ಐಪಿಎಲ್ 2023 (IPL 2023) 21ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (LSG vs PBKS) ಮುಖಾಮುಖಿ ಆದವು. ಉಭಯ ತಂಡಗಳ ನಡುವಿನ ಈ ಪಂದ್ಯ ಏಕನಾ ಸ್ಪೋರ್ಟ್ಸ್ ಸಿಟಿಯಲ್ಲಿ (Ekana Sports City) ನಡೆಯಿತು. ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಪಂಜಾಬ್ ತಂಡವನ್ನು ಸ್ಯಾಮ್ ಕರನ್ ಮುನ್ನಡೆಸಿದರು. ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡ ನಿಗಿತ 20 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು 19.3 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವ ಮೂಲಕ 2 ವಿಕೆಟ್ಗಳ ರೋಚಕ ಜಯ ದಾಖಲಿಸಿತು.
ಸಿಕಂದರ್ ರಜಾ ಭರ್ಜರಿ ಬ್ಯಾಟಿಂಗ್:
ಇನ್ನು, ಲಕ್ನೋ ನೀಡಿದ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ತಂಡ 19.3 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 161 ರನ್ ಗಳಿಸುವ ಮೂಲಕ 2 ವಿಕೆಟ್ ಗಳ ರೋಚಕ ಜಯ ದಾಖಲಿಸಿತು.ಪಂಜಾಬ್ ಪರ ಸಿಕಂದರ್ ರಜಾ ಏಕಾಂಗಿ ಹೋರಾಟ ನಡೆಸಿದರು. ಸಿಕಂದರ್ ರಜಾ 41 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಫೊರ್ ಮೂಲಕ 57 ರನ್ ಗಳಿಸಿದರು. ಉಳಿದಂತೆ, ಅಥರ್ವ ತೈಡೆ ಶೂನ್ಯ, ಹರ್ಪ್ರೀತ್ ಭಾಟಿಯಾ 22 ರನ್, ಮ್ಯಾಥ್ಯೂ ಶಾರ್ಟ್ 34 ರನ್, ಜಿತೇಶ್ ಶರ್ಮಾ 2 ರನ್, ಸ್ಯಾಮ್ ಕರನ್ 6 ರನ್, ಪ್ರಭ್ಷಿಮರಣ್ ಸಿಂಗ್ 4 ರನ್, ಕಗಿಸೊ ರಬಾಡ ಶೂನ್ಯ, ಹರ್ಪ್ರೀತ್ ಬ್ರಾರ್ 6 ರನ್, ಶಾರುಖ್ ಖಾನ್ 23 ರನ್ ಗಳಿಸಿದರು.
ಲಯಕ್ಕೆ ಮರಳಿದ ಕನ್ನಡಿಗ ರಾಹುಲ್:
ಇನ್ನು, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಲಕ್ನೋ ಪರ ಇಂದು ನಾಯಕ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಮತ್ತೆ ಲಯಕ್ಕೆ ಬಂದಂತೆ ಕಾಣಿಸಿಕೊಂಡರು. ರಾಹುಲ್ 56 ಎಸೆತದಲ್ಲಿ 1 ಸಿಕ್ಸ್ ಮತ್ತು 8 ಪೋರ್ ಮೂಲಕ 74 ರನ್ ಗಳಿಸಿದರು. ಉಳಿದಂತೆ ಲಕ್ನೋ ಪರ, ಕೈಲ್ ಮೇಯರ್ಸ್ 29 ರನ್, ದೀಪಕ್ ಹೂಡಾ 2 ರನ್, ಕೃನಾಲ್ ಪಾಂಡ್ಯ 18 ರನ್, ಮಾರ್ಕಸ್ ಸ್ಟೋನಿಸ್ 15 ರನ್, ನಿಕೋಲಸ್ ಪೂರನ್ ಶೂನ್ಯ, ಆಯುಷ್ ಬಡೋನಿ 5 ರನ್, ರವಿ ಬಿಷ್ಣೋಯ್ 3 ರನ್ ಗಳಿಸಿದರು.
ಇದನ್ನೂ ಓದಿ: Virat Kohli: ಐಪಿಎಲ್ನಲ್ಲಿ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ! ಈ ಸಾಧನೆ ಮಾಡಿದ ಮೊದಲ ಆಟಗಾರ ವಿರಾಟ್
ಏಕನಾ ಸ್ಟೇಡಿಯಂನಲ್ಲಿ ಅಬ್ಬರಿಸಿದ ಬೌಲರ್ಸ್:
ಇನ್ನು, ಲಕ್ನೋ ಮತ್ತು ಪಂಜಾಬ್ ತಂಡದ ಬೌಲರ್ಗಳು ಇಂದು ಭರ್ಜರಿ ದಾಳಿ ನಡೆಸಿದರು. ಪಂಜಾಬ್ ಪರ ಅರ್ಷದೀಪ್ ಸಿಂಗ್ 1 ವಿಕೆಟ್, ಕಗಿಸೋ ರಬಾಡ 2 ವಿಕೆಟ್, ಸ್ಯಾಮ್ ಕರನ್ 3 ವಿಕೆಟ್ ಹರ್ಪ್ರಿತ್ ಬ್ರಾರ್ 1 ಮತ್ತು ಸಿಕಂಧರ್ ರಾಝಾ 1 ವಿಕೆಟ್ ಪಡೆದು ಮಿಂಚಿದರು. ಅದೇ ರಿತಿ ಲಕ್ನೋ ಪರ ಸಹ ಬೌಲರ್ಗಳು ಉತ್ತಮ ದಾಳಿ ನಡೆಸಿದರು. ಲಕ್ನೋ ಪರ ಯಧುವೀರ್ ಸಿಂಗ್ 2 ವಿಕೆಟ್, ಮಾರ್ಕ್ ವುಡ್ 2 ವಿಕೆಟ್, ರವಿ ಬಿಷ್ಣೋಯ್ 2 ವಿಕೆಟ್ ಮತ್ತು ಕೃಷ್ಣಪ್ಪ ಗೌತಮ್ ಮತ್ತು ಕೃನಲ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.
ಭುಜದ ನೋವಿಗೆ ತುತ್ತಾದ ಧವನ್:
ಕಳೆದ ಪಂದ್ಯದಲ್ಲಿ ಶಿಖರ್ ಧವನ್ ಭುಜದ ನೋವಿಗೆ ಒಳಗಾಗಿದ್ದರು ಎಂದು ಟಾಸ್ ನಂತರ ಸ್ಯಾಮ್ ಕರನ್ ಹೇಳಿದ್ದಾರೆ. ಆದರೆ, ಧವನ್ ಗಾಯ ಎಷ್ಟು ಗಂಭೀರವಾಗಿದೆ. ಈ ಬಗ್ಗೆ ಕರನ್ ಹೆಚ್ಚಿನ ಮಾಹಿತಿ ನೀಡಿಲ್ಲ. ಧವನ್ ಅನುಪಸ್ಥಿತಿಯಲ್ಲಿ ಸಿಕಂದರ್ ರಜಾ ಮತ್ತು ಹರ್‌ಪ್ರೀತ್ ಭಾಟಿಯಾ ಈ ಪಂದ್ಯವನ್ನು ಆಡುತ್ತಿದ್ದಾರೆ. ರನ್ ಚೇಸ್ ಸಮಯದಲ್ಲಿ ಪಂಜಾಬ್ ಖಂಡಿತವಾಗಿಯೂ ಧವನ್ ಅವರನ್ನು ಮಿಸ್ ಮಾಡಿಕೊಂಡಿತು. ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಶಿಖರ್ ಧವನ್ ಇದ್ದು, ಅವರು ಐಪಿಎಲ್ 2023ರ 4 ಪಂದ್ಯಗಳ ಮೂಲಕ 233 ರನ್ ಗಳಿಸಿದ್ದಾರೆ. ಅವರು 4 ಪಂದ್ಯಗಳಲ್ಲಿ 2 ಅರ್ಧಶತಕಗಳನ್ನು ಗಳಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಧವನ್ ಅಜೇಯ 99 ರನ್ ಗಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ