• Home
  • »
  • News
  • »
  • sports
  • »
  • CSK Dhoni: ಚೆನ್ನೈ ಕ್ಯಾಪ್ಟನ್ ಆಗ್ತಾರಾ ಬೆನ್​ ಸ್ಟೋಕ್ಸ್? CSK ನಾಯಕತ್ವದ ಕುರಿತು ಹೊರಬಿತ್ತು ಬಿಗ್​ ಅಪ್​ಡೇಟ್​

CSK Dhoni: ಚೆನ್ನೈ ಕ್ಯಾಪ್ಟನ್ ಆಗ್ತಾರಾ ಬೆನ್​ ಸ್ಟೋಕ್ಸ್? CSK ನಾಯಕತ್ವದ ಕುರಿತು ಹೊರಬಿತ್ತು ಬಿಗ್​ ಅಪ್​ಡೇಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

IPL 2023: ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರರು ಪ್ರಾಬಲ್ಯ ಮೆರೆದಿದ್ದಾರೆ. ಅದೇ ಸಮಯದಲ್ಲಿ, ಇಂಗ್ಲಿಷ್ ತಂಡದ ನಾಯಕ ಬೆನ್ ಸ್ಟೋಕ್ಸ್ ಸಹ ದೊಡ್ಡ ಮೊತ್ತಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ. ಈ ಮೂಲಕ ಇದೀಗ ಚೆನ್ನೈ ಮುಂದಿನ ನಾಯಕನ ಚರ್ಚೆ ಮುನ್ನಲೆಗೆ ಬಂದಿದೆ.

ಮುಂದೆ ಓದಿ ...
  • Share this:

ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಹರಾಜಿನಲ್ಲಿ ಇಂಗ್ಲೆಂಡ್ ಆಟಗಾರರ ಮೇಲೆ ಹಣದ ಮಳೆ ಸುರಿದಿದೆ. ಅದರಲ್ಲಿಯೂ ಇಂಗ್ಲಿಷ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಸಹ ಕೋಟಿ ಕೋಟಿ ಗಳಿಸಿದ್ದಾರೆ. ಸ್ಟೋಕ್ಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ (CSK) 16.25 ಕೋಟಿಗೆ ಖರೀದಿ ಮಾಡಿದೆ. ಈ ಬಿಡ್​ ನಂತರ ಸ್ಟೋಕ್ಸ್ ಮತ್ತು ಎಂಎಸ್ ಧೋನಿ (Dhoni) ಹೆಚ್ಚು ಚರ್ಚೆಯ ವಿಷಯವಾಗಿದ್ದಾರೆ. ಮುಂಬರುವ ಋತುವಿನಲ್ಲಿ ಇಂಗ್ಲಿಷ್ ನಾಯಕ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಬಹುದು ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಚೆನ್ನೈ ಸಿಇಒ ಕಾಶಿ ವಿಶ್ವನಾಥ್ ಅವರು ಈ ವಿಷಯದ ಬಗ್ಗೆ ದೊಡ್ಡ ಅಪ್‌ಡೇಟ್ ನೀಡಿದ್ದಾರೆ.


ಚೆನ್ನೈ ನಾಯಕರಾಗ್ತಾರಾ ಸ್ಟೋಕ್ಸ್?:


ಎಂಎಸ್ ಧೋನಿಯಂತಹ ಮತ್ತೊಬ್ಬ ನಾಯಕನನ್ನು ಪಡೆಯುವುದು ಸಿಎಸ್‌ಕೆಗೆ ತುಂಬಾ ಕಷ್ಟ. ಮಹಿ ನಾಯಕತ್ವದಲ್ಲಿ ಚೆನ್ನೈ ತಂಡ ನಾಲ್ಕು ಬಾರಿ ಪ್ರಶಸ್ತಿ ಜಯಿಸಿದೆ. ಐಪಿಎಲ್ 2023 ರಲ್ಲಿ ಸಹ, ಸಿಎಸ್‌ಕೆ ಅಭಿಮಾನಿಗಳು ಧೋನಿ ಅವರನ್ನು ನಾಯಕನಾಗಿ ನೋಡಲು ಉತ್ಸುಕರಾಗಿದ್ದಾರೆ. ಆದರೆ ಮುಂಬರುವ ಋತುವಿನಲ್ಲಿ ಮಾಹಿ ಬದಲಿಗೆ ಬೆನ್ ಸ್ಟೋಕ್ಸ್ ನಾಯಕತ್ವ ವಹಿಸಬಹುದು ಎಂದು ಊಹಿಸಲಾಗಿದೆ. ಈ ಬಗ್ಗೆ ಧೋನಿಯೇ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾಶಿ ವಿಶ್ವನಾಥ್ ಹೇಳಿದ್ದಾರೆ. ಕಳೆದ ಋತುವಿನಲ್ಲಿ ಚೆನ್ನೈನ ಪ್ರದರ್ಶನ ಸಾಕಷ್ಟು ನಿರಾಶಾದಾಯಕವಾಗಿತ್ತು.ಸಂತಸ ವ್ಯಕ್ತಪಡಿಸಿದ ಧೋನಿ:


ತಂಡದ ನಾಯಕತ್ವದ ಬಗ್ಗೆ, ಇಎಸ್‌ಪಿಎನ್ ಕ್ರಿಕ್‌ಇನ್‌ಫೋದಲ್ಲಿ ಚೆನ್ನೈನ ಸಿಇಒ ಮಾತನಾಡಿದ್ದು, 'ತಂಡದಲ್ಲಿ ಬೆನ್ ಸ್ಟೋಕ್ಸ್ ಇರುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಅವರು ಅಂತಿಮವಾಗಿ ನಮ್ಮ ತಂಡಕ್ಕೆ ಬಂದ ಕಾರಣ ನಾವೂ ಅದೃಷ್ಟವಂತರು ಎಂದು ಹೇಳಬಹುದು. ಆದಾಗ್ಯೂ, ನಾವು ಆಲ್ ರೌಂಡರ್ ಅನ್ನು ಬಯಸಿದ್ದೆವು. ಅಲ್ಲದೇ ಎಂಎಸ್ ಧೋನಿ ಸಹ ಸ್ಟೋಕ್ಸ್ ಅನ್ನು ಖರೀದಿಸಿದ್ದಕ್ಕಾಗಿ ಹೆಚ್ಚು ಸಂತೋಷಪಟ್ಟರು. ಚೆನ್ನೈ ತಂಡದ ನಾಯಕತ್ವದ ಬಗ್ಗೆ ಎಂಎಸ್ ಧೋನಿ ಅವರೇ ನಿರ್ಧರಿಸಬೇಕು. ಇದರಲ್ಲಿ ನಾವುಗಳು ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವುದಿಲ್ಲ‘ ಎಂದು ಹೇಳಿದ್ದಾರೆ.


ಇದನ್ನೂ ಓದಿ: IPL 2023: ಐಪಿಎಲ್​ 10 ತಂಡಗಳ ಸಂಪೂರ್ಣ ಆಟಗಾರರ ಲಿಸ್ಟ್​, ಯಾವ ತಂಡ ಬಲಿಷ್ಠವಾಗಿದೆ? RCB ಟೀಂ ಹೇಗಿದೆ?


ಕಳೆದ ಋತುವಿನಲ್ಲಿ ಬದಲಾಗಿತ್ತು ನಾಯಕತ್ವ:


ಐಪಿಎಲ್ 2022 ರಲ್ಲಿ, ಧೋನಿ ರವೀಂದ್ರ ಜಡೇಜಾಗೆ ಸಿಎಸ್‌ಕೆ ನಾಯಕತ್ವವನ್ನು ಹಸ್ತಾಂತರಿಸಿದರು. ಆದರೆ ಜಡೇಜಾ ಈ ಒತ್ತಡವನ್ನು ಸಹಿಸಲಾಗದೆ ಮತ್ತೆ ತಂಡದ ನಾಯಕತ್ವವನ್ನು ಧೋನಿಗೆ ಹಸ್ತಾಂತರಿಸಿದರು. ಮುಂಬರುವ ಸೀಸನ್‌ನಲ್ಲಿ ಮಹಿ ಸಿಎಸ್‌ಕೆಯನ್ನು ಮುನ್ನಡೆಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಕಳೆದ ಕೆಲ ತಿಂಗಳುಗಳ ಹಿಂದೆ ಚೆನ್ನೈ ಪ್ರಾಂಚೈಸಿ ಧೋನಿಯೇ ಮುಂದಿನ ಸೀಸನ್​ ನಾಯಕ ಎಂದು ಹೇಳಿತ್ತು.


ಐಪಿಎಲ್​ 2023ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ:Published by:shrikrishna bhat
First published: