• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Arjun Tendulkar: ಐಪಿಎಲ್‌ಗೆ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ, ಪಂದ್ಯಕ್ಕೂ ಮುನ್ನ ಅಪ್ಪನೊಂದಿಗೆ ಕಾಣಿಸಿಕೊಂಡ ಜೂನಿಯರ್ ಸಚಿನ್

Arjun Tendulkar: ಐಪಿಎಲ್‌ಗೆ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ, ಪಂದ್ಯಕ್ಕೂ ಮುನ್ನ ಅಪ್ಪನೊಂದಿಗೆ ಕಾಣಿಸಿಕೊಂಡ ಜೂನಿಯರ್ ಸಚಿನ್

ಅರ್ಜುನ್ ತೆಂಡೂಲ್ಕರ್

ಅರ್ಜುನ್ ತೆಂಡೂಲ್ಕರ್

MI vs KKR: ಈ ವರ್ಷ ಐಪಿಎಲ್ 2023 ರಲ್ಲಿ, ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್‌ಗೆ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆಯಬಹುದು ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಮೊದಲು ತಿಳಿಸಿದ್ದರು.

  • Share this:

ಐಪಿಎಲ್ 2023ರ ಪಂದ್ಯ ಇಂದು ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (MI vs KKR) ನಡುವೆ ಆರಂಭವಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium) ನಡೆಯುತ್ತಿರುವ ಈ ಪಂದ್ಯದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಪುತ್ರ ಆಲ್ ರೌಂಡರ್ ಅರ್ಜುನ್ ತೆಂಡೂಲ್ಕರ್ (Arjun Tendulkar) ಐಪಿಎಲ್ ಗೆ ಪಾದಾರ್ಪಣೆ ಮಾಡಿದ್ದಾರೆ. ಮುಂಬೈ ಇಂಡಿಯನ್ಸ್ ಸುಮಾರು 2 ವರ್ಷಗಳ ನಂತರ ಅರ್ಜುನ್ ತೆಂಡೂಲ್ಕರ್ ಅವರಿಗೆ ಆಡುವ 11ರಲ್ಲಿ ಅವಕಾಶ ನೀಡಿದೆ. 23ರ ಹರೆಯದ ಆಲ್‌ರೌಂಡರ್ ಅರ್ಜುನ್ ತೆಂಡೂಲ್ಕರ್ ಈ ಪಂದ್ಯದಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.


2 ವರ್ಷಗಳ ಕಾಯುವಿಕೆ ಅಂತ್ಯ:


ಐಪಿಎಲ್ 2021ಗಾಗಿ ನಡೆದ ಹರಾಜಿನಲ್ಲಿ, ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಅವರ ಮೂಲ ಬೆಲೆಯಲ್ಲಿ 20 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಖರೀದಿಸಿತು. ಆದರೆ ಮೊದಲ ವರ್ಷದ ಅಭ್ಯಾಸದ ವೇಳೆ ಕೆಲವು ಗಾಯಗಳಿಂದಾಗಿ ಆ ವರ್ಷ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಕಳೆದ ವರ್ಷ ಐಪಿಎಲ್ 2022ರಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ.ಈ ವರ್ಷ ಐಪಿಎಲ್ 2023 ರಲ್ಲಿ, ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್‌ಗೆ ಪದಾರ್ಪಣೆ ಮಾಡುವ ಅವಕಾಶವನ್ನು ಪಡೆಯಬಹುದು ಎಂದು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಮೊದಲು ತಿಳಿಸಿದ್ದರು. ಅರ್ಜುನ್ ತೆಂಡೂಲ್ಕರ್ ಅಂತಿಮವಾಗಿ ಏಪ್ರಿಲ್ 16 ರಂದು ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು. ಅರ್ಜುನ್ ತೆಂಡೂಲ್ಕರ್ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ 7 ಪ್ರಥಮ ದರ್ಜೆ, 7 ಲಿಸ್ಟ್ ಎ ಮತ್ತು 9 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಒಟ್ಟು 32 ವಿಕೆಟ್ ಪಡೆದು ಒಟ್ಟು 268 ರನ್ ಗಳಿಸಿದ್ದಾರೆ.


ಇದನ್ನೂ ಓದಿ: RCB vs CSK: ನಾಳೆ ಬೆಂಗಳೂರಲ್ಲಿ ಆರ್‌ಸಿಬಿ ಮ್ಯಾಚ್ ನಡೆಯೋದೇ ಡೌಟ್! ಕ್ರಿಕೆಟ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್


2 ದಿನಕ್ಕೆ 3 ಆಟಗಾರರು ಐಪಿಎಲ್​ಗೆ ಪಾದಾರ್ಪಣೆ:


ಅರ್ಜುನ್‌ಗೂ ಮುನ್ನ, ಐಪಿಎಲ್ 2023 ರಲ್ಲಿ, ಈ ಲೀಗ್‌ನಲ್ಲಿ 2 ಬೌಲರ್‌ಗಳು ತಮ್ಮ ಚೊಚ್ಚಲ ಪಂದ್ಯವನ್ನು ಆಡಿದ್ದರು. ಇಬ್ಬರೂ ಬೌಲರ್‌ಗಳು ತಮ್ಮ ಮೊದಲ ಪಂದ್ಯದಲ್ಲಿಯೇ ಅದ್ಭುತವಾಗಿ ಬೌಲಿಂಗ್ ಮಾಡಿದರು. KKR ಪರ, 19 ವರ್ಷದ ಸ್ಪಿನ್ ಬೌಲರ್ ಸುಯಶ್ ಶರ್ಮಾ ಮೊದಲ ಪಂದ್ಯವನ್ನು ಆಡಿದರು ಮತ್ತು ಅವರ ಹೆಸರಿನಲ್ಲಿ 3 ವಿಕೆಟ್ ಪಡೆದರು. ಅದೇ ಸಮಯದಲ್ಲಿ, RCB ವೇಗದ ಬೌಲರ್ ವಿಜಯ್ ಕುಮಾರ್ ವೈಶಾಕ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದರು.
ಕೇವಲ 20 ರನ್ ನೀಡಿ 3 ವಿಕೆಟ್ ಪಡೆದರು. ಈಗ ಮೊದಲ ಪಂದ್ಯದಲ್ಲಿ ಅರ್ಜುನ್ ತೆಂಡೂಲ್ಕರ್ ಅದೃಷ್ಟ ಮಿಂಚುತ್ತಾರೋ ಇಲ್ಲವೋ ಕಾದು ನೋಡಬೇಕಿದೆ. ಪಂದ್ಯಕ್ಕೂ ಮುನ್ನ ಅರ್ಜುನ್ ತೆಂಡೂಲ್ಕರ್ ಅವರು ತಮ್ಮ ತಂದೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಮಾತನಾಡುತ್ತಿದ್ದ ಫೋಟೋಗಳು ಸಖತ್​ ವೈರಲ್​ ಆಗುತ್ತಿದೆ. ಮೊದಲ ಓವರ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಅದ್ಭುತ ಬೌಲಿಂಗ್ ಮಾಡಿದರು. ಅರ್ಜುನ್ ಅವರ ಈ ಓವರ್‌ನಲ್ಲಿ ಕೇವಲ 5 ರನ್‌ಗಳು ಬಂದವು.


ಮುಂಬೈ- ಕೋಲ್ಕತ್ತಾ ಪ್ಲೇಯಿಂಗ್​ 11:


ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ಇಶಾನ್ ಕಿಶನ್ (w), ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (c), ಟಿಮ್ ಡೇವಿಡ್, ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಡುವಾನ್ ಜಾನ್ಸೆನ್, ರಿಲೆ ಮೆರೆಡಿತ್.


ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಜ್(w), ವೆಂಕಟೇಶ್ ಅಯ್ಯರ್, ಎನ್ ಜಗದೀಸನ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ.

First published: