• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • SRH vs PBKS: ಜಸ್ಟ್ 1 ರನ್​ನಿಂದ ಶತಕ ಮಿಸ್​ ಮಾಡಿಕೊಂಡ ಧವನ್​, ಗೆಲುವಿನ ಖಾತೆ ತೆರೆದ ಹೈದರಾಬಾದ್​

SRH vs PBKS: ಜಸ್ಟ್ 1 ರನ್​ನಿಂದ ಶತಕ ಮಿಸ್​ ಮಾಡಿಕೊಂಡ ಧವನ್​, ಗೆಲುವಿನ ಖಾತೆ ತೆರೆದ ಹೈದರಾಬಾದ್​

ಹೈದರಾಬಾದ್​ ತಂಡಕ್ಕೆ ಗೆಲುವು

ಹೈದರಾಬಾದ್​ ತಂಡಕ್ಕೆ ಗೆಲುವು

SRH vs PBKS: ಹೈದರಾಬಾದ್​ ತಂಡ 17.1 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್​ ಗಳಿಸುವ ಮೂಲಕ 8 ವಿಕೆಟ್​ಗಳ ಜಯ ದಾಖಲಿಸಿತು. ಈ ಮೂಲಕ ಈ ಬಾರಿ ಐಪಿಎಲ್​ನ ಮೊದಲ ಗೆಲುವಿನ ನಗೆಬೀರಿತು.

  • Share this:

ಐಪಿಎಲ್ (IPL 2023)ರ 14 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ (SRH v PBKS) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ (Rajiv Gandhi International Cricket Stadium) ನಡೆಯಿತು. ಸನ್ ರೈಸರ್ಸ್ ಹೈದರಾಬಾದ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ 9 ವಿಕೆಟ್ ಗೆ 143 ರನ್ ಗಳಿಸಿತು. ನಾಯಕ ಶಿಖರ್ ಧವನ್ ಅವರ ನಾಯಕತ್ವದ ಇನ್ನಿಂಗ್ಸ್ ಆಧಾರದ ಮೇಲೆ, ಪಂಜಾಬ್ ಹೈದರಾಬಾದ್‌ಗೆ 144 ರನ್‌ಗಳ ಗುರಿಯನ್ನು ನೀಡಿತು. ಧವನ್ 99 ರನ್ ಗಳಿಸಿ ಅಜೇಯರಾಗಿ ಮರಳಿದರು. ಪಂಜಾಬ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 143 ರನ್ ಗಳಿಸಿತು. ಬಳಿಕ ಬ್ಯಾಟಿಂಗ್​ ಮಾಡಿದ ಹೈದರಾಬಾದ್​ ತಂಡ 17.1 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್​ ಗಳಿಸುವ ಮೂಲಕ 8 ವಿಕೆಟ್​ಗಳ ಜಯ ದಾಖಲಿಸಿತು. ಈ ಮೂಲಕ ಈ ಬಾರಿ ಐಪಿಎಲ್​ನ ಮೊದಲ ಗೆಲುವಿನ ನಗೆಬೀರಿತು.


ರಾಹುಲ್​ ಭರ್ಜರಿ ಬ್ಯಾಟಿಂಗ್​:


ಹೈದರಾಬಾದ್​ ತಂಡ 17.1 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್​ ಗಳಿಸುವ ಮೂಲಕ 8 ವಿಕೆಟ್​ಗಳ ಜಯ ದಾಖಲಿಸಿತು. ಹೈದರಾಬಾದ್​ ಪರ ಹ್ಯಾರಿ ಬ್ರೂಕ್​ 13 ರನ್, ನಾಯಕ ಅಡೇನ್​ ಮಾಕ್ರಮ್​ ಅಜೇಯ 37 ರನ್, ಕನ್ನಡಿಗ ಮಾಯಾಂಕ್​ ಅಗರ್ವಾಲ್​ 21 ರನ್ ಗಳಿಸಿದರು. ಆದರೆ ರಾಹುಲ್​ ತ್ರಿಪಾಠಿ 48 ಎಸೆತದಲ್ಲಿ 3 ಸಿಕ್ಸ್ ಮತ್ತು 10 ಫೊರ್​ ಮೂಲಕ ಆಕಪರ್ಷಕ 74 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.


ಶತಕ ಮಿಸ್​ ಮಾಡಿದಕೊಂಡ ಧವನ್​:


ಶಿಖರ್ ಧವನ್ 66 ಎಸೆತದಲ್ಲಿ 12 ಸಿಕ್ಸ್ ಮತ್ತು 5 ಸಿಕ್ಸ್ ಮೂಲಕ 99 ರನ್ ಗಳಿಸಿ ಜಸ್ಟ್ 1 ರನ್​ನಿಂದ ಶತಕ ವಂಚಿತರಾದರು. ಉಳದಂತೆ ಪ್ರಭ್‌ಸಿಮ್ರಾನ್ ಸಿಂಗ್ ಶೂನ್ಯ, ಮ್ಯಾಥ್ಯೂ ಶಾರ್ಟ್ 1 ರನ್, ಜಿತೇಶ್ ಶರ್ಮಾ 4 ರನ್, ಶಾರುಖ್ ಖಾನ್ 4 ರನ್, ಸ್ಯಾಮ್ ಕರನ್ 22 ರನ್, ನಾಥನ್ ಎಲ್ಲಿಸ್ 0 ರನ್, ಮೋಹಿತ್ 1 ರನ್, ಹರ್‌ಪ್ರೀತ್ ಬ್ರಾರ್ 1 ರನ್, ರಾಹುಲ್ ಚಾಹರ್ 0 ರನ್ ಗಳಿಸಿದರು.


ಇದನ್ನೂ ಓದಿ: Shreyas Iyer: ಚಹಾಲ್​ ಪತ್ನಿ ಜೊತೆ ಶ್ರೇಯಸ್​ ಅಯ್ಯರ್ ಸಖತ್ ಪಾರ್ಟಿ! ಪತಿಯಿಂದ ದೂರವಾಗ್ತಿದ್ದಾರಾ ಧನಶ್ರೀ ವರ್ಮಾ?


ಬೌಲಿಂಗ್​ನಲ್ಲಿ ಮ್ಯಾಜಿಕ್​ ಮಾಡಿದ ಮಾಯಾಂಕ್​:


ಇನ್ನು, ಸನ್​ರೈಸರ್ಸ್​ ಹೈದರಾಬಾದ್​ ತಂಡ ಇಂದು ಭರ್ಜರಿ ಬೌಲಿಂಗ್​ ಪ್ರದರ್ಶಿಸಿದರು. ಹೈದರಾಬಾದ್​ ಪರ ಮಾಯಾಂಕ್​ ಮಾರ್ಕಂಡೆ 4 ಓವರ್​ ಮಾಡಿ 15 ರನ್ ನೀಡಿ ಪ್ರಮುಖ 4 ವಿಕೆಟ್​ ಪಡೆದರು. ಉಳಿದಂತೆ ಉಮ್ರಾನ್​ ಮಲಿಕ್​ 2 ವಿಕೆಟ್​ ಮತ್ತು ಮಾರ್ಕೋ 2 ವಿಕೆಟ್​ ಪಡೆದರು. ಭುವನೇಶ್ವರ್​ ಕುಮಾರ್ ಸಹ 1 ವಿಕೆಟ್​ ಪಡೆದರು. ಇತ್ತ ಪಂಜಾಬ್​ ತಂಡದ ಪರ ಅರ್ಷದೀಪ್​ ಸಿಂಗ್​ ಮತ್ತು ರಾಹುಲ್ ಚಹಾರ್ ತಲಾ 1 ವಿಕೆಟ್​ ಪಡೆದು ಮಿಂಚಿದರು.
ಪಂದ್ಯದಲ್ಲಿ ಇಂಪ್ಯಾಕ್ಟ್​ ಬೀರದ ಇಂಪ್ಯಾಕ್ಟ್​ ಪ್ಲೇಯರ್​:


ಪಂಜಾಬ್ ಕಿಂಗ್ಸ್ ಅಗ್ರ ಕ್ರಮಾಂಕದ ಎಡವಟ್ಟಿನಿಂದಾಗಿ ಒಂಬತ್ತನೇ ಓವರ್‌ನಲ್ಲಿ ಪ್ರಭಾಸಿಮ್ರಾನ್ ಬದಲಿಗೆ ಸಿಕಂದರ್ ರಜಾ ಅವರನ್ನು 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಕಣಕ್ಕಿಳಿಸಿತು. ಅವರು ಕೇವಲ ಐದು ರನ್ ಗಳಿಸಿದರು ಮತ್ತು ಬೌಂಡರಿ ಲೈನ್‌ನಲ್ಲಿ ಮಲಿಕ್‌ಗೆ ಕ್ಯಾಚ್ ನೀಡಿದರು. ಧವನ್ ಒಂದು ತುದಿಯಲ್ಲಿ ಸ್ಥಿರವಾಗಿ ನಿಂತರು ಆದರೆ ಇನ್ನೊಂದು ತುದಿಯಿಂದ ವಿಕೆಟ್‌ಗಳು ಬೀಳುತ್ತಲೇ ಇದ್ದವು. ಪಂದ್ಯದ ಮೊದಲ ಎಸೆತದಲ್ಲಿ ಭುವನೇಶ್ವರ್ ಫಾರ್ಮ್‌ನಲ್ಲಿರುವ ಪ್ರಭಾಸಿಮ್ರಾನ್ ಸಿಂಗ್ ಎಲ್‌ಬಿಡಬ್ಲ್ಯೂ ಅವರನ್ನು ಔಟ್ ಮಾಡಿದರೆ, ಮುಂದಿನ ಓವರ್‌ನಲ್ಲಿ ಜಾನ್ಸನ್ ಅದೇ ಮಾದರಿಯಲ್ಲಿ ಮ್ಯಾಥ್ಯೂ ಶಾರ್ಟ್ ಅವರನ್ನು ಔಟ್ ಮಾಡುವ ಮೂಲಕ ಪೆವಿಲಿಯನ್ ಹಾದಿ ತೋರಿಸಿದರು.

top videos
    First published: