ಮೊಹಾಲಿಯಲ್ಲಿ ರನ್‌ಗಳ ಮಹಾಪೂರವೇ ಹರಿಯಿತು. ಲಕ್ನೋ ಬ್ಯಾಟರ್‌ಗಳು ಒಬ್ಬರ ನಂತರ ಒಬ್ಬರಂತೆ ಪಂಜಾಬ್ ಬೌಲರ್‌ಗಳ ಮೇಲೆ ದಾಳಿ ನಡೆಸಿದರು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ (PBKS vs LSG) ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತು. ಈ ಮೂಲಕ ಲಕ್ನೋ ತಂಡ ಐಪಿಎಲ್ನಲ್ಲಿ (IPL) ಅತಿ ಹೆಚ್ಚು ರನ್ ಸಿಡಿಸಿದ 2ನೇ ತಂಡ ಎಂಬ ಖ್ಯಾತಿಗೆ ಪಾತ್ರವಾಯಿತು. ಈ ದಾಖಲೆಯ ಮೊತ್ತ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 19.5 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 201 ರನ್ ಗಳಿಸುವ ಮೂಲಕ 56 ರನ್ ಗಳಿಂದ ಸೋಲನ್ನಪ್ಪಿತು.
ಭರ್ಜರಿ ಫೈಪೋಟಿ ನೀಡಿದ ಪಂಜಾಬ್:
ಇನ್ನು, ಲಕ್ನೋ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ಪಂಜಾಬ್ ಪಡೆ ಸರಿಯಾದ ಉತ್ತರವನ್ನೇ ನೀಡಿತು. ಆದರೆ ಕೊನೆಯಲ್ಲಿ ಎಡವಿತು. ಪಂಜಾಬ್ ಅಂತಿಮವಾಗಿ 19.5 ಓವರ್ಗಳಲ್ಲಿ 10 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು. ಪಂಜಾಬ್ ಪರ ಸಿಂಗ್ 9 ರನ್, ಶಿಖರ್ ಧವನ್ 1 ರನ್, ಸಿಕಂದರ್ ರಜಾ 36 ರನ್, ಲಿಯಾಮ್ ಲಿವಿಂಗ್‌ಸ್ಟೋನ್ 23 ರನ್, ಸ್ಯಾಮ್ ಕರನ್ 21 ರನ್, ಅಥರ್ವಾ 66 ರನ್, ಜಿತೇಶ್ ಶರ್ಮಾ 24 ರನ್, ಶಾರುಖ್ ಖಾನ್ 6 ರನ್, ಕಗಿಸೊ ರಬಾಡ ಶೂನ್ಯ, ಅರ್ಶ್‌ದೀಪ್ ಸಿಂಗ್ 2 ರನ್ ಗಳಿಸಿದರು.
Match 38. Lucknow Super Giants Won by 56 Run(s) https://t.co/cS0dBLmzWT #TATAIPL #PBKSvLSG #IPL2023
— IndianPremierLeague (@IPL) April 28, 2023
ಇನ್ನು, ವಿಚಿತ್ರ ಎಂಬಂತೆ ಇಂದು ಲಕ್ನೋ ಪರ ಬರೋಬ್ಬರಿ 9 ಆಟಗಾರರು ಬೌಲಿಂಗ್ ಮಾಡಿದರು. ಕೀಪರ್, ನಾಯಕ ಕೆಎಲ್ ರಾಹುಲ್ ಹೊರತುಪಡಿಸಿ ಉಳಿದವರೆಲ್ಲರೂ ಬೌಲಿಂಗ್ ಮಾಡಿದ್ದಾರೆ. ಲಕ್ನೋ ಪರ ಕೈಲ್ ಮೇಯರ್ಸ್ 1 ಓವರ್ 4 ರನ್, ಮಾರ್ಕಸ್ ಸ್ಟೊಯಿನಿಸ್ 1.5 ಓವರ್ಗೆ 21 ರನ್ 1 ವಿಕೆಟ್ , ಕೃನಾಲ್ ಪಾಂಡ್ಯ 1 ಓವರ್ 13 ರನ್, ನವೀನ್-ಉಲ್-ಹಕ್ 4 ಓವರ್ಗೆ 30 ರನ್ 3 ವಿಕೆಟ್, ರವಿ ಬಿಷ್ಣೋಯ್ 4 ಓವರ್ಗೆ 41 ರನ್ 2 ವಿಕೆಟ್, ಅವೇಶ್ ಖಾನ್ 2 ಓವರ್ಗೆ 28 ರನ್, ಅಮಿತ್ ಮಿಶ್ರಾ 2 ಓವರ್ 234 ರನ್ ಮತ್ತು ಯಶ್ ಠಾಕೂರ್ 3.4 ಓವರ್ಗೆ 4 ವಿಕೆಟ್ ಪಡೆದರು.
ಇದನ್ನೂ ಓದಿ: LSG vs PBKS: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಿದ ಲಕ್ನೋ ತಂಡ, ಸ್ವಲ್ಪದರಲ್ಲಿಯೇ RCB ದಾಖಲೆ ಸೇಫ್!
ಪಂಜಾಬ್ ಬೌಲರ್‌ಗಳ ಬೆಂಡೆತ್ತಿದ ಲಕ್ನೋ:
ಮೊಹಾಲಿಯಲ್ಲಿ ಅಬ್ಬರಿಸಿದ ಲಕ್ನೋ ಬ್ಯಾಟರ್‌ಗಳು ಇತಿಹಾಸ ನಿರ್ಮಿಸಿದರು. ಲಕ್ನೋ ಬ್ಯಾಟ್ಸ್‌ಮನ್‌ಗಳ ಪೈಕಿ ಸ್ಟೊಯಿನಿಸ್ (40 ಎಸೆತಗಳಲ್ಲಿ 72; 6 ಬೌಂಡರಿ, 5 ಸಿಕ್ಸರ್) ಮತ್ತು ಕೈಲ್ ಮೇಯರ್ಸ್ (24 ಎಸೆತಗಳಲ್ಲಿ 54; 7 ಬೌಂಡರಿ, 4 ಸಿಕ್ಸರ್) ಅರ್ಧಶತಕದೊಂದಿಗೆ ಧೂಳೆಬ್ಬಿಸಿದರು. ಆಯುಷ್ ಬಡೋನಿ (24 ಎಸೆತಗಳಲ್ಲಿ 43 ರನ್; 3 ಬೌಂಡರಿ, 3 ಸಿಕ್ಸರ್) ಮತ್ತು ನಿಕೋಲಸ್ ಪೂರನ್ (19 ಎಸೆತಗಳಲ್ಲಿ 45 ರನ್; 7 ಬೌಂಡರಿ, 1 ಸಿಕ್ಸರ್) ಮಿಂಚಿದರು. ಲಕ್ನೋ ಆರಂಭಿಕ ಆಟಗಾರ ಕೈಲ್ ಮೇಯರ್ಸ್ ವಿಧ್ವಂಸಕರಾದರು.
ಆದರೆ ಓಪನರ್ ಕೆಎಲ್ ರಾಹುಲ್ ಕೇವಲ 12 ರನ್ ಗಳಿಸಿ ಕಗಿಸೊ ರಬಾಡ ಬೌಲಿಂಗ್ ನಲ್ಲಿ ಔಟಾದರು. ಆದರೆ ಇತ್ತ ಮೇಯರ್ಸ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರು. ಬಳಿಕ ಜೊತೆಗೂಡಿದ ಬಡೋನಿ ಮತ್ತು ಕೈಲ್ ಮೇಯರ್ಸ್ ಮೂರನೇ ವಿಕೆಟ್‌ಗೆ 89 ರನ್‌ಗಳ ಜೊತೆಯಾಟವಾಡಿದರು. ಆ ಬಳಿಕ ಸ್ಟೊಯಿನಿಸ್ ಜತೆಗೂಡಿದ ನಿಕೋಲಸ್ ಪೂರನ್ ಕೂಡ ಅಬ್ಬರಿಸಿದರು. ಸ್ಟೊಯಿನಿಸ್ ಕೂಡ ಅರ್ಧಶತಕ ಪೂರೈಸಿದರು. ಅವರು 40 ಎಸೆತಗಳಲ್ಲಿ 73 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ಸಿಡಿದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ