• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • RR vs PBKS: ಪಂಜಾಬ್​ ವಿರುದ್ಧ ರಾಜಸ್ಥಾನ್​ಗೆ ರೋಚಕ ಗೆಲುವು, ಟೂರ್ನಿಯಿಂದ ಹೊರಬಿದ್ದ ಪಂಜಾಬ್

RR vs PBKS: ಪಂಜಾಬ್​ ವಿರುದ್ಧ ರಾಜಸ್ಥಾನ್​ಗೆ ರೋಚಕ ಗೆಲುವು, ಟೂರ್ನಿಯಿಂದ ಹೊರಬಿದ್ದ ಪಂಜಾಬ್

ಪಂಜಾಬ್​ ಮತ್ತು ರಾಜಸ್ಥಾನ್​

ಪಂಜಾಬ್​ ಮತ್ತು ರಾಜಸ್ಥಾನ್​

PBKS vs RR: ರಾಜಸ್ಥಾನ್​ ರಾಯಲ್ಸ್ ತಂಡವು ನಿಗದಿತ 19.4 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 189 ರನ್ ಗಳಿಸುವ ಮೂಲಕ 4 ವಿಕೆಟ್​ಗಳ ರೋಚಕ ಜಯ ದಾಖಲಿಸಿತು. ಈ ಮೂಲಕ ರಾಜಸ್ಥಾನ್​ಗೆ ಪ್ಲೇಆಫ್​ ಆಸೆ ಇನ್ನೂ ಜೀವಂತವಾಗಿದ್ದು, ಪಂಜಾಬ್​ ಐಪಿಎಲ್​ನಿಂದ ಹೊರಬಿದ್ದಿದೆ.

  • Share this:

ಪಂಜಾಬ್ ಕಿಂಗ್ಸ್ ಬ್ಯಾಟ್ಸ್‌ಮನ್‌ಗಳು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಐಪಿಎಲ್​ 2023 (IPL 2023) ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ಗೆಲ್ಲಲೇಬೇಕಾದ ಯುದ್ಧದಲ್ಲಿ, ಪಂಜಾಬ್ ಬ್ಯಾಟ್ಸ್‌ಮನ್‌ಗಳು ಅಂತಿಮವಾಗಿ ಅಬ್ಬರಿಸಿದರು. ಇದರೊಂದಿಗೆ ರಾಜಸ್ಥಾನ್ ರಾಯಲ್ಸ್ (PBKS vs RR) ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 187 ರನ್ ಗಳಿಸಿತು. ಆದರೆ ಈ ಮೊತ್ತ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್ ತಂಡವು ನಿಗದಿತ 19.4 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 189 ರನ್ ಗಳಿಸುವ ಮೂಲಕ 4 ವಿಕೆಟ್​ಗಳ ರೋಚಕ ಜಯ ದಾಖಲಿಸಿತು. ಈ ಮೂಲಕ ರಾಜಸ್ಥಾನ್​ಗೆ ಪ್ಲೇಆಫ್​ ಆಸೆ ಇನ್ನೂ ಜೀವಂತವಾಗಿದ್ದು, ಪಂಜಾಬ್​ ಐಪಿಎಲ್​ನಿಂದ ಹೊರಬಿದ್ದಿದೆ.


ಜೈಸ್ವಾಲ್​ - ಪಡಿಕ್ಕಲ್ ಉತ್ತಮ ಜೊತೆಯಾಟ:


ಇನ್ನು, ಪಂಜಾಬ್​ ನೀಡಿದ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್ ತಂಡವು 19.4 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 189 ರನ್ ಗಳಿಸಿತು. ರಾಜಸ್ಥಾನ್​ ಪರ ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್​ ಮತ್ತು ಜೋಸ್ ಬಟ್ಲರ್​ ಉತ್ತಮ ಆರಂಭ ನೀಡಲಿಲ್ಲ. ಬಟ್ಲರ್ 4 ಎಸೆತದಲ್ಲಿ 0 ರನ್​ ಗಳಿಸುವ ಮೂಲಕ ಔಟ್​ ಆದರು. ಬಳಿಕ ಕ್ರೀಸ್​ ಗೆ ಬಂದ ದೇವದತ್​ ಪಡಿಕ್ಕಲ್ ಹಾಗೂ ಜೈಸ್ವಾಲ್​ ಉತ್ತಮ ಜೊತೆಯಾಟವಾಡಿದರು. ಈ ಜೋಡಿ 2ನೇ ವಿಕೆಟ್​ಗೆ 73 ರನ್ ಗಳ ಜೊತೆಯಾಟವಾಡಿದರು. ಈ ವೇಳೆ ದೇವದತ್​ ಪಡಿಕ್ಕಲ್ 30 ಎಸೆತದಲ್ಲಿ 5 ಬೌಂಡರಿ ಹಾಗೂ 3 ಸಿಕ್ಸ್ ಮೂಲಕ 51 ರನ್ ಹಾಗೂ ಯಶಸ್ವಿ ಜೈಸ್ವಾಲ್​ 36 ಎಸೆತದಲ್ಲಿ 8 ಫೋರ್​ ಮೂಲಕ 50 ರನ್​ ಗಳಿಸಿದರು. ಆದರೆ ಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್​ 2 ರನ್​ ಗಳಿಸಿ ವಿಕೆಟ್​ ಒಪ್ಪಿಸುವ ಮೂಲಕ ಮಹತ್ವದ ಪಂದ್ಯದ ವೇಳೆ ತಂಡಕ್ಕೆ ನೆರವಾಗಲಿಲ್ಲ. ಉಳಿದಂತೆ ರಿಯಾನ್ ಪರಾಗ್ 20 ರನ್, ಹಿಟ್ಮಾಯಾರ್​


ಕೊನೆಯ 2 ಓವರ್​ನಲ್ಲಿ 46 ರನ್:


ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಪ್ರಭ್ ಬೌಲಿಂಗ್ ನಲ್ಲಿ ಸಿಮ್ರಾನ್ ಸಿಂಗ್ (2) ಕ್ಯಾಚ್ ನೀಡಿ ಔಟಾದರು. ಎರಡು ಬೌಂಡರಿ ಹಾಗೂ 1 ಸಿಕ್ಸರ್ ನೊಂದಿಗೆ ಟಚ್ ನಲ್ಲಿ ಕಾಣಿಸಿಕೊಂಡ ನಾಯಕ ಶಿಖರ್ ಧವನ್ (17) ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಅಥರ್ವ (19) ಮತ್ತು ಲಿವಿಂಗ್ ಸ್ಟೋನ್ (9) ನಿರಾಸೆ ಮೂಡಿಸಿದರು. ಆದರೆ ಜಿತೇಶ್ ಶರ್ಮಾ ಕೆಲ ಸಮಯ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಸ್ಯಾಮ್ ಕರನ್ ಜೊತೆ 5ನೇ ವಿಕೆಟ್ ಗೆ 64 ರನ್ ಜೊತೆಯಾಟವಾಡಿದರು.


ಇದನ್ನೂ ಓದಿ: IPL 2023 Playoff Scenarios: ಆರ್​ಸಿಬಿ ಪ್ಲೇಆಫ್​ ಬಹುತೇಕ ಫಿಕ್ಸ್! ಆದ್ರೂ ಶುರುವಾಯ್ತು ಹೊಸ ಲೆಕ್ಕಾಚಾರ


ಆದರೆ ನಿರ್ಣಾಯಕ ಸಮಯದಲ್ಲಿ ಸೈನಿ ಔಟಾದರು. ಪಂಜಾಬ್ ಕಿಂಗ್ಸ್ ಪರವಾಗಿ ಸ್ಯಾಮ್ ಕರಣ್ (31 ಎಸೆತಗಳಲ್ಲಿ ಔಟಾಗದೆ 49; 4 ಬೌಂಡರಿ; 2 ಸಿಕ್ಸರ್) ಜಿತೇಶ್ ಶರ್ಮಾ (28 ಎಸೆತಗಳಲ್ಲಿ 44; 3 ಬೌಂಡರಿ, 3 ಸಿಕ್ಸರ್) ಮಿಂಚಿದರು. ಕೊನೆಯಲ್ಲಿ ಶಾರುಖ್ ಖಾನ್ (23 ಎಸೆತಗಳಲ್ಲಿ ಔಟಾಗದೆ 41; 4 ಬೌಂಡರಿ, 2 ಸಿಕ್ಸರ್) ಬಿರುಸಿನ ಆಟವಾಡಿದರು. ಇನ್ನು, 18 ಓವರ್‌ಗಳ ಅಂತ್ಯಕ್ಕೆ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗೆ 141 ರನ್ ಗಳಿಸಿತ್ತು. ಆದರೆ ಇಲ್ಲಿಂದ ಆಟದ ಸ್ವರೂಪ ಬದಲಾಯಿತು. 19ನೇ ಓವರ್ ಬೌಲ್ ಮಾಡಲು ಯುಜ್ವೇಂದ್ರ ಚಾಹಲ್ ಬೌಲಿಂಗ್ ಮಾಡಲು ಬಂದಾಗ, ಆ ಓವರ್ ನಲ್ಲಿ ಪಂಜಾಬ್ ಬ್ಯಾಟ್ಸ್ ಮನ್ ಗಳು ಅಬ್ಬರಿಸಿದರು.




3 ಸಿಕ್ಸರ ಮತ್ತು 2 ಬೌಂಡರಿ ಸೇರಿ ಒಟ್ಟು 28 ರನ್ ಚಚ್ಚಿದರು. ಕೊನೆಯ ಓವರ್‌ನಲ್ಲಿ ಶಾರುಖ್ ಖಾನ್ 4, 6, 4 ರೊಂದಿಗೆ ಭರ್ಜರಿ ಬ್ಯಾಟಿಂಗ್​ ಮಾಡಿದರು. ಕೊನೆಯ ಎರಡು ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ 46 ರನ್ ಗಳಿಸಿತು. ಬಹುದಿನಗಳ ನಂತರ ಪಂದ್ಯ ಆಡುತ್ತಿರುವ ನವದೀಪ್ ಸೈನಿ 3 ವಿಕೆಟ್ ಪಡೆದು ಮಿಂಚಿದರು.

top videos
    First published: