2023 ಐಪಿಎಲ್​ ಗೆ (IPL) ಅನೇಕ ತಿಂಗಳುಗಳು ಬಾಕಿ ಉಳಿದಿವೆ. ಆದರೆ ಇದರ ನಡುವೆ ಲೀಗ್​ನ ತಂಡವೊಂದು ತನ್ನ ಪ್ರಮುಖ ಕೋಚ್​ ಒಬ್ಬರನ್ನು ತಂಡದಿಂದ ಕೈಬಿಟ್ಟಿದೆ. ಕೆಲ ದಿನಗಳ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಹೆಡ್ ಕೋಚ್ ಸ್ಥಾನದಿಂದ ಬ್ರೆಂಡನ್ ಮೆಕ್ಕಲಂ ಹೊರನಡೆದಿದ್ದರು. ನಂತರದಲ್ಲಿ ಅವರ ಸ್ಥಾನಕ್ಕೆ ಚಂದ್ರಕಾಂತ್ ಪಂಡಿತ್ ಅವರನ್ನು ಕರೆತರಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಪಂಜಾಬ್ ಕಿಂಗ್ಸ್ ಕೂಡ ತನ್ನ ಕೋಚ್ ಸ್ಥಾನದಿಂದ ಕನ್ನಡಿಗ ಅನಿಲ್ ಕುಂಬ್ಳೆ (Anil Kumble) ಅವರನ್ನು ಕೈಬಿಟ್ಟಿದೆ. ಬದಲಾಗಿ ನೂತನ ಕೋಚ್ ಅನ್ನು ಆಯ್ಕೆ ಮಾಡಲು ಚಿಂತನೆ ನಡೆಇರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಅನಿಲ್ ಕುಂಬ್ಳೆ ಮುಂದುವರೆಸುವುದು ಅನುಮಾನ:

ಹೌದು, ಅನಿಲ್​ ಕುಂಬ್ಳೆ ಅವರು ಕಳೆದ 3 ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡದ ಪ್ರಮುಖ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕುಂಬ್ಳೆ ಅವರ ಒಪ್ಪಂದ ಅವಧಿ ಇದೇ ಸೆಪ್ಟೆಂಬರ್ ನಲ್ಲಿ ಅಂತ್ಯಗೊಳ್ಳಲಿದ್ದು, ಅವರನ್ನು ಕೋಚ್ ಆಗಿ ಮುಂದುವರಿಸಲು ಪಂಜಾಬ್ ಕಿಂಗ್ಸ್ ಇಚ್ಚಿಸುತ್ತಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ನೂತನ ಕೋಚ್ ಗಾಗಿ ಪಂಜಾಬ್​ ಕಿಂಗ್ಸ್ ಹುಡುಕಾಟದಲ್ಲಿದೆ ಎನ್ನಲಾಗಿದೆ.

ವರದಿಯ ಪ್ರಕಾರ, ಕುಂಬ್ಳೆ ಬಳಿಕ ಇದೀಗ ಹೊಸ ಕೋಚ್​ ಹುಡುಕಾಟದಲ್ಲಿ ಪಂಜಾಬ್​ ಇದ್ದು, ಮುಖ್ಯ ಕೋಚ್ ಹುದ್ದೆಗೆ ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್​ ಮತ್ತು ಆಸ್ಟ್ರೇಲಿಯಾದ ಟ್ರೆವರ್ ಬೇಲಿಸ್ ಅವರನ್ನು ಮುಖ್ಯ ಕೋಚ್​ ಆಗಿ ಆಯ್ಕೆ ಮಾಡಲು ಪ್ರಾಂಚೈಸಿ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್ ಕುರಿತು ಭಾರತ ತಂಡ ಆತಂಕದಲ್ಲಿದೆ, ಶಾಕಿಂಗ್ ಹೇಳಿಕೆ ನೀಡಿದ ಪಂತ್

ಕೋಚ್​ ಹುಡುಕಾಟದಲ್ಲಿ ಪಂಜಾಬ್​:

ಇನ್ನು, ಅನಿಲ್ ಕುಂಬ್ಳೆ ಅವರನ್ನು ಮುಖ್ಯ ಕೋಚ್​ ಹಂತದಿಂದ ಕೈ ಬಿಟ್ಟ ನಂತರ ಇದೀಗ ಪಂಜಾಬ್​ ಕಿಂಗ್ಸ್ ತಂಡ ಹೊಸ ಕೋಚ್​ ಹುಡುಕಾಟದಲ್ಲಿ ನಿರತವಾಗಿದೆ. ಅದರ ಭಾಗವಾಗಿ ಇಂಗ್ಲೆಂಡ್​ ತಂಡಕ್ಕೆ ವಿದಾಯ ಹೇಳಿದ್ದ ಮಾರ್ಗನ್ ಅವರನ್ನು ಪಂಜಾಬ್​ಗೆ ಕೋಚ್​ ಆಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಟ್ರೆವರ್ ಬೇಲಿಸ್ ಈಗಾಗಲೇ ಕೋಚ್​ ಹುದ್ದೆಯ ಅನುಭವ ಹೊಂದಿರುವುದರಿಂದ ಅವರನ್ನೂ ಆಯ್ಕೆ ಮಾಡುವ ಸಾಧ್ಯತೆ ಇದೆ. ಇವರು ಮೊದಲು ಕೆಕೆಆರ್​ ತಂಡದ ಮುಖ್ಯ ಕೋಚ್​ ಆಗಿ 3 ವರ್ಷಗಳ ಅನುಭವ ಹೊಂದಿದ್ದಾರೆ.

ಇದರುಗಳ ನಡುವೆ ಭಾರತದ ಮಾಜಿ ಆಟಗಾರ ಮತ್ತು ಭಾರತದ ಮಾಜಿ ಕೋಚ್ ಆಯ್ಕೆ ಆಗುವ ಸಾಧ್ಯತೆ ಇದೆ. ಆದರೆ ಇವರ ಹೆಸರು ಎಲ್ಲಿಯೂ ಬಹಿರಂಗವಾಗಿಲ್ಲ. ಆದರೆ ಇನ್ನೊಂದು ವಾರದಲ್ಲಿ ಪಂಜಾಬ್ ತಂಡವು ಕೋಚ್​ ಯಾರೆಂದು ಬಹಿರಂಗಪಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ICC T20 World Cup: ಟಿ20 ವಿಶ್ವಕಪ್​ನಲ್ಲಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರಿವರು, ನಿವೃತ್ತಿ ಪಡೆದರೂ ಇವರೇ ಟಾಪ್

RCBಗೆ ಮತ್ತೆ ಬರ್ತಾರಾ ಕುಂಬ್ಳೆ?:

ಹೌದು, ಇದೀಗ ಪಂಜಾಬ್​ ಅನಿಲ್​ ಕುಂಬ್ಳೆ ಅವರನ್ನು ಕೈಬಿಟ್ಟಿದ್ದು, ಮುಂದಿನ ಐಪಿಎಲ್​ ನಲ್ಲಿ ಆರ್​ಸಿಬಿ ತಂಡವನ್ನು ಸೇರಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಆದರೆ ಈ ಕುರಿತು ಯಾವುದೇ ಸ್ಪಷ್ಟನೆ ದೊರಕಿಲ್ಲ. ಆದರೂ ಸಾಮಾಜಿಕ ಜಾಲತಾಣದಲ್ಲಿ ಇಂತಹದೊಂದು ಮಾತುಗಳು ಕೇಳಿಬರುತ್ತಿದ್ದು, ಯಾವುದೇ ಮಾತುಗಳಿಗೆ ಈವರೆಗೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
Published by:shrikrishna bhat
First published: