ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2023) 16ನೇ ಋತುವಿನ 27ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ (PBKS vs RCB) ಸೆಣಸಾಡುತ್ತಿದೆ. ಐಪಿಎಲ್ 2023ರ ಈ ಪಂದ್ಯ ಮೊಹಾಲಿಯಲ್ಲಿ ನಡೆಯುತ್ತಿದೆ. ಆರ್‌ಸಿಬಿ ನಾಯಕ ಫಾಫ್ ಡುಪ್ಲೆಸಿ ಇದುವರೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದು, ಆರೆಂಜ್ ಕ್ಯಾಫ್ ಹೋಲ್ಡರ್ ಆಗಿದ್ದಾರೆ. ಇದರ ನಡುವೆ ಗಾಯದ ಸಮಸ್ಯೆಯ ನಡುವೆಯೂ ಫಾಫ್ ಬ್ಯಾಟಿಂಗ್ ಮಾಡಿದ್ದಾರೆ. ಆದರೆ ಫಿಲ್ಡಿಂಗ್ ಮಾಡುವುದಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ. ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಿಗದಿತ 20 ಓವರ್ನಲ್ಲಿ 4 ವಿಕೆಟ್ ನಷ್ಟ್ಕಕೆ 174 ರನ್ ಗಳಿಸುವ ಮೂಲಕ ಪಂಜಾಬ್ ತಂಡಕ್ಕೆ 175 ರನ್ ಟಾರ್ಗೆಟ್ ನೀಡಿದೆ.
ಫಾಫ್ - ಕೊಹ್ಲಿ ಭರ್ಜರಿ ಬ್ಯಾಟಿಂಗ್:
ಇನ್ನು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 20 ಓವರ್ನಲ್ಲಿ 4 ವಿಕೆಟ್ ನಷ್ಟ್ಕಕೆ 174 ರನ್ ಗಳಿಸಿತು. ಆರ್‌ಸಿಬಿ ಪರ ಇಂದು ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೇಸಿಸ್ ಶತಕದ ಜೊತೆಯಾಟವಾಡಿದರು. ಇವರಿಬ್ಬರೂ 137 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ವಿರಾಟ್ ಕೊಹ್ಲಿ 47 ಎಸೆತದಲ್ಲಿ 1 ಸಿಕ್ಸ್ ಮತ್ತು 5 ಫೋರ್ ಮೂಲಕ 59 ರನ್ ಗಳಿಸಿದರು. ಅದರಂತೆ ಫಾಫ್ ಡುಪ್ಲೇಸಿಸ್ ಸಹ 56 ಎಸೆತದಲ್ಲಿ 5 ಸಿಕ್ಸ್ ಮತ್ತು 5 ಫೋರ್ ಮೂಲಕ 84 ರನ್ ಗಳಿಸಿದರು. ಉಳಿದಂತೆ ಗ್ಲೇನ್ ಮ್ಯಾಕ್ಸ್‌ವೆಲ್ ಶೂನ್ಯ, ದಿನೇಶ್ ಕಾರ್ತಿಕ್ 7 ರನ್, ಮಹಿಪಾಲ್ ಲೋಮ್ರೋರ್ 7 ರನ್ ಮತ್ತು ಶಹ್ಬಾಜ್ ಅಹ್ಮದ್ 5 ರನ್ ಗಳಿಸಿದರು.
Innings Break!
Fifties from openers @imVkohli & @faf1307 power @RCBTweets to 174/4 in the first innings 👌🏻👌🏻
Will it be enough for @PunjabKingsIPL? We'll find out soon 😎
Scorecard ▶️ https://t.co/CQekZNsh7b#TATAIPL | #PBKSvRCB pic.twitter.com/GUMlqjfxqT
— IndianPremierLeague (@IPL) April 20, 2023
ಇದನ್ನೂ ಓದಿ: Virat Kohli: ಆರ್‌ಸಿಬಿ ಬಿಡುವ ಮನಸ್ಸು ಮಾಡಿದ್ದೆ! ಐಪಿಎಲ್ ನಡುವೆ ಹೊಸ ಬಾಂಬ್ ಸಿಡಿಸಿದ ಕಿಂಗ್ ಕೊಹ್ಲಿ
ಕೊಹ್ಲಿ - ಡುಪ್ಲೆಸಿ ಭರ್ಜರಿ ಜೊತೆಯಾಟ:
ಐಪಿಎಲ್ 2023ರಲ್ಲಿ ಇಲ್ಲಿಯವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸೆ ಮತ್ತು ವಿರಾಟ್ ಕೊಹ್ಲಿ 473 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದಾರೆ. ಈವರೆಗೆ ಯಾವುದೇ ಜೋಡಿ 300 ರನ್‌ಗಳ ಗಡಿ ದಾಟಲು ಸಾಧ್ಯವಾಗಿಲ್ಲ. ಇದರಿಂದಾಗಿ ಆರ್ಸಿಬಿಯ ಈ ಆರಂಭಿಕ ಜೋಡಿ ಐಪಿಎಲ್ನಲ್ಲಿ ಹೊಸ ದಾಖಲೆ ಬರೆಯುವ ಸನಿಹದಲ್ಲಿದೆ.
ಆರ್‌ಸಿಬಿ - ಪಂಜಾಬ್ ಪ್ಲೇಯಿಂಗ್ 11:
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕುರಾನ್(ಸಿ), ಜಿತೇಶ್ ಶರ್ಮಾ(ಡಬ್ಲ್ಯೂ), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ನಾಥನ್ ಎಲ್ಲಿಸ್, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ 11: ವಿರಾಟ್ ಕೊಹ್ಲಿ(ಸಿ), ಫಾಫ್ ಡು ಪ್ಲೆಸಿಸ್, ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್(ಡಬ್ಲ್ಯೂ), ವನಿಂದು ಹಸರಂಗ, ಸುಯಶ್ ಪ್ರಭುದೇಸಾಯಿ, ಹರ್ಷಲ್ ಪಟೇಲ್, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ