ಐಪಿಎಲ್ 2023 (IPL 2023) 46ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (PBKS vs MI) ನಡುವಿನ ಈ ರೋಚಕ ಪಂದ್ಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಮುಂಬೈ ಆರಂಭದಿಂದಲೂ ಪಂಜಾಬ್ ತಂಡವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಇತ್ತ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್ಗೆ 3 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿದರು. ಈ ಟಾರ್ಗೆಟ್ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 18.5 ಓವರ್ಗೆ 4 ವಿಕೆಟ್ ನಷ್ಟಕ್ಕೆ 216 ರನ್ ಗಳಿಸುವ ಮೂಲಕ ಭರ್ಜರಿ 6 ವಿಕೆಟ್ಗಳ ಜಯ ದಾಖಲಿಸಿದೆ. ಈ ಮೂಲಕ ರೋಹಿತ್ ಶರ್ಮಾ ಪಡೆಗೆ ಇನ್ನೂ ಸಹ ಪ್ಲೇಆಫ್ ಆಸೆ ಜೀವಂತವಾಗಿದೆ.
ಇಶಾನ್ ಕಿಶನ್ -ಸೂರ್ಯ ಭರ್ಜರಿ ಬ್ಯಾಟಿಂಗ್:
ಇನ್ನು, ಮುಂಬೈ ಇಂಡಿಯನ್ಸ್ ತಂಡವು 18.5 ಓವರ್ಗೆ 4 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು. ಮುಂಬೈ ಪರ ಇಂದು ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಅವರು 3 ಬಾಲ್ ಆಡಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆದರೆ ಇಶಾನ್ ಕಿಶನ್ 42 ಎಸೆತದಲ್ಲಿ 7 ಬೌಂಡರಿ ಮತ್ತು 4 ಸಿಕ್ಸ್ ಮೂಲಕ 75 ರನ್ ಗಳಿಸಿದರು. ಅವರ ಜೊತೆ ಉತ್ತಮ ಜೊತೆಯಾಟ ನೀಡಿದ ಸೂರ್ಯಕುಮಾರ್ ಯಾದವ್ 31 ಎಸೆತದಲ್ಲಿ 8 ಬೌಂಡರಿ ಮತ್ತು 2 ಸಿಕ್ಸ್ ಮೂಲಕ 66 ರನ್ ಗಳಿಸಿದರು. ಉಳಿದಂತೆ ಕ್ಯಾಮರೂನ್ ಗ್ರೀನ್ 23 ರನ್, ಟೀಮ್ ಡೇವಿಡ್ 19 ರನ್ ಮತ್ತು ತಿಲಕ್ ವರ್ಮಾ 10 ಎಸೆತದಲ್ಲು 3 ಸಿಕ್ಸ್ ಮತ್ತು 1 ಬೌಂಡರಿ ಮೂಲಕ 26 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪಂಜಾಬ್ ಭರ್ಜರಿ ಬ್ಯಾಟಿಂಗ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು ಅಬ್ಬರಿಸಿತು. ಈ ಮೂಲಕ ಮತ್ತೆ 200+ ರನ್ ಗಳಿಸಿದರು. ತಂಡವು ಅಂತಿಮವಾಗಿ 214 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಇನ್ನು, ಪಂಜಾಬ್ ಪರ ಪ್ರಭ್‌ಸಿಮ್ರಾನ್ ಸಿಂಗ್ 9 ರನ್, ಶಿಖರ್ ಧವನ್ 30 ರನ್, ಮ್ಯಾಥ್ಯೂ ಶಾರ್ಟ್ 27 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 82 ರನ್, ಜಿತೇಶ್ ಶರ್ಮಾ 49 ರನ್ ಗಳಿಸುವ ಮೂಲಕ ಬೃಹತ್ ಮೊತ್ತ ಗಳಿಸುವಲ್ಲಿ ಯಶಸ್ವಿಯಾಯಿತು.
ಇದನ್ನೂ ಓದಿ: Kohli vs Gambhir: ಜಗಳವಾಡಿದ ಬಳಿಕ ಮತ್ತೆ ಒಂದಾದ್ರಾ ಕೊಹ್ಲಿ-ಗಂಭೀರ್? ವೈರಲ್ ಆಯ್ತು ಫೋಟೋ
ಐಪಿಎಲ್ಗೆ ಎಂಟ್ರಿಕೊಟ್ಟ ಆಕಾಶ್ ಮಧ್ವಲ್:
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ತಂಡದ ವೇಗದ ಬೌಲರ್ ರಿಲೆ ಮೆರೆಡಿತ್ ಗಾಯಗೊಂಡಿದ್ದಾರೆ, ಆದ್ದರಿಂದ ಅವರ ಬದಲಿಗೆ ಆಕಾಶ್ ಮಧ್ವಲ್ ಅವರನ್ನು ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಲಾಗಿದೆ ಎಂದು ಹೇಳಿದರು. ಐಪಿಎಲ್‌ನಲ್ಲಿ ಆಕಾಶ್ ಮಧ್ವಲ್ ಅವರ ಹೆಸರು ಖಂಡಿತವಾಗಿಯೂ ಹೊಸದು ಆದರೆ ಅವರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಡೆತ್ ಓವರ್‌ಗಳಲ್ಲಿ ಆಕಾಶ್ ಮಧ್ವಲ್ ತೀಕ್ಷ್ಣವಾದ ಬೌಲಿಂಗ್ ಮಾಡಿದರು. ಜೋಫ್ರಾ ಆರ್ಚರ್ 4 ಓವರ್‌ಗಳಲ್ಲಿ 56 ರನ್ ನೀಡಿದರು, ಆಕಾಶ್ 3 ಓವರ್‌ಗಳಲ್ಲಿ 37 ರನ್ ಗಳಿಸಿದರು. ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಮಧ್ವಲ್ ಅವರನ್ನು ಬೌಲ್ ಮಾಡಲು ಕರೆತಂದರು. ಆಕಾಶ್ ತನ್ನ ಮೊದಲ ಓವರ್‌ನಲ್ಲಿ 16 ರನ್ ಗಳಿಸಿದರು. ಇದರ ನಂತರ, ಕ್ಯಾಪ್ಟನ್ ರೋಹಿತ್ ಅವರನ್ನು ಡೆತ್ ಓವರ್‌ನಲ್ಲಿ ತಂದರು.
ಅಲ್ಲಿ ಆಕಾಶ್ 18 ನೇ ಓವರ್‌ನಲ್ಲಿ 12 ರನ್ ಮತ್ತು 20 ನೇ ಓವರ್‌ನಲ್ಲಿ 9 ರನ್ ನೀಡಿದರು. 25 ನವೆಂಬರ್ 1993 ರಂದು ರೂರ್ಕಿಯಲ್ಲಿ ಜನಿಸಿದ ಈ ಬೌಲರ್ ಅನ್ನು ಮುಂಬೈ ಇಂಡಿಯನ್ಸ್ ಕಳೆದ ಋತುವಿನಲ್ಲಿ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿತು ಆದರೆ ಯಾವುದೇ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆಯಲಿಲ್ಲ. ಐಪಿಎಲ್ 2022 ರಲ್ಲಿ ಗಾಯಗೊಂಡ ಸೂರ್ಯಕುಮಾರ್ ಯಾದವ್ ಬದಲಿಗೆ ಆಕಾಶ್ ಅವರನ್ನು ಮುಂಬೈ ಬದಲಿ ಆಟಗಾರನನ್ನು ಸೇರಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ