RR vs MI: ರೋಹಿತ್​ಗೆ ಬರ್ತಡೇ ಗಿಫ್ಟ್ ನೀಡಿದ ಮುಂಬೈ ತಂಡ, ಜೈಸ್ವಾಲ್ ಶತಕ ವ್ಯರ್ಥ

ಮುಂಬೈ ಇಂಡಿಯನ್ಸ್​ಗೆ ಭರ್ಜರಿ ಜಯ

ಮುಂಬೈ ಇಂಡಿಯನ್ಸ್​ಗೆ ಭರ್ಜರಿ ಜಯ

IPL 2023, MI vs RR: ಮುಂಬೈ ಇಂಡಿಯನ್ಸ್ ನಿಗದಿತ 19.3 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ 214 ರನ್​ ಗಳಿಸುವ ಮೂಲಕ 6 ವಿಕೆಟ್​ಗಳಿಂದ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಮುಂಬೈ ತಂಡ 1000ನೇ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡಿತು.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್‌ನ 42ನೇ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನ್ ರಾಯಲ್ಸ್ (MI vs RR) ತಂಡಗಳು ಸೆಣಸಾಡಿದವು. ಪಂದ್ಯದಲ್ಲಿ ಟಾಸ್​ ಗೆದ್ದ ಸಂಜು ಸ್ಯಾಮ್ಸನ್​ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದರು. ರಾಜಸ್ಥಾನ್​ ಪರ ಇಂದು ಯಶಸ್ವಿ ಜೈಸ್ವಾಲ್​ ಅಬ್ಬರಿಸುವ ಮೂಲಕ ಆಕರ್ಷಕ ಚೊಚ್ಚಲ ಶತಕ ಸಿಡಿಸಿದರು. ಈ ಮೂಲಕ ಆರ್​ಆರ್​ ನಿಗದಿತ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 212 ರನ್​ ಗಳಿಸಿತು. ಈ ಬೃಹತ್​ ಮೊತ್ತ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ನಿಗದಿತ 19.3 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ 214 ರನ್​ ಗಳಿಸುವ ಮೂಲಕ 6 ವಿಕೆಟ್​ಗಳಿಂದ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಮುಂಬೈ ತಂಡ 1000ನೇ ಪ.ದ್ಯವನ್ನು ಸ್ಮರಣೀಯವಾಗಿಸಿಕೊಂಡಿತು.


ಸೂರ್ಯಕುಮಾರ್​ ಯಾದವ್​ ಭರ್ಜರಿ ಬ್ಯಾಟಿಂಗ್​:


ಇನ್ನು, ರಾಜಸ್ಥಾನ್​ ನೀಡಿದ ಬೃಹತ್ ಸ್ಕೋರ್​ ಚೇಸ್​  ಮಾಡಿದ ಮುಂಬೈ ಇಂಡಿಯನ್ಸ್ ತಂಡವು 19.3 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ 214 ರನ್​ ಗಳಿಸತು. ಮುಂಬೈ ಪರ  ರೋಹಿತ್ ಶರ್ಮಾ 3 ರನ್​, ಇಶಾನ್ ಕಿಶನ್ 28 ರನ್, ಕ್ಯಾಮರೂನ್ ಗ್ರೀನ್ 44 ರನ್, ಸೂರ್ಯಕುಮಾರ್ ಯಾದವ್ 55 ರನ್, ತಿಲಕ್ ವರ್ಮಾ 29 ರನ್, ಟಿಮ್ ಡೇವಿಡ್ 49 ರನ್ ಗಳಿಸುವ ಮೂಲಕ ಮಿಂಚಿದರು.


ಶತಕ ಸಿಡಿಸಿ ಮಿಂಚಿದ ಯಶಸ್ವಿ ಜೈಸ್ವಾಲ್:


ಇನ್ನು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ್​ ತಂಡದ ಪರ ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳು ಒಂದು ತುದಿಯಿಂದ ಪೆವಿಲಿಯನ್‌ ಸೇರಿದರು. ಆದರೆ ಯಶಸ್ವಿ ಜೈಸ್ವಾಲ್ ಕೊನೆಯವರೆಗೂ ನಿಂತು ಏಕಾಂಗಿಯಾಗಿ ರಾಜಸ್ಥಾನವನ್ನು ದೊಡ್ಡ ಸ್ಕೋರ್‌ಗೆ ಕೊಂಡೊಯ್ದರು. ಈ ಯುವ ಬ್ಯಾಟ್ಸ್‌ಮನ್ ಕೇವಲ 51 ಎಸೆತಗಳಲ್ಲಿ ಶತಕ ಪೂರೈಸಿದರು.


ಇದನ್ನೂ ಓದಿ: IPL 2023: ಆರ್​ಸಿಬಿ ದಾಖಲೆ ಮುರಿದ ಚೆನ್ನೈ ಸೂಪರ್​ ಕಿಂಗ್ಸ್! ಸೋಲಿನಲ್ಲೂ ಹೊಸ ರೆಕಾರ್ಡ್​ ಕ್ರಿಯೇಟ್​ ಮಾಡಿದ ಧೋನಿ ಬಾಯ್ಸ್


ಓಪನಿಂಗ್ ಗೆ ಬಂದ 21ರ ಹರೆಯದ ಯಶಸ್ವಿ ಕೊನೆಯವರೆಗೂ ಕ್ರೀಸ್ ನಲ್ಲಿದ್ದರು. ಯಶಸ್ವಿ ಜೈಸ್ವಾಲ್ 62 ಎಸೆತಗಳಲ್ಲಿ 124 ರನ್‌ಗಳ ಇನಿಂಗ್ಸ್‌ ಆಡಿದರು. ಚೆನ್ನೈ ವಿರುದ್ಧದ ಕೊನೆಯ ಪಂದ್ಯದಲ್ಲಿ ಈ ಯುವ ಬ್ಯಾಟ್ಸ್ ಮನ್ 77 ರನ್ ಗಳ ಅಮೋಘ ಇನ್ನಿಂಗ್ಸ್ ಆಡಿದ್ದರು. ಯಶಸ್ವಿ ಬಾಲ್‌ನಲ್ಲಿ ಕೇವಲ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳೊಂದಿಗೆ ಅರ್ಧಶತಕ ಪೂರೈಸಿದರು. ಪವರ್ ಪ್ಲೇನಲ್ಲಿ ಯಶಸ್ವಿ ಏಕಾಂಗಿಯಾಗಿ ತಂಡವನ್ನು 60 ರನ್‌ಗಳಿಗೆ ಕೊಂಡೊಯ್ದರು. ಈ ಪಂದ್ಯಕ್ಕೂ ಮುನ್ನ 8 ಪಂದ್ಯಗಳಲ್ಲಿ ಯಶಸ್ವಿ ಬ್ಯಾಟ್‌ನಿಂದ 304 ರನ್ ಗಳಿಸಿದ್ದರು. ಇದರಲ್ಲಿ 3 ಅರ್ಧಶತಕದ ಇನ್ನಿಂಗ್ಸ್‌ಗಳೂ ಸೇರಿವೆ.


ಸೆಹ್ವಾಗ್ ಹಿಂದಿಕ್ಕಿದ ಜೈಸ್ವಾಲ್:


ಯಶಸ್ವಿ ಜೈಸ್ವಾಲ್ ವೀರೇಂದ್ರ ಸೆಹ್ವಾಗ್ ಅವರ ದಾಖಲೆ ಬ್ರೇಕ್​ ಮಾಡಿದ್ದಾರೆ. ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಸ್ಕೋರ್ 122 ರನ್ ಆಗಿತ್ತು. ಜೈಸ್ವಾಲ್ 62 ಎಸೆತಗಳಲ್ಲಿ 16 ಬೌಂಡರಿ ಹಾಗೂ 8 ಸಿಕ್ಸರ್‌ಗಳ ನೆರವಿನಿಂದ 124 ರನ್ ಗಳಿಸಿದರು. 53 ಎಸೆತಗಳಲ್ಲಿ ಶತಕ ಪೂರೈಸಿದರು. ಐಪಿಎಲ್‌ನಲ್ಲಿ ಭಾರತೀಯನಾಗಿ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡುವ ವಿಷಯದಲ್ಲಿ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದಾರೆ. ರಾಹುಲ್ 132 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರೆ, ರಿಷಬ್ ಪಂತ್ 128 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಮುರಳಿ ವಿಜಯ್ 127 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ, ಜೈಸ್ವಾಲ್ ನಾಲ್ಕನೇ ಸ್ಥಾನದಲ್ಲಿದ್ದಾರೆ.




ಉಭಯ ತಂಡಗಳ ಬೌಲಿಂಗ್​:


ವಾಂಖೆಡೆ ಮೈದಾನ ಹೆಚ್ಚು ಬ್ಯಾಟರ್​ಗಳಿಗೆ ಸಹಾಯಕವಾದಂತಹ ಪಿಚ್​ ಎಂದು ಪರಿಗಣಿಸಲಾಗಿದೆ. ಹೀಗಾಗಿ ಇಲ್ಲಿ ಬೌಲರ್​ಗಳು ಹೆಚ್ಚು ಮಿಂಚಲು ಸಾಧ್ಯವಾಗುವುದಿಲ್ಲ. ಆದರೂ ಸಹ ಇಂದು ಮುಂಬೈ ಪರ ಅರ್ಷದ್ ಖಾನ್​ 3 ಓವರ್​ಗೆ 3 ವಿಕೆಟ್​ ಪಡೆದು ಮಿಂಚಿದರು. ಅದರಂತೆ ಪಿಯೂಶ್​ ಚಾವ್ಲಾ 2 ವಿಕೆಟ್​ ಮತ್ತು ರಿಲ್ಲೆ ಮತ್ತು ಜೋಪ್ರಾ ಆರ್ಚರ್​ ತಲಾ 1 ವಿಕೆಟ್​ ಪಡೆದರು. ಇತ್ತ ರಾಜಸ್ಥಾನ್​ ಪರ ರವಿಚಂದ್ರನ್​ ಅಶ್ವಿನ್​ 2 ವಿಕೆಟ್​ ಪಡೆದರು. ಉಳಿದಂತೆ ಟ್ರೆಂಟ್​ ಬೋಲ್ಟ್ ಮತ್ತು ಸಂದೀಪ್​ ಶರ್ಮಾ ತಲಾ 1 ವಿಕೆಟ್​ ಪಡೆದರು.

First published: