• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • PBKS vs MI: ಪಂದ್ಯದ ಗತಿಯನ್ನೇ ಬದಲಿಸಿದ ಕೊನೆಯ ಓವರ್​, ಮುಂಬೈ ವಿರುದ್ಧ ಪಂಜಾಬ್​ಗೆ ರೋಚಕ ಜಯ

PBKS vs MI: ಪಂದ್ಯದ ಗತಿಯನ್ನೇ ಬದಲಿಸಿದ ಕೊನೆಯ ಓವರ್​, ಮುಂಬೈ ವಿರುದ್ಧ ಪಂಜಾಬ್​ಗೆ ರೋಚಕ ಜಯ

ಪಂಜಾಬ್​ ಗೆಲುವು

ಪಂಜಾಬ್​ ಗೆಲುವು

MI vs PBKS: ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್​ಗಳಿಗೆ 6 ವಿಕೆಟ್ ನಷ್ಟಕ್ಕೆ 201 ರನ್​ ಗಳಿಸುವ ಮೂಲಕ 13 ರನ್​ಗಳ ರೋಚಕ ಸೋಲನ್ನಪ್ಪಿತು.

  • Share this:

ಐಪಿಎಲ್ 2023ರ ಡಬಲ್ ಹೆಡರ್‌ನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ (MI vs PBKS) ತಂಡಗಳು ಮುಖಾಮುಖಿಯಾದವು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್​ ಶರ್ಮಾ (Rohit Sharma) ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್​ ಮಾಡಿದ ಪಂಜಾಬ್​ ತಂಡ ನಿಗದಿತ 20 ಓವರ್​ಗೆ 8 ವಿಕೆಟ್​ ನಷ್ಟಕ್ಕೆ 214 ರನ್​ ಗಳಿಸಿದರು. ಈ ಬೃಹತ್​ ಟಾರ್ಗೆಟ್​ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್​ಗಳಿಗೆ 6 ವಿಕೆಟ್ ನಷ್ಟಕ್ಕೆ 201 ರನ್​ ಗಳಿಸುವ ಮೂಲಕ 13 ರನ್​ಗಳ ರೋಚಕ ಸೋಲನ್ನಪ್ಪಿತು.


ಮಿಂಚಿದ ಸೂರ್ಯ- ಗ್ರೀನ್​:


ಇನ್ನು, ಪಂಜಾಬ್​ ನೀಡಿದ ಟಾರ್ಗೆಟ್​ ಬೆನ್ನಟ್ಟಿದ ಮುಂಬೈ ತಂಡವು  20 ಓವರ್​ಗಳಿಗೆ 6 ವಿಕೆಟ್ ನಷ್ಟಕ್ಕೆ 201 ರನ್​ ಗಳಿಸಿತು. ಮುಂಬೈ ಇಂಡಿಯನ್ಸ್ ಪರ, ನಾಯಕ ರೋಹಿತ್ ಶರ್ಮಾ 27 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಫೋರ್​ ಮೂಲಕ 44 ರನ್ ಗಳಿಸಿದರು. ಇಶಾನ್ ಕಿಶನ್​ 1 ರನ್ ಗಳಿಸಿದರು. ಆದರೆ ಕ್ಯಾಮರೂನ್​ ಗ್ರೀನ್ 43 ಎಸೆತದಲ್ಲಿ 3 ಸಿಕ್ಸ್ ಮತ್ತು 6 ಫೋರ್​ ಮೂಲಕ 67 ರನ್​ ಮತ್ತು ಸೂರ್ಯಕುಮಾರ್ ಯಾದವ್ 26 ಎಸೆತದಲ್ಲಿ 3 ಸಿಕ್ಸ್ ಮತ್ತು 7 ಫೋರ್​ ಮೂಲಕ 57 ರನ್ ಗಳಿಸಿ ಮಿಂಚಿದರು. ಟೀಮ್​ ಡೇವಿಡ್​ 25 ರನ್, ತಿಲಕ್​ ವರ್ಮಾ 3 ರನ್, ನೆಹಾಲ್​ ವಾದೇರಾ ಶೂನ್ಯ ಮತ್ತು ಜೋಪ್ರಾ ಆರ್ಚರ್​ 1 ರನ್ ಗಳಿಸಿದರು.



ಕರನ್​ ಭರ್ಜರಿ ಬ್ಯಾಟಿಂಗ್​:


ಶಿಖರ್ ಧವನ್ ಅನುಪಸ್ಥಿತಿಯಲ್ಲಿ ಸ್ಯಾಮ್ ಕರನ್ ತಂಡದ ನಾಯಕತ್ವ ಪಡೆದರು. ಆರಂಭಿಕ 4 ವಿಕೆಟ್‌ಗಳ ಪತನದ ನಂತರ, ಪಂಜಾಬ್ ಸ್ಕೋರ್ 160 ತಲುಪಲು ಕಷ್ಟವಾಗಿತ್ತು. ಆದರೆ ಕ್ಯಾಪ್ಟನ್ ಸ್ಯಾಮ್ ಕರನ್ ಮತ್ತು ಹರ್ ಪ್ರೀತ್ ಸಿಂಗ್ ಭಾಟಿಯಾ 92 ರನ್‌ಗಳ ಜತೆಯಾಟವಾಡಿದರು. ಹರ್‌ಪ್ರೀತ್ ಸಿಂಗ್ 41 ರನ್‌ಗಳ ಇನಿಂಗ್ಸ್‌ನಲ್ಲಿ ಔಟಾದರು ಆದರೆ ಸ್ಯಾಮ್ ಕರನ್ ಭರ್ಜರಿ ಆಡಿದರು. ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 55 ರನ್‌ಗಳ ಅಬ್ಬರದ ಇನಿಂಗ್ಸ್‌ ಆಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ನಾಯಕತ್ವದ ಇನ್ನಿಂಗ್ಸ್‌ನಿಂದಾಗಿ ಪಂಜಾಬ್ ಮುಂಬೈ ಎದುರು 214 ರನ್‌ಗಳ ಬೃಹತ್ ಗುರಿ ನೀಡಿದೆ.


ಇದನ್ನೂ ಓದಿ: MI vs PBKS: ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ಸಚಿನ್ ಪುತ್ರ, 3ನೇ ಪಂದ್ಯದಲ್ಲಿಯೇ ದುಬಾರಿಯಾದ ಅರ್ಜುನ್​ ತೆಂಡೂಲ್ಕರ್​!


ಕೆಟ್ಟ ದಾಖಲೆಬರೆದ ಅರ್ಜುನ್​:


ಮುಂಬೈ ಪರ 16 ನೇ ಓವರ್‌ ಎಸೆದ ಅರ್ಜುನ್ ತೆಂಡೂಲ್ಕರ್ ಅವರಿಗೆ ಸ್ಯಾಮ್ ಕುರ್ರಾನ್ ಮತ್ತು ಹರ್‌ಪ್ರೀತ್ ಭಾಟಿಯಾ 31 ರನ್‌ ಚಚ್ಚಿದರು. ಮೊದಲು ಆರಂಭಿಕ ಓವರ್​ಗಳನ್ನು ಮಾಡಿದ ಅರ್ಜುನ್​ ಉತ್ತಮವಾಗಿ ಎಸೆದರೂ ಸಹ ಕೊನೆಯಲ್ಲಿ ದುಬಾರಿಯಾದರು.ಈ ಋತುವಿನಲ್ಲಿ ಅತ್ಯಂತ ದುಬಾರಿ ಬೌಲಿಂಗ್ ಮಾಡಿದ ಅರ್ಜುನ್, ಗುಜರಾತ್ ಟೈಟಾನ್ಸ್ ಯಶ್ ದಯಾಲ್ ಅವರನ್ನು ಸರಿಗಟ್ಟಿದ್ದಾರೆ. ಅಂತಿಮ ಓವರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗೆಲುವಿಗೆ 31 ರನ್‌ಗಳ ಅಗತ್ಯವಿದ್ದಾಗ ಎಡಗೈ ಆಟಗಾರ ದಯಾಲ್​ ಅವರು ರಿಂಕು ಸಿಂಗ್‌ಗೆ ಸತತ ಎಸೆತಗಳಲ್ಲಿ 5 ಸಿಕ್ಸರ್‌ಗಳನ್ನು ಬಿಟ್ಟುಕೊಟ್ಟಿದ್ದರು.




ಅರ್ಷದೀಪ್​ ಬೆಂಕಿ ಬೌಲಿಂಗ್​:

top videos


    ಇನ್ನು, ಕೊನೆಯ ಓವರ್​ನಲ್ಲಿ ಮ್ಯಾಜಿಕ್​ ಮಾಡಿದ ಅರ್ಷದೀಪ್​ ಸಿಂಗ್​ 4 ಓವರ್​ ಬೌಲ್​ ಮಾಡಿದ 29 ರನ್ ನೀಡಿ ಪ್ರಮುಖ 4 ವಿಕೆಟ್​ ಪಡೆದರು. ಉಳಿದಂತೆ ನಾಥನ್​ ಎಲ್ಲಿಸ್​ 1 ವಿಕೆಟ್​, ಲೀವಿಂಗಸ್ಟ್ನ್​ 1 ವಿಕೆಟ್​ ಪಡೆದು ಮಿಂಚಿದರು.

    First published: