• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • MI vs PBKS: ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್, ಮಳೆಯಿಂದ ರದ್ದಾದ ಚೆನ್ನೈ-ಲಕ್ನೋ ಪಂದ್ಯ

MI vs PBKS: ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್, ಮಳೆಯಿಂದ ರದ್ದಾದ ಚೆನ್ನೈ-ಲಕ್ನೋ ಪಂದ್ಯ

IPl 2023, MI vs PBKS

IPl 2023, MI vs PBKS

IPl 2023, MI vs PBKS: ಇಂದಿನ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

  • Share this:

ಐಪಿಎಲ್ 2023 ರ ಇಂದಿನ (IPL 2023) 2ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್​ ಕಿಂಗ್ಸ್ (PBKS vs MI) ತಂಡಗಳು ಪಂಜಾಬ್​ ಕ್ರಿಕೆಟ್​ ಅಸೋಶಿಯೇಶನ್​ ಸ್ಟೇಡಿಯಂನಲ್ಲಿ (Punjab Cricket Association Stadium) ಅಂದರೆ ಮೊಹಾಲಿಯಲ್ಲಿ ಸೆಣಸಾಡುತ್ತಿದೆ. ಈಗಾಗಲೇ ಉಭಯ ತಂಡಗಳು ನಿಧಾನವಾಗಿ ಗೆಲುವಿನ ಲಯಕ್ಕೆ ಮರಳಿದ್ದು, ಇಂದಿನ ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.


ಮಳೆಯಿಂದ ಲಕ್ನೋ - ಚೆನ್ನೈ ಪಂದ್ಯ ರದ್ದು:


ಇನ್ನು, ಇಂದಿನ ಡಬಲ್​ ಹೆಡ್ಡರ್ ಪಂದ್ಯದ ಮೊದಲ ಮ್ಯಾಚ್​ ಆದಂತಹ ಚೆನ್ನೈ ಮತ್ತು ಲಕ್ನೋ ಪಂದ್ಯವು ಮಳೆಯಿಂದ ಸಂಪೂರ್ಣ ರದ್ದಾಗಿದ್ದು, ಉಭಯ ತಂಡಗಳಿಗೆ ತಲಾ 1 ಅಂಕವನ್ನು ನೀಡಲಾಗುತ್ತದೆ.. ಪಂದ್ಯ ಸ್ಥಗಿತಗೊಳ್ಳುವ ವೇಳೆಗೆ ಲಕ್ನೋ 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 125 ರನ್ ಗಳಿಸಿತ್ತು.ಮೊಹಾಲಿ ಪಿಚ್ ವರದಿ:


ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್​ ಕಿಂಗ್ಸ್ ಪಂದ್ಯವು ಮೊಹಾಲಿಯಲ್ಲಿ ಅಂದರೆ ಪಂಜಾಬ್​ ತವರು ಮೈದಾನದಲ್ಲಿ ನಡೆಯುತ್ತಿದೆ. ಈ ಋತುವಿನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಇಲ್ಲಿಯವರೆಗೆ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿವೆ. ಮೊಹಾಲಿಯಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ LSG 257 ರನ್ ಗಳಿಸಿತ್ತು. ಜೊತೆಗೆ 56 ರನ್‌ಗಳಿಂದ ಗೆದ್ದಿತು.


ಇದನ್ನೂ ಓದಿ: IPL 2023: ಕೋಟಿ ದಂಡ ಬಿದ್ರೂ ಕೊಹ್ಲಿಗಿಲ್ಲ ನಯಾ ಪೈಸೆ ನಷ್ಟ! ಏನಿದು ಬಿಸಿಸಿಐ ಹೊಸ ಲೆಕ್ಕಾಚಾರ?


ಮೊಹಾಲಿಯಲ್ಲಿ ಇಂದು ರಾತ್ರಿ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ಸಂಪೂರ್ಣ ಆಟವನ್ನುನೋಡಬಹುದು. ತಾಪಮಾನವು 22 ಡಿಗ್ರಿ ಸೆಲ್ಸಿಯಸ್‌ನಿಂದ 26 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಇದರಿಂದಾಗಿ ಪಂದ್ಯಕ್ಕೆ ಯಾವುದೇ ಅಡೆತಡೆಗಳಿಲ್ಲ ಎನ್ನಬಹುದು.


MI vs PBKS ಹೆಡ್ ಟು ಹೆಡ್:


ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್‌ನಲ್ಲಿ ಇದುವರೆಗೆ 30 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎರಡೂ ತಂಡಗಳ ಸಮಬಲದ ಹೋರಾಟ ನಡೆಸಿವೆ. ಎರಡೂ ತಂಡಗಳು ಪರಸ್ಪರ 15-15 ಪಂದ್ಯಗಳನ್ನು ಗೆದ್ದಿವೆ. ಐಪಿಎಲ್ 2023 ರಲ್ಲಿ, ಎರಡೂ ತಂಡಗಳು ಇಲ್ಲಿಯವರೆಗೆ ಒಮ್ಮೆ ಮುಖಾಮುಖಿಯಾಗಿವೆ. ಈ ವೇಳೆ ಪಂಜಾಬ್ 13 ರನ್‌ಗಳಿಂದ ಗೆದ್ದಿತ್ತು.
ಐಪಿಎಲ್ 2023 ಅಂಕಪಟ್ಟಿ:


ಐಪಿಎಲ್ 2023 ರ 44 ಪಂದ್ಯಗಳ ನಂತರ, ಪಂಜಾಬ್ ಕಿಂಗ್ಸ್ ತಂಡವು ತನ್ನ ಒಂಬತ್ತು ಪಂದ್ಯಗಳಲ್ಲಿ 5 ಗೆಲುವು ಮತ್ತು 4 ಸೋಲಿನ ನಂತರ 10 ಅಂಕಗಳೊಂದಿಗೆ (-0.447) ಪಾಯಿಂಟ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಮುಂಬೈ ತಂಡ ತನ್ನ 8 ಪಂದ್ಯಗಳಲ್ಲಿ 4 ಗೆಲುವು ಮತ್ತು 4 ಸೋಲಿನ ನಂತರ 8 ಅಂಕಗಳೊಂದಿಗೆ (-0.502) 7ನೇ ಸ್ಥಾನದಲ್ಲಿದೆ.


ಪಂಜಾಬ್​ - ಮುಂಬೈ ಪ್ಲೇಯಿಂಗ್​ 11:


ಪಂಜಾಬ್ ಕಿಂಗ್ಸ್ ಪ್ಲೇಯಿಂಗ್​ 11: ಪ್ರಭ್‌ಸಿಮ್ರಾನ್ ಸಿಂಗ್, ಶಿಖರ್ ಧವನ್ (ನಾಯಕ), ಮ್ಯಾಥ್ಯೂ ಶಾರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸ್ಯಾಮ್ ಕರ್ರಾನ್, ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ರಿಷಿ ಧವನ್, ರಾಹುಲ್ ಚಾಹರ್ ಮತ್ತು ಅರ್ಷದೀಪ್ ಸಿಂಗ್.


ಮುಂಬೈ ಇಂಡಿಯನ್ಸ್ ಪ್ಲೇಯಿಂಗ್​ 11: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ, ಆಕಾಶ್ ಮಧ್ವಲ್, ಅರ್ಷದ್ ಖಾನ್.

First published: