ಐಪಿಎಲ್‌ನಲ್ಲಿ ಭಾನುವಾರ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ (RR vs MI) ನಡುವೆ ಟೂರ್ನಿಯ 1000ನೇ ಪಂದ್ಯ ನಡೆಯಿತು. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾಗೆ (Rohit Sharma) ಈ ಪಂದ್ಯ ವಿಶೇಷವಾಗಿತ್ತು. ಅವರ ಹುಟ್ಟುಹಬ್ಬದಂದು ಮುಂಬೈ ಇಂಡಿಯನ್ಸ್ ಅವರಿಗೆ ಗೆಲುವಿನ ಉಡುಗೊರೆ ನೀಡಿತು. ಕೊನೆಯ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ಗೆಲುವಿಗೆ 17 ರನ್ ಅಗತ್ಯವಿತ್ತು. ಆದರೆ ಮೊದಲ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಡೇವಿಡ್ ಮುಂಬೈ ತಂಡವನ್ನು ಗೆಲ್ಲಿಸಿದರು. ಆದರೆ ಪಂದ್ಯದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಆರೋಪಗಳು ಕೇಳಿ ಬರುತ್ತಿವೆ. ಪಂದ್ಯದ ಕೆಲವು ಫೋಟೋಗಳು ವೈರಲ್ ಆಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಫಿಕ್ಸಿಂಗ್ ಆರೋಪಗಳನ್ನು ಮಾಡಲಾಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಆರೋಪ:
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ ಅವರ ಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಮುಂಬೈ 3 ಎಸೆತಗಳು ಬಾಕಿ ಉಳಿದಂತೆ ಪಂದ್ಯವನ್ನು ಗೆಲ್ಲಿಸಿತು. ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್ 62 ಎಸೆತಗಳಲ್ಲಿ 124 ರನ್ ಗಳಿಸಿದರು. ಇದರಲ್ಲಿ ಅವರು 16 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು. ಯಶಸ್ವಿ ಜೈಸ್ವಾಲ್ ಔಟಾದ ಚೆಂಡು ಫುಲ್ ಟಾಸ್ ಆಗಿದ್ದು, ಜೈಸ್ವಾಲ್ ಸೊಂಟದ ಮೇಲಿತ್ತು. ಇದನ್ನು ಪ್ರಶ್ನಿಸಿದ ಅಭಿಮಾನಿಗಳು ನೋ ಬಾಲ್ ಕೊಡಬೇಕಿತ್ತು ಆದರೆ ಕೊಡಲಿಲ್ಲ ಎಂದು ಆರೋಪಿಸುತ್ತಿದ್ದಾರೆ.
4 pics itself shows that the match was fixed.
Pic 1 - No Ball
Pic 2 - Rohit and Umpire Meeting
Pic 3 - Jason Holder Seems Calm no shame
Pic 4 - Umpire and mi player shame shoes. pic.twitter.com/ENLsgUsWte
— Yash Jain (@proteasyash) April 30, 2023
ಇದನ್ನೂ ಓದಿ: RCB vs LSG 2023: ಇಂದು ಆರ್ಸಿಬಿ-ಲಕ್ನೋ ನಡೆಯೋದೇ ಡೌಟ್! ದೇವರ ಮರೆಹೋದ ಅಭಿಮಾನಿಗಳು
ಮೂರು ಸಿಕ್ಸರ್‌ಗಳನ್ನು ಬಾರಿಸಿದ ನಂತರವೂ ಜೇಸನ್ ಹೋಲ್ಡರ್ ಅವರ ಮುಖವು ಯಾವುದೇ ವಿಷಾದವನ್ನು ತೋರಿಸಲಿಲ್ಲ ಅಥವಾ ಯಾವುದೇ ಬೇಸರವನ್ನೂ ಅನುಭವಿಸಲಿಲ್ಲ ಎಂದು ಅಭಿಮಾನಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ನಡುವೆ ಅಂಪೈರ್‌ನ ಶೂಗಳು ಮುಂಬೈ ಇಂಡಿಯನ್ಸ್‌ನ ಶೂಗಳೊಂದಿಗೆ ಹೊಂದಾಣಿಕೆಯಾಗುತ್ತಿರುವ ಚಿತ್ರವೊಂದು ವೈರಲ್ ಆಗುತ್ತಿದೆ. ಎಂಬುದರ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ.
ಫಿಕ್ಸಿಂಗ್ ಆರೋಪ:
ಹೌದು, ಮೇಳಿನ ಎಲ್ಲಾ ಕಾರಣಗಳನ್ನು ಇಟ್ಟಿಕೊಂಡು ಕ್ರಿಕೆಟ್ ಅಭಿಮಾನಿಗಳು ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯ ಫಿಕ್ಸ್ ಆಗಿತ್ತು ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ. ಆದರೆ ಇವೆಲ್ಲ ಬರೀ ಊಹಾಪೋಹಗಳು. ಆಗಾಗ ಪಂದ್ಯದ ವೇಳೆ ಉಭಯ ತಂಡಗಳ ಅಭಿಮಾನಿಗಳು ಭಾವುಕರಾಗಿ ಎದುರಾಳಿಗಳ ವಿರುದ್ಧ ದೂಷಣೆಗೆ ಮುಂದಾಗುತ್ತಿರುವುದು ಸಹಜವಾಗಿದೆ.
ರೋಹಿತ್ ಔಟ್ or ನಾಟೌಟ್:
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರನ್ನು ಔಟ್ ಎಂದು ಅಂಪೈರ್ ತಪ್ಪು ನಿರ್ಧಾರ ನೀಡಿದ್ದಾರೆ ಎಂದು ಪಂದ್ಯದ ಬಳಿಕ ತಿಳಿದುಬಂದಿದೆ. ಸದ್ಯ ರೋಹಿತ್ ಶರ್ಮಾ ವಿಕೆಟ್ ಪಡೆದ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿದ್ದು, ನೆಟ್ಟಿಗರು ಈ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ ಸಂದೀಪ್ ಶರ್ಮಾ ಎಸೆದ ಚೆಂಡು ನೇರವಾಗಿ ಸ್ಟಂಪ್ ತಗುಲಿರಲಿಲ್ಲ. ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರ ಕೈಗವಸು ಟಚ್ ಆದ ಕಾರಣ ಬೇಲ್ಸ್ ಕೆಳಗೆ ಬಿದ್ದವು. ಇದನ್ನು ಸರಿಯಾಗಿ ಗಮನಿಸದ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಹೀಗಾಗಿ ರೋಹಿತ್ ಅಭಿಮಾನಿಗಳು ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ