ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ (PBKS vs LSG) ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಈ ಪಂದ್ಯ ಪಂಜಾಬ್‌ನ ತವರು ಮೈದಾನವಾದ ಪಂಜಾಬ್ ಕ್ರಿಕೆಟ್ ಸ್ಟೇಡಿಯಂನಲ್ಲಿ (Punjab Cricket Association Stadium) ನಡೆಯುತ್ತಿದೆ. ಐಪಿಎಲ್ನಲ್ಲಿ ಎರಡೂ ತಂಡಗಳು 4-4 ಪಂದ್ಯಗಳನ್ನು ಗೆದ್ದಿವೆ. ಪ್ರಸಕ್ತ ಋತುವಿನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದು, ಪಂಜಾಬ್ ತಮ್ಮ ತವರಿನಲ್ಲಿ ಲಕ್ನೋವನ್ನು ಸೋಲಿಸಿತು. ಇಂತಹ ಪರಿಸ್ಥಿತಿಯಲ್ಲಿ ಲಕ್ನೋ ತಂಡ ಹಳೆಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಸಿದ್ಧವಾಗಿದೆ. ಈಗಾಗಲೇ ಟಾಸ್ ಆಗಿದ್ದು, ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಶಿಖರ್ ಧವನ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಲಕ್ನೋ ತಂಡವು ಬ್ಯಾಟಿಂಗ್ ಆರಂಭಿಸಲಿದೆ.
ಲಕ್ನೋ -ಪಂಜಾಬ್ ಹೆಡ್ ಟು ಹೆಡ್:
ಒಟ್ಟಾರೆ ಈ ಲೀಗ್‌ನಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದು, ಎರಡೂ ತಲಾ ಒಂದು ಪಂದ್ಯವನ್ನು ಗೆದ್ದಿವೆ. ಈ ಪಂದ್ಯವೂ ರೋಚಕವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ. ಎರಡೂ ತಂಡಗಳಲ್ಲಿ ಒಂದಕ್ಕಿಂತ ಹೆಚ್ಚು ಬಲಿಷ್ಠ ಆಟಗಾರರಿದ್ದಾರೆ. ಲಕ್ನೋ ತಂಡ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿತ್ತು. ಗುಜರಾತ್ ವಿರುದ್ಧದ 136 ರನ್‌ಗಳ ಗುರಿಯನ್ನು ಬೆನ್ನಟ್ಟಲು ಕೆಎಲ್ ರಾಹುಲ್ ಪಡೆಗೆ ಸಾಧ್ಯವಾಗಲಿಲ್ಲ. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಕಳೆದ ಎರಡು ಪಂದ್ಯಗಳಲ್ಲಿ ಸೋತಿದೆ. ಕಳೆದ 3 ಪಂದ್ಯಗಳಲ್ಲಿ ನಿಯಮಿತ ನಾಯಕ ಶಿಖರ್ ಧವನ್ ಭುಜದ ಗಾಯದ ಕಾರಣ ಆಡಲಿಲ್ಲ.
ಐಪಿಎಲ್ 2023 ಅಂಕಪಟ್ಟಿ:
ಐಪಿಎಲ್ 2023ರ 16ನೇ ಸೀಸನ್ನ ಪಾಯಿಂಟ್ಸ್ ಟೇಬಲ್ ಬಗ್ಗೆ ಮಾತನಾಡುವುದಾದರೆ ಲಕ್ನೋ ತಂಡ 7 ಪಂದ್ಯಗಳಲ್ಲಿ 4 ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಈ ವರ್ಷ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅದೇ ಸಮಯದಲ್ಲಿ, ಪಂಜಾಬ್ ಕಿಂಗ್ಸ್ ಸಹ 7 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ ಆರನೇ ಸ್ಥಾನದಲ್ಲಿದೆ. ನೆಟ್ ರನ್ ರೇಟ್ ನಲ್ಲಿ ಲಕ್ನೋಗಿಂತ ಹಿಂದುಳಿದಿದ್ದಾರೆ. ಇತ್ತ ಲಕ್ನೋ ತಂಡ ಗೆಲುವಿನ ಲಯದಲ್ಲಿದ್ದರೂ ತಂಡದ ನಾಯಕ ಕೆಎಲ್ ರಾಹುಲ್ ಮಾತ್ರ ಬ್ಯಾಟಿಂಗ್ ದೊಡ್ಡ ತಲೆನೋವಾಗಿದೆ.
ಇದನ್ನೂ ಓದಿ: IPL 2023: ಇಷ್ಟು ದಿನ ಒಂದು ಲೆಕ್ಕ, ಇನ್ಮೇಲೆ ಒಂದು ಲೆಕ್ಕ; ಐಪಿಎಲ್ನಲ್ಲಿ ಈಗ ಶುರುವಾಗುತ್ತೆ RCB ರಿಯಲ್ ಜರ್ನಿ
ಮೊಹಾಲಿ ಪಿಚ್ - ಹವಾಮಾನ ಅಪ್‌ಡೇಟ್:
ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿರುವ ಪಿಚ್ ದೇಶದ ಅತ್ಯುತ್ತಮ ಬ್ಯಾಟಿಂಗ್ ಮೇಲ್ಮೈಗಳಲ್ಲಿ ಒಂದಾಗಿದೆ. ವೇಗದ ಬೌಲರ್‌ಗಳು ಹೊಸ ಬೌಲ್ನೊಂದಿಗೆ ಸಖತ್ ಬೌನ್ಸ್ಗಳನ್ನು ಹಾಖಬಹುದು. ಆದರೆ ಸ್ಪಿನ್ನರ್‌ಗಳು ಮಧ್ಯಮ ಓವರ್‌ಗಳಲ್ಲಿ ಮಿಂಚುತ್ತಾರೆ. ಬಿಂದ್ರಾ ಸ್ಟೇಡಿಯಂನಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 165 ಆಗಿದೆ ಮತ್ತು ಚೇಸಿಂಗ್ ತಂಡವು ಉತ್ತಮ ಗೆಲುವಿನ ದಾಖಲೆಯನ್ನು ಹೊಂದಿದೆ. ಏಪ್ರಿಲ್ 28 ರಂದು ಮೊಹಾಲಿಯಲ್ಲಿ ಹವಾಮಾನವು ಹೆಚ್ಚಾಗಿ ಮೋಡ ಕವಿದ ವಾತಾವರಣವನ್ನು ನಿರೀಕ್ಷಿಸಲಾಗಿದೆ. ಆದರೂ, ಮಳೆಯು ಹಾಳಾಗುವ ಸಾಧ್ಯತೆಯಿಲ್ಲ ಎಂದು ಸ್ಥಳಿಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಪಂಜಾಬ್ - ಲಕ್ನೋ ಪ್ಲೇಯಿಂಗ್ 11:
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ 11: ಅಥರ್ವ ಟೈಡೆ, ಶಿಖರ್ ಧವನ್(ಸಿ), ಸಿಕಂದರ್ ರಜಾ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಜಿತೇಶ್ ಶರ್ಮಾ(ಪ), ಶಾರುಖ್ ಖಾನ್, ಕಗಿಸೊ ರಬಾಡ, ರಾಹುಲ್ ಚಾಹರ್, ಗುರ್ನೂರ್ ಬ್ರಾರ್, ಅರ್ಶ್‌ದೀಪ್ ಸಿಂಗ್.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಕೆಎಲ್ ರಾಹುಲ್(ಸಿ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್(ಡಬ್ಲ್ಯೂ), ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಅವೇಶ್ ಖಾನ್, ಯಶ್ ಠಾಕೂರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ