ಐಪಿಎಲ್ 2023ರ ಮಿನಿ ಹರಾಜಿಗೆ (IPL 2023 Mini Auction) ವೇದಿಕೆ ಸಿದ್ಧವಾಗಿದೆ. ಕೇರಳದ (Kerala) ಕೊಚ್ಚಿಯಲ್ಲಿ (Kochi) ಶುಕ್ರವಾರ ಮಧ್ಯಾಹ್ನ 2:30ಕ್ಕೆ ಹರಾಜು ಪ್ರತಿಕ್ರಿಯೆ ಆರಂಭವಾಗಲಿದೆ. ಒಟ್ಟು 991 ಆಟಗಾರರ ಹೆಸರು ಹರಾಜಿಯಲ್ಲಿ ನೋಂದಣಿಯಾಗಿದೆ. ಇದರಲ್ಲಿ ಫ್ರಾಂಚೈಸಿಗಳು (IPL Franchise) 405 ಮಂದಿ ಆಟಗಾರರ ಲಿಸ್ಟ್ ಅನ್ನು ಫೈನಲ್ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಹೆಚ್ಚು ಎಂದರೇ, 87 ಆಟಗಾರರಿಗೆ ಮಾತ್ರ ಅವಕಾಶ ಲಭ್ಯವಾಗಲಿದೆ. ಇದರಲ್ಲಿ 30 ಸ್ಥಾನಗಳು ವಿದೇಶಿ ಆಟಗಾರರಿಗೆ (IPL Overseas Players), 57 ಸ್ಥಾನಗಳು ಭಾರತದ ಆಟಗಾರರಿಗೆ (IPL Indian Players) ಲಭ್ಯವಾಗಲಿದೆ. ಪಟ್ಟಿ ಮಾಡಿರುವ 405 ಆಟಗಾರರನ್ನು 5 ವಿಭಾಗಗಳಾಗಿ ವಿಭಜನೆ ಮಾಡಲಾಗಿದೆ.
ದಾಖಲೆಯ ಮೊತ್ತಕ್ಕೆ ಹರಾಜಾಗಿದ್ದ ಕ್ರಿಸ್ ಮೋರಿಸ್
15 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಅಧಿಕ ಮೊತ್ತಕ್ಕೆ ಹರಾಜು ಆಗಿದ್ದ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಮೋರಿಸ್ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಅಂದು ರಾಜಸ್ಥಾನ ರಾಯಲ್ಸ್ ತಂಡ 16.25 ಕೋಟಿ ರೂಪಾಯಿಗಳ ಭಾರೀ ಮೊತ್ತಕ್ಕೆ ಮೋರಿಸ್ ಅವರನ್ನು ಖರೀದಿ ಮಾಡಿತ್ತು. ಆ ಬಳಿಕ ಯುವರಾಜ್ ಸಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದು, 16 ಕೋಟಿ ರೂಪಾಯಿಗೆ ಡೆಲ್ಲಿ ತಂಡ ಅವರನ್ನು ಖರೀದಿ ಮಾಡಿತ್ತು.
Pre-auction Team Briefings 📄✅
Countdown for the #TATAIPLAuction 2023 begins 😎 pic.twitter.com/xCOSKBLCnZ
— IndianPremierLeague (@IPL) December 22, 2022
ದಾಖಲೆಗಳು ಬ್ರೇಕ್ ಆಗೋ ಲಕ್ಷಗಳು ಕಾಣ್ತಿದೆ
ವಿಶೇಷ ಎಂದರೇ, ಈ ಬಾರಿ ಎರಡು ದಾಖಲೆಗಳು ಬ್ರೇಕ್ ಆಗುವ ಲಕ್ಷಣಗಳು ಕಂಡು ಬರುತ್ತಿವೆ. ಬೆನ್ ಸ್ಟೋಕ್ಸ್, ಸ್ಯಾಮ್ ಕರನ್ ಅಂತಹ ಆಲ್ರೌಂಡರ್ ಆಟಗಾರರಿಗಾಗಿ ಫ್ರಾಂಚೈಸಿಗಳು ಹೆಚ್ಚು ಮೊತ್ತ ನೀಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಇನ್ನು, ಐಪಿಎಲ್ ಆವೃತ್ತಿಗಳ ಅನ್ವಯ ಅಧಿಕಾರ ಮೊತ್ತಕ್ಕೆ ಹರಾಜು ಆದ ಆಟಗಾರ ಪಟ್ಟಿಯನ್ನು ನೋಡುವುದಾದರೇ, ಭಾರತ ಆಟಗಾರರು ಪಟ್ಟಿಯಲ್ಲಿ ಹೆಚ್ಚಯ ಹೈಲೈಟ್ ಆಗಿದ್ದಾರೆ.
*ಐಪಿಎಲ್ 2008: ಮಹೇಂದ್ರ ಸಿಂಗ್ ಧೋನಿ (ಸಿಎಸ್ಕೆ)- 9.5 ಕೋಟಿ ರೂಪಾಯಿ
*ಐಪಿಎಲ್ 2009: ಕೆವಿನ್ ಪೀಟರ್ಸನ್ (ಆರ್ಸಿಬಿ), ಆಂಡ್ರ್ಯೂ ಫ್ಲಿಂಟಾಫ್ (ಎಸ್ಇಎಸ್ಕೆ)- 9.8 ಕೋಟಿ ರೂಪಾಯಿ
*ಐಪಿಎಲ್ 2010: ಕೀರನ್ ಪೊಲಾರ್ಡ್ (ಮುಂಬೈ), ಶೇನ್ ಬ್ಯಾಂಡ್ (ಕೆಕೆಆರ್)- 4.8 ಕೋಟಿ ರೂಪಾಯಿ
*ಐಪಿಎಲ್ 2011: ಗೌತಮ್ ಗಂಭೀರ್ (ಕೆಕೆಆರ್)-ರೂ.14.9 ಕೋಟಿ ರೂಪಾಯಿ
*ಐಪಿಎಲ್ 2012: ರವೀಂದ್ರ ಜಡೇಜಾ (ಸಿಎಸ್ಕೆ)-ರೂ.12.8 ಕೋಟಿ ರೂಪಾಯಿ
ಇದನ್ನೂ ಓದಿ: IPL 2023 Auction: ಆರ್ಸಿಬಿ ಹತ್ರ ಇರೋದು ಇಷ್ಟೇ ಹಣ! ಇನ್ನುಳಿದ ತಂಡಗಳ ಬಳಿ ಎಷ್ಟಿದೆ ? ಇನ್ನೇಷ್ಟು ಆಟಗಾರರು ಬೇಕು ನೋಡಿ
*ಐಪಿಎಲ್ 2013: ಗ್ಲೆನ್ ಮ್ಯಾಕ್ಸ್ವೆಲ್ (ಪಂಜಾಬ್ ಕಿಂಗ್ಸ್)- 6.3 ಕೋಟಿ ರೂಪಾಯಿ
*ಐಪಿಎಲ್ 2014: ಯುವರಾಜ್ ಸಿಂಗ್ (ಆರ್ಸಿಬಿ)- 14 ಕೋಟಿ ರೂಪಾಯಿ
*ಐಪಿಎಲ್ 2015: ಯುವರಾಜ್ ಸಿಂಗ್ (ಡೆಲ್ಲಿ ಡೇರ್ ಡೆವಿಲ್ಸ್)- 16 ಕೋಟಿ ರೂಪಾಯಿ
*ಐಪಿಎಲ್ 2016: ಶೇನ್ ವಾಟ್ಸನ್ (ಆರ್ಸಿಬಿ)- 9.5 ಕೋಟಿ ರೂಪಾಯಿ
*ಐಪಿಎಲ್ 2017: ಬೆನ್ ಸ್ಟೋಕ್ಸ್ (ಆರ್ಪಿಎಸ್)- 14.5 ಕೋಟಿ ರೂಪಾಯಿ
"It's always a pleasure coming back to the #TATAIPLAuction"
Hugh Edmeades is READY - ARE YOU? 😎 pic.twitter.com/HdJN0mt0t9
— IndianPremierLeague (@IPL) December 22, 2022
* ಐಪಿಎಲ್ 2023 ಆವೃತ್ತಿಗೆ ಅತ್ಯಧಿಕ ಬೆಲೆಗೆ ಹರಾಜು ಆಗುವ ಆಟಗಾರ ಯಾರು ಕಾಮೆಂಟ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ