• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • PBKS vs RR: ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

PBKS vs RR: ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್​ 11

PBKS vs RR

PBKS vs RR

RR vs PBKS: ಪಂಜಾಬ್ ಮತ್ತು ರಾಜಸ್ಥಾನ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 25 ಬಾರಿ ಮುಖಾಮುಖಿಯಾಗಿದ್ದು, ರಾಜಸ್ಥಾನ್ ರಾಯಲ್ಸ್ 14 ಬಾರಿ ಗೆದ್ದಿದ್ದರೆ, ಪಂಜಾಬ್ 11 ಬಾರಿ ಗೆದ್ದಿದೆ.

  • Share this:

ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ (PBKS vs RR) ತಂಡಗಳು ಐಪಿಎಲ್ 2023 ರಲ್ಲಿ (IPL 2023) ಇಂದು ಅಂದರೆ ಮುಖಾಮುಖಿಯಾಗುತ್ತಿವೆ. ಧರ್ಮಶಾಲಾ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮೇಲುಗೈ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಪ್ರಸಕ್ತ ಋತುವಿನಲ್ಲಿ ಎರಡೂ ತಂಡಗಳು ಲೀಗ್ ಹಂತದಲ್ಲಿ ಎರಡನೇ ಬಾರಿ ಮುಖಾಮುಖಿಯಾಗುತ್ತಿವೆ. ಮೊದಲ ಪಂದ್ಯದಲ್ಲಿ ಪಂಜಾಬ್ ತಂಡ ರಾಜಸ್ಥಾನವನ್ನು 5 ರನ್‌ಗಳಿಂದ ಸೋಲಿಸಿತ್ತು. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್​ ಮೊದಲಿಗೆ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಪಂಜಾಬ್​ ತಂಡ ಬೃಹತ್​ ಸ್ಕೋರ್​ ಮಾಡುವ ನಿರೀಕ್ಷೆಯಿದೆ.


ಐಪಿಎಲ್​ 2023 ಪ್ಲೇಆಫ್​ ಲೆಕ್ಕಾಚಾರ:


ಇಂದಿನ ಪಂದ್ಯ ಪಂಜಾಬ್​ಗಿಂತ ಹೆಚ್ಚಾಗಿ ರಾಜಸ್ಥಾನ್​ ರಾಯಲ್ಸ್​ಗೆ ಪ್ರಮುಖವಾಗಿದೆ. ಏಕೆಂದರೆ ಈ ಪಂದ್ಯ ಪ್ಲೇಆಫ್​ ಕಾರಣದಿಂದ ರಾಜಸ್ಥಾನ್​ ತಂಢಕ್ಕೆ ಅತ್ಯಂತ ಮಹತ್ವದ್ದಾಗಿದೆ. ಇಂದಿನ ಪಂದ್ಯ ಗೆದ್ದರೆ ರಾಜಸ್ಥಾನ್ ತಂಡಕ್ಕೆ ಪ್ಲೇಆಫ್​ ಆಸೆ ಜೀವಂತವಾಗಿರಲಿದೆ. ಆದರೆ ಅದು ಮುಂದಿನ ಆರ್​ಸಿಬಿ ಮತ್ತು ಮುಂಬೈ ಇಂಢಿಯನ್ಸ್ ಪಂದ್ಯಗಳ ಗೆಲುವಿನ ಮೇಲೆ ನಿರ್ಧಾರವಾಗಲಿದೆ. ಇತ್ತ ಪಂಜಾಬ್​ಗೂ ಸಹ ಪ್ಲೇಆಫ್​ ಆಸೆ ಜೀವಂತವಾಗಿದೆ. ಆದರೆ ಹೆಚ್ಚಿನ ಅವಕಾಶವಿಲ್ಲದ ಕಾರಣ ಬಹುತೇಕ ಪ್ಲೇಆಫ್ ರೇಸಿನಿಂದ ಹೊರಬಿದ್ದಂತಾಗಿದೆ.


ಉಭಯ ತಂಡಗಳ ಹೆಡ್​ ಟು ಹೆಡ್​:


ಪಂಜಾಬ್ ಮತ್ತು ರಾಜಸ್ಥಾನ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 25 ಬಾರಿ ಮುಖಾಮುಖಿಯಾಗಿದ್ದು, ರಾಜಸ್ಥಾನ್ ರಾಯಲ್ಸ್ 14 ಬಾರಿ ಗೆದ್ದಿದ್ದರೆ, ಪಂಜಾಬ್ 11 ಬಾರಿ ಗೆದ್ದಿದೆ. ಈ ಬಾರಿ ಐಪಿಎಲ್​ ಅಂಕಪಟ್ಟಿಯಲ್ಲಿ ಉಭಯ ತಂಡಗಳು 12 ಅಂಕಗಳನ್ನು ಹೊಂದಿದ್ದಾರೆ ಮತ್ತು ಉತ್ತಮ ನಿವ್ವಳ ರನ್ ರೇಟ್ ಆಧಾರದ ಮೇಲೆ ರಾಜಸ್ಥಾನವು ಪಂಜಾಬ್​ಗಿಂತ ಮುಂದಿದೆ. ಉಭಯ ತಂಡಗಳು ಪ್ಲೇಆಫ್ ತಲುಪುವ ನಿರೀಕ್ಷೆ ಇನ್ನೂ ಹಾಗೆಯೇ ಇದೆ. ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೆಯೋ ಅದು ಇತರೆ ತಂಡಗಳ ಫಲಿತಾಂಶವನ್ನೂ ಅವಲಂಬಿಸಬೇಕಿದೆ.


ಇದನ್ನೂ ಓದಿ: Sorry ಮ್ಯಾಂಗೋ! ಕೊಹ್ಲಿ ಜೊತೆ ಕಿರಿಕ್​ ಮಾಡಿದ್ದ ನವೀನ್​ ಉಲ್​ ಹಕ್​​ಗೆ ಸ್ವಿಗ್ಗಿ ಟಾಂಗ್!


ಪಿಚ್ ವರದಿ:


ಮ್ಯಾಥ್ಯೂ ಹೇಡನ್ ಮತ್ತು ಮುರಳಿ ಕಾರ್ತಿಕ್ ಪ್ರಕಾರ, ವಿಕೆಟ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ಬಯಸುತ್ತದೆ. ಇಬ್ಬನಿಯ ಪಾತ್ರ ಮುಖ್ಯವಾಗುವುದಿಲ್ಲ. ಈ ವಿಕೆಟ್‌ನಲ್ಲಿ ದೆಹಲಿ ಮತ್ತು ಪಂಜಾಬ್ ತಂಡಗಳು ಮುಖಾಮುಖಿಯಾಗಿದ್ದವು. ಹೀಗಾಗಿ ಮತ್ತೊಂದು ಬಿಗ್​ ಫೈಟ್​ ನಿರೀಕ್ಷೆಯಿದೆ. ಇಂದು ಧರ್ಮಶಾಲಾದಲ್ಲಿ ಹವಾಮಾನವು ಉತ್ತಮವಾಗಿದೆ. ಪಂದ್ಯದ ದಿನದಂದು ತಾಪಮಾನವು ಸುಮಾರು 23 ° C ನಷ್ಟು 44% ಆರ್ದ್ರತೆ ಮತ್ತು 11 km/h ಗಾಳಿಯ ವೇಗವನ್ನು ನಿರೀಕ್ಷಿಸಲಾಗಿದೆ. ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇಲ್ಲ.
ಪಂಜಾಬ್​- ರಾಜಸ್ಥಾನ್​ ಪ್ಲೇಯಿಂಗ್​ 11:


ರಾಜಸ್ಥಾನ್​ ರಾಯಲ್ಸ್ ಪ್ಲೇಯಿಂಗ್​ 11: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (w/c), ದೇವದತ್ ಪಡಿಕ್ಕಲ್, ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್, ಆಡಮ್ ಝಂಪಾ, ಟ್ರೆಂಟ್ ಬೌಲ್ಟ್, ನವದೀಪ್ ಸೈನಿ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.


ಪಂಜಾಬ್​ ಕಿಂಗ್ಸ್ ಪ್ಲೇಯಿಂಗ್​ 11: ಶಿಖರ್ ಧವನ್(ಸಿ), ಪ್ರಭಾಸಿಮ್ರಾನ್ ಸಿಂಗ್, ಅಥರ್ವ ಟೈಡೆ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕುರಾನ್, ಜಿತೇಶ್ ಶರ್ಮಾ(ಡಬ್ಲ್ಯೂ), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್.

First published: