ಮಹೇಂದ್ರ ಸಿಂಗ್ ಧೋನಿ (MS Dhoni) ತನ್ನ ಅಭಿಮಾನಿಗಳ ಜೊತೆ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಕಡಿಮೆ. ಆದರೂ ಅವರು ಇದೀಗ CSK ಅವರ ಒಂದು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಅದ್ಭುತ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ವರ್ಚಸ್ವಿ ನಾಯಕ ಮಾತ್ರವಲ್ಲದೆ ಅದ್ಭುತ ಫಿನಿಶರ್ ಕೂಡ ಆಗಿದ್ದಾರೆ. ಧೋನಿ ಯಶಸ್ವಿ ಉದ್ಯಮಿಯೂ ಆಗಿದ್ದಾರೆ. ಧೋನಿ ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಕೂಡ ಆಗಿದ್ದಾರೆ. ಈಗ ಮಾರ್ಚ್ 15, ಬುಧವಾರ, ಇಂಡಿಯನ್ ಪ್ರೀಮಿಯರ್ ಲೀಗ್ (IPl) ಫ್ರಾಂಚೈಸಿ ಚೆನ್ನೈ ಸೂಪರ್ ಕಿಂಗ್ಸ್ (CSK) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಹಂಚಿಕೊಂಡ ವೀಡಿಯೊ ಮಹೇಂದ್ರ ಸಿಂಗ್ ಧೋನಿ ಸಂಗೀತಗಾರನೂ ಆಗಿದ್ದಾರೆ.
ಬ್ಯಾಟ್ ಬಿಟ್ಟು ಗಿಟಾರ್ ಹಿಡಿದ ಧೋನಿ:
'ಕ್ಯಾಪ್ಟನ್ ಕೂಲ್' ಎಂದೇ ಖ್ಯಾತರಾಗಿರುವ ಮಹೇಂದ್ರ ಸಿಂಗ್ ಧೋನಿ ಅವರು ಇತ್ತೀಚೆಗೆ ತಮ್ಮ ಸಹ ಆಟಗಾರರಾದ ಶಿವಂ ದುಬೆ, ದೀಪಕ್ ಚಹಾರ್ ಮತ್ತು ರಿತುರಾಜ್ ಗಾಯಕ್ವಾಡ್ ಅವರೊಂದಿಗೆ ಮೋಜು ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಈ ಆಟಗಾರರ ತಮಾಷೆಯ ವೀಡಿಯೊವನ್ನು ಹಂಚಿಕೊಂಡಿದೆ, ಇದರಲ್ಲಿ ಧೋನಿ ಕೈಯಲ್ಲಿ ಗಿಟಾರ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ.
Groovy Wednesday! 🥳#WhistlePodu #Yellove 🦁💛 @snj10000 pic.twitter.com/fLpSthiMrw
— Chennai Super Kings (@ChennaiIPL) March 15, 2023
ಚೆನ್ನೈ ಯಶಸ್ವಿ ಪ್ರಾಂಚೈಸಿ:
ನಾಲ್ಕು ಪ್ರಶಸ್ತಿಗಳು ಮತ್ತು ಐದು ರನ್ನರ್ ಅಪ್ ಫಿನಿಶ್‌ಗಳೊಂದಿಗೆ ಮುಂಬೈ ಇಂಡಿಯನ್ಸ್ ನಂತರ CSK ಅತ್ಯಂತ ಯಶಸ್ವಿ IPL ಫ್ರಾಂಚೈಸ್ ಆಗಿದೆ. ಚೆನ್ನೈ ಪಂದ್ಯಾವಳಿಯಲ್ಲಿ 13 ರಲ್ಲಿ ಒಂಬತ್ತು ಬಾರಿ ಫೈನಲ್‌ಗೆ ಅರ್ಹತೆ ಗಳಿಸಿದ್ದರು. ಆದಾಗ್ಯೂ, 2022ರ ಋತುವು ತಂಡಕ್ಕೆ ತುಂಬಾ ಕೆಟ್ಟದಾಗಿತ್ತು. ಕಳೆದ ಋತುವಿನಲ್ಲಿ ಧೋನಿ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದರು, ಆದರೆ ಸತತ ಸೋಲಿನಿಂದ ಜಡೇಜಾ ಮಧ್ಯದಲ್ಲಿ ನಾಯಕತ್ವವನ್ನು ತೊರೆದರು. ಇದಾದ ನಂತರ ಧೋನಿ ಮತ್ತೊಮ್ಮೆ ಸಿಎಸ್‌ಕೆ ನಾಯಕತ್ವ ವಹಿಸಿಕೊಂಡರು.
ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಅವರು 234 ಪಂದ್ಯಗಳಲ್ಲಿ 135.2 ಸ್ಟ್ರೈಕ್ ರೇಟ್‌ನಲ್ಲಿ 5,000 ರನ್ ಗಳಿಸಿದ್ದಾರೆ. ಅವರು 135 ಕ್ಯಾಚ್‌ಗಳನ್ನು ತೆಗೆದುಕೊಂಡಿದ್ದಾರೆ ಮತ್ತು 39 ಸ್ಟಂಪಿಂಗ್ ಮಾಡಿದ್ದಾರೆ. ಈ ವರ್ಷ ಐಪಿಎಲ್ 2019 ರ ಬಳಿಕ ಇದೇ ಮೊದಲ ಬಾರಿಗೆ ಭಾರತದಾದ್ಯಂತ ನಡೆಯಲಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಪಂದ್ಯಾವಳಿಯನ್ನು 2020 ರಿಂದ ಸಂಪೂರ್ಣವಾಗಿ ಅಥವಾ ಭಾಗಶಃ ವಿದೇಶದಲ್ಲಿ ನಡೆಸಲಾಯಿತು. ಪಂದ್ಯಾವಳಿಯಲ್ಲಿ ಪ್ರತಿ ತಂಡವು ಒಟ್ಟು 14 ರಲ್ಲಿ 7 ಹೋಮ್ ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಚೆನ್ನೈ ಈ ಬಾರಿಯ ಐಪಿಎಲ್ ಆರಂಭಿಕ ಪಂದ್ಯದಿಂದಲೇ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ