• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • LSG vs MI: ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್, ಕ್ರಿಕೆಟ್​ ಲೋಕದ ಚಿತ್ತ ಇಂದಿನ ಪಂದ್ಯದತ್ತ

LSG vs MI: ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್, ಕ್ರಿಕೆಟ್​ ಲೋಕದ ಚಿತ್ತ ಇಂದಿನ ಪಂದ್ಯದತ್ತ

IPL 2023 Mi vs LSG

IPL 2023 Mi vs LSG

MI vs LSG: ಈ ಪಂದ್ಯ ಉಭಯ ತಂಡಗಳಿಗೆ ಮಾತ್ರವಲ್ಲದೇ ಐಪಿಎಲ್​ನ ಕೆಲ ತಂಡಗಳ ಪ್ಲೇಆಫ್​ಗೆ ಹೆಚ್ಚು ಮಹತ್ವದ್ದಾಗಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿದ್ದಾರೆ. 

  • Share this:

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಈಗ ಪ್ರತಿಯೊಂದು ಪಂದ್ಯವು ಬಹಳ ಮಹತ್ವದ್ದಾಗಿದೆ. ಅದರಲ್ಲಿಯೂ ಮುಂಬೈ ಇಂಡಿಯನ್ಸ್ ಟೂರ್ನಿಯ 63ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ( LSG vs MI) ತಂಡವನ್ನು ಎದುರಿಸಲಿದೆ. ರೋಹಿತ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ತಂಡವು ಪ್ಲೇ ಆಫ್‌ಗೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಮತ್ತು ನಾಲ್ಕನೇ ಕ್ರಮಾಂಕದ ತಂಡಗಳ ನಡುವೆ ಈ ಪಂದ್ಯ ನಡೆಯುತ್ತಿದ್ದು, ಈ ಪಂದ್ಯ ಉಭಯ ತಂಡಗಳಿಗೆ ಮಾತ್ರವಲ್ಲದೇ ಐಪಿಎಲ್​ನ ಕೆಲ ತಂಡಗಳ ಪ್ಲೇಆಫ್​ಗೆ ಹೆಚ್ಚು ಮಹತ್ವದ್ದಾಗಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬೌಲಿಂಗ್​ ಆಯ್ಕೆ ಮಾಡಿದ್ದಾರೆ. 


ಐಪಿಎಲ್ 2023 ಅಂಕಪಟ್ಟಿ:


ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯಲ್ಲಿ ಇದುವರೆಗೆ 12 ಪಂದ್ಯಗಳನ್ನು ಆಡಿದ್ದು, 7 ಗೆಲುವು ದಾಖಲಿಸುವ ಮೂಲಕ 14 ಅಂಕ ಗಳಿಸಿದೆ. ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ತಂಡ ಕೂಡ ಕೇವಲ 12 ಪಂದ್ಯಗಳನ್ನು ಆಡಿದೆ, ಆದರೆ ಮಳೆಯಿಂದಾಗಿ 1 ಪಂದ್ಯ 6 ಗೆದ್ದು 13 ಅಂಕಗಳನ್ನು ಗಳಿಸಿದೆ. ಕಳೆದೆರಡು ಪಂದ್ಯಗಳಲ್ಲಿ ಗೆದ್ದಿರುವ ಮುಂಬೈ ಇಲ್ಲಿ ಹ್ಯಾಟ್ರಿಕ್ ಸಾಧನೆ ಮಾಡುವ ಇರಾದೆಯಲ್ಲಿದೆ. ಕಳೆದ ಪಂದ್ಯದಲ್ಲೂ ಲಕ್ನೋ ಗೆಲುವು ಸಾಧಿಸಿದೆ. ಈ ಋತುವಿನಲ್ಲಿ ಉಭಯ ತಂಡಗಳ ನಡುವಿನ ಮೊದಲ ಹಣಾಹಣಿ ಇದಾಗಿದೆ. ಇನ್ನು, ಈ ಪಂದ್ಯ ಉಭಯ ತಂಡಗಳಿಗೆ ಪ್ಲೇಆಫ್​ ಕಾರಣದಿಂದ ಅತ್ಯಂತ ಮಹತ್ವದ್ದಾಗಿದೆ.


ಪಿಚ್ ವರದಿ ಮತ್ತು ಹವಾಮಾನ ಪರಿಸ್ಥಿತಿ:


ಲಕ್ನೋದ ಏಕನಾ ಸ್ಪೋರ್ಟ್ಸ್​ ಎಕಾಡಮಿ ಮೈದಾನದಲ್ಲಿ ಬ್ಯಾಟರ್‌ಗಳಿಗೆ ಅಷ್ಟಾಗಿ ಉತ್ತಮವಾಗಿಲ್ಲ. ರನ್ ಗಳಿಸಲು ಅವರು ತಮ್ಮ ಕಷ್ಟಕರವಾಗಬಹುದು. ಸ್ಪಿನ್ನರ್‌ಗಳಿಗೆ ಈ ಮೈದಾನ ಸಹಾಯಕವಾಗಿದೆ. ಇಲ್ಲಿ ನಡೆದ ಕೊನೆಯ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆದಾಗ್ಯೂ, ಸ್ಪರ್ಧೆಯ ಸಮಯದಲ್ಲಿ ಹವಾಮಾನವು ಸ್ಪಷ್ಟವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ.


ಇದನ್ನೂ ಓದಿ: Rcb Playoff Scenario: ಮುಂಬೈ ಕೈಯಲ್ಲಿದೆ ಆರ್​ಸಿಬಿ ಅಳಿವು ಉಳಿವಿನ ಪ್ರಶ್ನೆ, ರೋಹಿತ್​ ಗೆಲುವಿನ ಮೇಲೆ ನಿಂತಿದೆ ಫಾಫ್​ ಭವಿಷ್ಯ


ಮುಂಬೈ - ಲಕ್ನೋ ತಂಡ ಬದಲಾವಣೆಗಳು:


ಮುಂಬೈ ಇಂಡಿಯನ್ಸ್ ಎಡಗೈ ಸ್ಪಿನ್ನರ್ ಬದಲಿಗೆ ಆಫ್‌ಸ್ಪಿನ್ನರ್ ಅನ್ನು ಕಣಕ್ಕಿಳಿಯಲಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ನವೀನ್-ಉಲ್-ಹಕ್ ಮತ್ತು ದೀಪಕ್ ಹೂಡಾ ತಂಡಕ್ಕೆ ಕಂಬ್ಯಾಕ್​ ಮಾಡಿದ್ದು ಕೈಲ್ ಮೇಯರ್ಸ್ ಮತ್ತು ಅವೇಶ್ ಖಾನ್ ಔಟ್ ಆಗಿದ್ದಾರೆ ಎಂದು LSG ನಾಯಕ ಕೃನಾಲ್ ಪಾಂಡ್ಯ ಹೇಳಿದ್ದಾರೆ.


ಮುಂಬೈ ಕೈಯಲ್ಲಿ ಆರ್​ಸಿಬಿ ಭವಿಷ್ಯ:


ವಿಚಿತ್ರ ಎಂಬಂತೆ ಈ ಬಾರಿ ಐಪಿಎಲ್​ನಲ್ಲಿ ಯಾವುದೇ ತಂಡವೂ ಸಹ ಈವರೆಗೂ ಪ್ಲೇಆಫ್​ ಹಂತಕ್ಕೆ ತಲುಪಿಲ್ಲ. ಗುಜರಾತ್​ ಮಾತ್ರ ಪ್ಲೇಆಫ್​ ಸನಿಹಕ್ಕೆ ಬಂದು ನಿಂತಿದ್ದು, ಒಂದು ಪಂದ್ಯ ಗೆದ್ದರೆ ಪ್ಲೇಆಫ್​ ಪ್ರವೇಶಿಸಲಿದೆ. ಆರ್​ಸಿಬಿ ಪ್ಲೇಆಫ್​ ಪ್ರವೇಶಿಸಲು ಕೇವಲ ತನ್ನ ಪಂದ್ಯಗಳನ್ನು ಗೆದ್ದರೆ ಸಾಕಾಗುವುದಿಲ್ಲ. ಬದಲಿಗೆ ಇತರ ತಂಡಗಳ ಗೆಲುವಿಗಾಗಿ ಹಾಗೂ ಸೋಲಿಗಾಗಿ ಕಾಯಬೇಕಿದೆ. ಅದರಂತೆ ಆರ್​ಸಿಬಿ ಪ್ಲೇಆಫ್​ ಪ್ರವೇಶಕ್ಕೆ ಮುಂಬೈ ಇಂಡಿಯನ್ಸ್ ಸಹಾಯಕವಾಗಲಿದೆ.




ಮುಂಬೈ ತಂಡ ಲಕ್ನೋ ವಿರುದ್ಧ ಗೆಲ್ಲಬೇಕಿದೆ. ಹೀಗ ಗೆದ್ದರೆ ಮುಂಬೈ 16 ಅಂಕ ಹೊಂದುತ್ತದೆ. ಇತ್ತ ಲಕ್ನೋ 13 ಪಂದ್ಯದಿಂದ 13 ಅಂಕ ಪಡೆಯಲಿದೆ. ಇತ್ತ ಆರ್​ಸಿಬಿ ತಂಡ 12 ಅಂಕ ಹೊಂದಿದ್ದು ಮುಂದಿನ 2 ಪಂದ್ಯ ಗೆದ್ದರೆ 16 ಅಂಕವಾಗಲಿದೆ. ಆದರೆ ಲಕ್ನೋ ತಂಡ ಒಂದು ಸೋತರೆ ಇನ್ನೊಂದು ಪಂದ್ಯ ಉಳಿಯುತ್ತದೆ ಆ ಒಂದು ಪಂದ್ಯ ಗೆದ್ದರೆ 15 ಅಂಕವಾಗುತ್ತದೆ. ಆಗ ಆರ್​ಸಿಬಿ 16 ಅಂಕದ ಮೂಲಕ ನೇರವಾಗಿ ಪ್ಲೇಆಫ್​ ಪ್ರವೇಶಿಸಲಿದೆ.


ಲಕ್ನೋ - ಮುಂಬೈ ಪ್ಲೇಯಿಂಗ್​ 11:


ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (WK), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ನೆಹಾಲ್ ವಧೇರಾ, ಟಿಮ್ ಡೇವಿಡ್, ಹೃತಿಕ್ ಶೋಕೀನ್, ಕ್ರಿಸ್ ಜೋರ್ಡಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ಆಕಾಶ್ ಮಧ್ವಲ್


ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (WK), ದೀಪಕ್ ಹೂಡಾ, ಪ್ರೇರಕ್ ಮಂಕಡ್, ಕೃನಾಲ್ ಪಾಂಡ್ಯ (ನಾಯಕ), ಮಾರ್ಕಸ್ ಸ್ಟೋನಿಸ್, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್-ಉಲ್-ಹಕ್, ರವಿ ಬಿಷ್ಣೋಯ್, ಸ್ವಪ್ನಿಲ್ ಸಿಂಗ್, ಮೊಹ್ಸಿನ್ ಖಾನ್

top videos
    First published: