MS Dhoni: ಧೋನಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

MS Dhoni: ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2023ರಲ್ಲಿ ಚೆನ್ನೈ ತಂಡದ ನಾಯಕರಾಗಿರುತ್ತಾರೆ. ಮಹೇಂದ್ರ ಸಿಂಗ್ ಧೋನಿ ಮುಂದಿನ ವರ್ಷವೂ ಆಡಲಿದ್ದಾರೆ ಎಂದು ಸಿಎಸ್​ಕೆ ತಿಳಿಸಿದೆ.

ಮಹೇಂದ್ರ ಸಿಂಗ್​ ಧೋನಿ

ಮಹೇಂದ್ರ ಸಿಂಗ್​ ಧೋನಿ

  • Share this:
ಐಪಿಎಲ್​ 2023 (IPL 2023) ಆರಂಭವಾಗಲು ಇನ್ನೂ ಅನೇಕ ತಿಂಗಳುಗಳು ಬಾಕಿ ಇದೆ. ಆದರೆ IPL ಫ್ರಾಂಚೈಸಿಗಳು ಈಗಾಗಲೇ ತಮ್ಮ ತಮ್ಮ ತಂಡಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ಅದರಲ್ಲಿಯೂ ತಂಡದ ಕೋಚ್​ ವಿಷಯದಲ್ಲಿ ಈಗಾಗಲೇ ಅನೇಕ ಟೀಂಗಳು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಆದರೆ ಚೆನ್ನೈ ಸೂಪರ್​ ಕಿಂಗ್ಸ್ (CSK) ತಂಡವು ತಮ್ಮ ತಂಡದ ನಾಯಕನ ವಿಚಾರದಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಹೌದು, CSK ಮುಂದಿನ ನಾಯಕ ಯಾರು ಎಂದು ಕಳೆದ ಕೆಲವು ತಿಂಗಳುಗಳಿಂದ ದೊಡ್ಡ ಚರ್ಚೆಯ ವಿಷಯವಾಗಿತ್ತು. ಅಂತಿಮವಾಗಿ ಚೆನ್ನೈ ಫ್ರಾಂಚೈಸಿ ಈ ಬಗ್ಗೆ ಸ್ಪಷ್ಟನೆ ನೀಡಿದೆ. ಐಪಿಎಲ್ 2022 ರಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕತ್ವವನ್ನು ತೊರೆದು ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದರು. ಆದರೆ ಟೂರ್ನಿಯ ನಡುವೆ ಮತ್ತೆ ನಾಯಕತ್ವವು ಧೋನಿ ಕೈ ಸೇರಿತ್ತು. ಆದರೆ ಇದೀಗ ಮುಂಬರುವ 2023ರ ಐಪಿಎಲ್​ ನಲ್ಲಿ ಸಿಎಸ್​ಕೆ ನಾಯಕರಾಗಿ ಯಾರು ಇರಲಿದ್ದಾರೆ ಎಂಬ ಪ್ರಶ್ನೆಗೆ ಸಿಎಸ್​ಕೆ ಫ್ರಾಂಚೈಸಿ ಉತ್ತರ ನೀಡಿದೆ.

2023ರ ಐಪಿಎಲ್​ನಲ್ಲಿ ಸಿಎಸ್​ಕೆ ನಾಯಕನಾಗಿ ಧೋನಿ:

ಹೌದು, ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2023 ರಲ್ಲಿ ಚೆನ್ನೈ ತಂಡದ ನಾಯಕರಾಗಿರುತ್ತಾರೆ. ಮಹೇಂದ್ರ ಸಿಂಗ್ ಧೋನಿ ಮುಂದಿನ ವರ್ಷವೂ ಆಡಲಿದ್ದಾರೆ. ಇದು ಕ್ರಿಕೆಟ್ ಪ್ರೇಮಿಗಳಲ್ಲಿ ಸಂತಸ ತಂದಿದೆ. ಸಾಮಾಜಿಕ ಜಾಲತಾಣಗಳಲ್ಲೂ ಧೋನಿಗೆ ಅಭಿನಂದನೆಗಳು ವ್ಯಕ್ತವಾಗುತ್ತಿವೆ. ಐಪಿಎಲ್ 2023ರ ಸಿಎಸ್​ಕೆ ತಂಡದ ನಾಯಕತ್ವವನ್ನು ಧೋನಿ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಧೋನಿ ಚೆನ್ನೈ ನಾಯಕರಾಗುತ್ತಾರೆ ಎಂಬ ಅಂಶದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ.

ಈ ವಿಷಯದಿಂದ ಕ್ರಿಕೆಟ್ ಪ್ರೇಮಿಗಳು ಖುಷಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಧೋನಿ ಟ್ರೆಂಡ್ ಶುರುವಾಗಿದೆ. ಐಪಿಎಲ್ 2008ರಿಂದ ಆರಂಭವಾದಾಗಿನಿಂದ ಧೋನಿ ಚೆನ್ನೈ ತಂಡದ ನಾಯಕರಾಗಿದ್ದರು. 2022ರ ಐಪಿಎಲ್ ಆರಂಭಕ್ಕೂ ಮುನ್ನ ಧೋನಿ ನಾಯಕತ್ವದಿಂದ ಕೆಳಗಿಳಿದಿದ್ದರು. ಈ ಜವಾಬ್ದಾರಿಯನ್ನು ರವೀಂದ್ರ ಜಡೇಜಾ ಅವರಿಗೆ ನೀಡಲಾಗಿತ್ತು. ಆದರೆ ತಂಡದ ಪ್ರದರ್ಶನ ಸರಿಯಾಗಿ ನಡೆಯದೆ ಜಡೇಜಾ ಪ್ರದರ್ಶನದ ಮೇಲೂ ಪರಿಣಾಮ ಬೀರಿದ ಕಾರಣ ಜಡೇಜಾ ನಾಯಕತ್ವದಿಂದ ಕೆಳಗಿಳಿದರು. ಅದಾದ ಬಳಿಕ ಮತ್ತೆ ಈ ಜವಾಬ್ದಾರಿ ಧೋನಿಯೇ ನಿರ್ವಹಿಸಿದರು. ಇದೀಗ ಮುಂದಿನ ಸೀಸನ್​ ಐಪಿಎಲ್​​ ನಲ್ಲಿಯೂ ಸಿಎಸ್​ಕೆ ತಂಡದ ನಾಯಕರಾಗಿ ಧೋನಿ ಇರಲಿದ್ದಾರೆ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: IND vs PAK Asia Cup 2022: ಭಾರತ-ಪಾಕ್​ ಪಂದ್ಯ, ಟೀಂ ಇಂಡಿಯಾ ಪ್ಲೇಯಿಂಗ್​ 11ನಲ್ಲಿ ಬದಲಾವಣೆ ಫಿಕ್ಸ್

ಐಪಿಎಲ್​ನ ಯಶಸ್ವಿ ನಾಯಕ ಧೋನಿ:

ಈ ಮಾತನ್ನು ಯಾರೂ ಸಹ ಅಲ್ಲಗೆಳೆಯುವುದಿಲ್ಲ. ಹೌದು, ಐಪಿಎಲ್​ ನ ಓರ್ವ ಯಶಸ್ವಿ ನಾಯಕ ಎಂದರೆ ಅದು ಧೋನಿ. ಚೆನ್ನೈ ತಂಡವು 4 ಬಾರಿ ಚಾಂಪಿಯನ್​ ಆಗುವಂತೆ ಮಾಡಿದ ಧೋನಿ ಸಿಎಸ್​ಕೆ ಪಾಲಿನ ಅದೃಷ್ಟದ ನಾಯಕ. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ರಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. 2008, 2012, 2013, 2015, 2019ರಲ್ಲಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿತ್ತು.

ಇದನ್ನೂ ಓದಿ: IND vs PAK Asia Cup 2022: ಆ ಪದ ಹೇಳೋಕೆ ನಾಚಿಕೊಂಡ ರಾಹುಲ್​ ದ್ರಾವಿಡ್! ವಿಡಿಯೋ ಸಿಕ್ಕಾಪಟ್ಟೆ ವೈರಲ್​​

ಕಳೆದ ನವೆಂಬರ್‌ನಲ್ಲಿ ವಿದಾಯದ ಕುರಿತು ಮಾತನಾಡಿದ್ದ ಧೋನಿ, ‘ನನ್ನ ಕೊನೆಯ ಏಕದಿನ ಪಂದ್ಯ ರಾಂಚಿಯಲ್ಲೇ ನಡೆದಿದ್ದರೆ, ಕೊನೆಯ ಟಿ20 ಪಂದ್ಯ ಚೆನ್ನೈನಲ್ಲೇ  ನಡೆಯಬೇಕೆಂದು ಆಶಿಸುತ್ತೇನೆ. ಇದು ಮುಂದಿನ ವರ್ಷ ಆಗಿರುತ್ತಾ ಅಥವಾ ಮುಂದಿನ ಐದು ವರ್ಷದಲ್ಲಿ ಆಗುತ್ತಾ ಗೊತ್ತಿಲ್ಲ‘ ಎಂದು ಹೇಳಿದ್ದರು. ಇದರಿಂದಾಗಿ ಈ ಬಾರಿ ಐಪಿಎಲ್ ಅವರ ಪಾಲಿಗೆ ಕೊನೆಯ ಟೂರ್ನಿ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
Published by:shrikrishna bhat
First published: