• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • IPL 2023: ಬೌಲರ್‌ಗಳ ಪಾಲಿಗಿದು ಶಾಪ, ಆದ್ರೆ ಬ್ಯಾಟ್ಸ್​ಮನ್​ಗಳಿಗಿದು ವರ; ಕ್ರಿಕೆಟ್​ ಲೋಕದ ಗೇಮ್​ಚೇಂಜರ್​ ಇದು

IPL 2023: ಬೌಲರ್‌ಗಳ ಪಾಲಿಗಿದು ಶಾಪ, ಆದ್ರೆ ಬ್ಯಾಟ್ಸ್​ಮನ್​ಗಳಿಗಿದು ವರ; ಕ್ರಿಕೆಟ್​ ಲೋಕದ ಗೇಮ್​ಚೇಂಜರ್​ ಇದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IPL 2023: ಒಂದೇ ಒಂದು ತಪ್ಪು ಎಸೆತ ಇಡೀ ಮ್ಯಾಚ್‌ ಕೈ ತಪ್ಪಿ ಹೋಗುವಂತೆ ಮಾಡುತ್ತೆ. ಕ್ರೀಸ್‌ನಿಂದ ಬೌಲರ್‌ ಒಂದೇ ಒಂದು ಇಂಚು ಮುಂದೆ ಹೋದ್ರೂ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತೆ.

  • Share this:

ನೋ ಬಾಲ್ ಬ್ಯಾಟ್ಸ್‌ಮನ್‌ಗಳಿಗೆ ಲಕ್ಕಿ ಆದ್ರೆ ಬೌಲರ್‌ಗಳಿಗೆ ಮಾತ್ರ ಪರಮ ಶತ್ರು. ಒಂದೇ ಒಂದು ಬಾಲ್ ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿ ಬಿಡುತ್ತೆ. ಒಂದೇ ಒಂದು ತಪ್ಪು ಎಸೆತ ಇಡೀ ಮ್ಯಾಚ್‌ ಕೈ ತಪ್ಪಿ ಹೋಗುವಂತೆ ಮಾಡುತ್ತೆ. ಕ್ರೀಸ್‌ನಿಂದ ಬೌಲರ್‌ ಒಂದೇ ಒಂದು ಇಂಚು ಮುಂದೆ ಹೋದ್ರೂ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತೆ. ಸದ್ಯ ನಡೆಯುತ್ತಿರುವ ಐಪಿಎಲ್‌ (IPL 2023) ಟೂರ್ನಿಯಲ್ಲಿ ಈ ನೋಬಾಲ್ ರಿಸಲ್ಟ್‌ ಮತ್ತೆ ಸದ್ದು ಮಾಡಿದೆ. ರಾಜಸ್ಥಾನ ಹಾಗೂ ಸನ್‌ರೈಸರ್ಸ್‌ (RR vs SRH) ನಡುವಿನ ಪಂದ್ಯ ಕೊನೆ ಎಸೆತದಲ್ಲಿ ಎಡವಟ್ಟಾಗಿತ್ತು. ಇನ್ನೇನು ಮ್ಯಾಚ್‌ ನಮ್ದೆ ಅನ್ನೋ ಸಂಭ್ರಮದಲ್ಲಿದ್ದಾಗ ರಾಜಸ್ಥಾನ ಆಟಗಾರರಿಗೆ ಅದೊಂದು ನೋಬಾಲ್‌ ಬಿಗ್‌ ಶಾಕ್‌ ಕೊಟ್ಟಿತು. ಗೆಲುವಿನ ಸಂಭ್ರಮದಲ್ಲಿದ್ದ ಆರ್‌ಆರ್‌ ತಂಡಕ್ಕೆ ಆ ಶಾಕ್‌ ನಿಜಕ್ಕೂ ನುಂಗಲಾರದ ಬಿಸಿ ತುಪ್ಪವಾಗಿತ್ತು.


ರೋಚಕತೆ ಪಡೆದ ನೋ ಬಾಲ್​ ಪಂದ್ಯ:


ಮೇ 7, 2023 ಭಾನುವಾರ ರಾಜಸ್ಥಾನ ಹಾಗೂ ಸನ್‌ರೈಸರ್ಸ್‌ ನಡುವಿನ ಪಂದ್ಯ. ಕೊನೆ ಎಸೆತದವರಿಗೂ ಪಂದ್ಯ ರೋಚಕತೆ ಮೂಡಿಸಿತ್ತು. ರಾಜಸ್ಥಾನ ತಂಡ ನೀಡಿದ್ದ ಬೃಹತ್‌ ಟಾರ್ಗೆಟ್‌ ಬೆನ್ನತ್ತಿದ ಸನ್‌ರೈಸರ್ಸ್‌ ತಂಡಕ್ಕೆ ಕೊನೇ ಎಸೆತದಲ್ಲಿ 5 ರನ್ ಅವಶ್ಯಕತೆ ಇತ್ತು. ರಾಜಸ್ಥಾನದ ನಂಬಿಕಸ್ಥ ವೇಗಿ ಸಂದೀಪ್ ಶರ್ಮಾ ಬೌಲ್‌ ಮಾಡ್ತಿದ್ರು. ಸಂದೀಪ್ ಶರ್ಮಾ ಎಸೆದ ಕೊನೇ ಎಸೆತವನ್ನ ಸನ್‌ ರೈಸರ್ಸ್ ತಂಡದ ಅಬ್ದುಲ್ ಸಮದ್‌ ಸಿಕ್ಸರ್‌ ಬಾರಿಸುವ ಆತುರದಲ್ಲಿ ಫೀಲ್ಡರ್‌ ಕೈಗೆ ಕ್ಯಾಚ್‌ ಕೊಟ್ಟಿದ್ರು.


ಕೊನೇ ಎಸೆತದಲ್ಲಿ ಸಮದ್ ಔಟ್ ಆಗ್ತಿದ್ದಂತೆ ರಾಜಸ್ಥಾನ ತಂಡ ಗೆದ್ದು ಬೀಗಿತ್ತು. ಆಟಗಾರರು ಸಂಭ್ರಮದಲ್ಲಿ ತೇಲಾಡ್ತಿದ್ರೆ ಆರ್‌ಆರ್ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕುಣಿದು ಕುಪ್ಪಳಿಸುತ್ತಿದ್ರು. ಆದ್ರೆ ಸಂದೀಪ್ ಶರ್ಮಾ ಮಾಡಿದ ನೋಬಾಲ್ ಪ್ರಮಾದ ಆರ್‌ಆರ್‌ ತಂಡ ಹಾಗೂ ಅಭಿಮಾನಿಗಳ ಸಂಭ್ರಮವನ್ನ ಕೆಲ ಸೆಕೆಂಡ್‌ನಲ್ಲೇ ಕಸಿದು ಕಂಡಿತ್ತು. ಅಭಿಮಾನಿಗಳು ತಲೆ ಮೇಲೆ ಕೈ ಹೊತ್ತು ಕುಳಿತು ಕೊಳ್ಳುವಂತೆ ಮಾಡಿತ್ತು. ಥರ್ಡ್ ಅಂಪೈರ್‌ ನೋಬಾಲ್ ತೀರ್ಪು ನೀಡ್ತಿದ್ದಂತೆ ಇಡೀ ಸ್ಟೇಡಿಯಂ ಸ್ತಬ್ಧವಾಗಿತ್ತು.


ಇದನ್ನೂ ಓದಿ: IPL2023 Playoffs: ಸೋತ್ರೂ RCB ಪ್ಲೇಆಫ್ ತಲುಪಬಹುದು! ಇಲ್ಲಿದೆ ಹೊಸ ಲೆಕ್ಕಾಚಾರ


ಸಂದೀಪ್ ನೋಬಾಲ್ ಎಸೆದ ಪರಿಣಾಮ ನಂತರದ ಬಾಲ್‌ ಅನ್ನು ಫೀಲ್ಡ್‌ ಅಂಪೈರ್‌ ಫ್ರೀಹಿಟ್‌ ನೀಡಿದ್ರು. ಆ ಕೊನೇ ಎಸೆತವನ್ನ ಸಿಕ್ಸರ್‌ಗೆ ಅಟ್ಟಿದ ಸಮದ್‌ ಸನ್‌ ರೈಸರ್ಸ್‌ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಗೆದ್ದು ಸಂಭ್ರಮ ಪಟ್ಟ ಆರ್​ಆರ್‌ ತಂಡ ನೋ ಬಾಲ್‌ ತಪ್ಪಿನಿಂದ ವಿರೋಚಿತ ಸೋಲು ಕಂಡು ಇಡೀ ಪಂದ್ಯವನ್ನೇ ಬಿಟ್ಟುಕೊಡುವಂತಾಯ್ತು. ಹೀರೋ ಆಗಿದ್ದ ಸಂದೀಪ್‌ ಶರ್ಮಾ ಒಂದೇ ನಿಮಿಷದಲ್ಲಿ ವಿಲನ್​ ಆದರು.


ಭುವನೇಶ್ವರ್‌ ನೋಬಾಲ್‌ ಪ್ರಮಾದ:


ಐಪಿಎಲ್‌ ಇತಿಹಾಸದಲ್ಲಿ ಈ ರೀತಿಯ ನೋಬಾಲ್ ಪ್ರಮಾದಗಳು ಇದೇ ಮೊದಲೇನಲ್ಲ. ಒಂದೇ ಒಂದು ತಪ್ಪು ಎಸೆತ ಗೆಲ್ಲೋ ಪಂದ್ಯಗಳನ್ನೇ ಕೈ ಚೆಲ್ಲುವಂತೆ ಮಾಡಿತ್ತು. 2022ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ತಂಡದ ಭುವನೇಶ್ವರ್‌ ರಾಜಸ್ಥಾನ ವಿರುದ್ಧ ಮೊದಲ ಓವರ್‌ ಬೌಲಿಂಗ್ ಮಾಡಿದ್ರು. ಮೊದಲ ನಾಲ್ಕು ಎಸೆತಗಳನ್ನ ಡಾಟ್ ಬಾಲ್ ಮಾಡಿದ ಭುವನೇಶ್ವರ್ ಐದನೇ ಎಸೆತದಲ್ಲಿ ರಾಜಸ್ಥಾನ ಓಪನರ್‌ ಜೋಸ್ ಬಟ್ಲರ್‌ ವಿಕೆಟ್ ಕಬಳಿಸಿದ್ರು. ಆದ್ರೆ ಥರ್ಡ್ ಅಂಪೈರ್‌ ನೋಬಾಲ್ ತೀರ್ಪು ನೀಡ್ತಿದ್ದಂತೆ ಬಟ್ಲರ್‌ಗೆ ಮತ್ತೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿತ್ತು. ಆ ಪಂದ್ಯದಲ್ಲಿ ಭುವಿ ನೋಬಾಲ್‌ನಿಂದ ಜೀವದಾನ ಪಡೆದಿದ್ದ ಬಟ್ಲರ್ ಅಬ್ಬರದ ಬ್ಯಾಟಿಂಗ್‌ ಮಾಡಿದ್ರು.


ಸಿರಾಜ್​ ಹೆಸರಲ್ಲಿದೆ ನೋಬಾಲ್​ ತಪ್ಪು:


2019ರ ಐಪಿಎಲ್‌ನ 17ನೇ ಪಂದ್ಯದಲ್ಲಿ ಆರ್‌ಸಿಬಿ ಹಾಗೂ ಕೋಲ್ಕತ್ತಾ ತಂಡ ಮುಖಾಮುಖಿಯಾಗಿದ್ವು. ಕೋಲ್ಕತ್ತಾ ತಂಡದ ಆ್ಯಂಡ್ರೂ ರಸೆಲ್‌ ಬ್ಯಾಟಿಂಗ್ ಮಾಡ್ತಿದ್ದಾಗ ಮಹಮದ್ ಸಿರಾಜ್‌ ಬೀಮರ್ ಎಸೆದಿದ್ರು. ಆ ಎಸೆತವನ್ನ ರಸೆಲ್‌ ಸಿಕ್ಸರ್‌ಗೆ ಎತ್ತಿದ್ರು. ಸಿರಾಜ್‌ ಭೀಮರ್ ಹಾಕಿದ್ರಿಂದ ಬೌಲಿಂಗ್ ಕಂಪ್ಲೀಟ್ ಮಾಡಲು ಅಂಪೈರ್‌ ನಿರಾಕರಿಸಿದಾಗ ಆ ಓವರ್‌ನಾ ಆಸ್ಟ್ರೇಲಿಯಾದ ಸ್ಟೋಯಿನಿಸ್ ಕಂಪ್ಲೀಟ್ ಮಾಡಿದ್ರು. ಫ್ರೀಹಿಟ್‌ ಆಗಿದ್ದ ಆ ಎಸೆತವನ್ನೂ ರಸೆಲ್‌ ಸಿಕ್ಸರ್‌ಗೆ ಅಟ್ಟಿದ್ರು. ಸಿರಾಜ್ ಮಾಡಿದ ನೋಬಾಲ್‌ ನಿಂದ ಗೆಲುವಿನ ದಡದಲ್ಲಿದ್ದ ಆರ್‌ಸಿಬಿ ಪಂದ್ಯ ಕೈ ಚೆಲ್ಲಿತ್ತು. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರಸೆಲ್‌ ಕೋಲ್ಕತ್ತಾಗೆ ಗೆಲುವಿನ ಸಿಹಿ ನೀಡಿದ್ರು.


ಆರ್‌ಸಿಬಿಗೆ ಸಂಕಷ್ಟ ತಂದಿಟ್ಟಿದ್ದ ವಿನಯ್‌:


ಆರ್‌ಸಿಬಿ ಹಾಗೂ ಚೆನ್ನೈ ನಡುವಿನ ಪಂದ್ಯ ಅಂದ್ರೆ ಅಭಿಮಾನಿಗಳು ಅದನ್ನ ಭಾರತ ಹಾಗೂ ಪಾಕಿಸ್ತಾನ ನಡುವಿನ ಕದನದಂತೆಯೇ ನೋಡ್ತಾರೆ. ಅದು 2012ರ ಐಪಿಎಲ್‌ ಟೂರ್ನಿ. ಸಿಎಸ್‌ಕೆ ಹಾಗೂ ಆರ್‌ಸಿಬಿ ನಡುವೆ ಚೆನ್ನೈನಲ್ಲಿ ಮಹತ್ವದ ಪಂದ್ಯ ನಡೀತಿತ್ತು. ಟಾಸ್‌ ಗೆದ್ದ ಆರ್‌ಸಿಬಿ 205ರನ್ ದಾಖಲಿಸಿ ಚೆನ್ನೈಗೆ ಬೃಹತ್‌ ಮೊತ್ತವನ್ನೇ ಟಾರ್ಗೆಟ್ ನೀಡಿತ್ತು. ಟಾರ್ಗೆಟ್‌ ಚೇಸ್ ಮಾಡಿದ ಚೆನ್ನೈಗೆ ಕೊನೇ ಓವರ್‌ನಲ್ಲಿ 15ರನ್ ಬೇಕಿತ್ತು.




ಆರ್‌ಸಿಬಿ ತಂಡ ಕನ್ನಡಿಗ ವಿನಯ್ ಕುಮಾರ್‌ ಮೇಲೆ ನಂಬಿಕೆ ಇಟ್ಟು ಕೊನೇ ಓವರ್‌ ಎಸೆಯಲು ಬೌಲ್‌ ಕೊಟ್ಟಿತ್ತು. ಕ್ರೀಸ್‌ನಲ್ಲಿ ಆಲ್ಬಿ ಮಾರ್ಕೆಲ್ ಹಾಗೂ ಡ್ರೇನ್ ಬ್ರಾವೋ ಇದ್ರು.. ಎರಡನೇ ಎಸೆತದಲ್ಲಿ ಮಾರ್ಕೆಲ್‌ ಔಟ್ ಮಾಡಿದ ವಿನಯ್ ಕುಮಾರ್ ಮೂರನೇ ಎಸೆತವನ್ನ ಬ್ರಾವೋಗೆ ಬೀಮರ್ ಮಾಡಿದ್ರು. ಆ ಎಸೆತವನ್ನ ಬ್ರಾವೋ ಬೌಂಡರಿಗಟ್ಟಿದ್ರು. ನಂತರದ ಫ್ರೀಹಿಟ್‌ ಎಸೆತವನ್ನ ಬ್ರಾವೋ ಸಿಕ್ಸರ್‌ಗಟ್ಟಿ ಆರ್‌ಸಿಬಿಯಿಂದ ಪಂದ್ಯ ಕಿತ್ಕೊಂಡಿದ್ರು. ವಿನಯ್‌ ಕುಮಾರ್ ಎಸೆದ ನೋಬಾಲ್ ಆರ್‌ಸಿಬಿಯನ್ನ ಸೋಲಿನಂಚಿಗೆ ದೂಡಿತ್ತು.


ಕೋಲ್ಕತ್ತಾಗೆ ವರವಾದ ಬೆನ್‌ ಹಿಲ್ಫನೆಸ್‌ ನೋಬಾಲ್‌:


ಅದು 2012ರ ಐಪಿಎಲ್‌ ಫೈನಲ್ ಪಂದ್ಯ. ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್‌ ನಡುವೆ ರೋಚಕ ಕದನ ಏರ್ಪಟ್ಟಿತ್ತು. ಪಂದ್ಯದ ಆರಂಭದಲ್ಲಿ ಉತ್ತಮ ಬೌಲಿಂಗ್ ದಾಳಿ ಮಾಡಿದ್ದ ಚೆನ್ನೈ ಬೌಲರ್ ಬೆನ್ ಹಿಲ್ಫನೆಸ್‌ 19ನೇ ಓವರ್‌ ಬೌಲಿಂಗ್ ಮಾಡೋವಾಗ ಎಡವಿದ್ರು. ಶಕೀಬ್‌ ಹಲ್ ಹಸನ್‌ಗೆ ಫುಲ್‌ಟಾಸ್ ನೋಬಾಲ್ ಹಾಕಿದ್ರು. ಪರಿಣಾಮ ಪ್ರೀ ಹಿಟ್ ಅವಕಾಶ ಪಡೆದ ಶಕೀಬ್‌ ನಂತರದ ಎಸೆತವನ್ನ ಬೌಂಡರಿ ಬಾರಿಸಿದ್ರು. ಹಿಲ್ಫನೆಸ್ ಮಾಡಿದ ತಪ್ಪಿನಿಂದ ಇನ್ನೂ ಎರಡು ಎಸೆತ ಬಾಕಿ ಇರುವಂತೆ ಕೋಲ್ಕತ್ತಾ ಪಂದ್ಯ ಗೆದ್ದು ಟ್ರೋಫಿಗೆ ಮುತ್ತಿಟ್ಟಿತ್ತು.


ಹೀಗೆ ಒಬ್ಬ ಬೌಲರ್‌ನಾ ತಪ್ಪು, ಒಂದು ನೋಬಾಲ್‌ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿ ಬಿಡುತ್ತೆ. ಗೆಲುವಿನ ಲೆಕ್ಕಾಚಾರವನ್ನೇ ಬುಡುಮೇಲು ಮಾಡಿಬಿಡುತ್ತೆ. ಸೋ ಬೌಲರ್‌ಗಳ ಪಾಲಿನ ಪರಮವೈರಿ ನೋಬಾಲ್ ಅಂದ್ರೂ ತಪ್ಪೇನಿಲ್ಲ.


(ವರದಿ: ಹನುಮಂತ ಜೋಳದಾಳ, ನ್ಯೂಸ್ 18, ಕನ್ನಡ)

top videos
    First published: