• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • KKR vs MI: ಕೋಲ್ಕತ್ತಾ ಪಂದ್ಯದಿಂದ ರೋಹಿತ್​ ಔಟ್​! ಐಪಿಎಲ್​ಗೆ ಪಾದಾರ್ಪಣೆ ಮಾಡಿದ ಸಚಿನ್​ ಪುತ್ರ

KKR vs MI: ಕೋಲ್ಕತ್ತಾ ಪಂದ್ಯದಿಂದ ರೋಹಿತ್​ ಔಟ್​! ಐಪಿಎಲ್​ಗೆ ಪಾದಾರ್ಪಣೆ ಮಾಡಿದ ಸಚಿನ್​ ಪುತ್ರ

IPL 2023 MI vs KKR

IPL 2023 MI vs KKR

MI vs RCB: ಈ ಪಂದ್ಯವು ಮುಂಬೈ ತಂಡಕ್ಕೆ ಹೆಚ್ಚು ಮಹತ್ವದ್ದಾಗಿದ್ದು, ಈಗಾಗಲೇ ಟಾಸ್​ ಆಗಿದ್ದು, ಮುಂಬೈ ಇಂಡಿಯನ್ಸ್ ಟಾಸ್​ ಗೆದ್ದಿದ್ದು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

  • Share this:

ಐಪಿಎಲ್​ 2023ರ (IPL 2023) 22ನೇ ಪಂದ್ಯದಲ್ಲಿ ಇಂದು ವಾಂಖೇಡೆ ಮೈದಾನದಲ್ಲಿ (Wankhede Stadium) ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್​ ರೈಡರ್ಸ್​ (MI vs KKR) ತಂಡಗಳು ಸೆಣಸಾಡಲಿದೆ. ಈಗಾಗಲೇ ಐಪಿಎಲ್​ನ 16ನೇ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಸತತ ಸೋಲಿನಿಂದ ಕಂಗೆಟ್ಟಿದೆ. ಅಲ್ಲದೇ ಕೋಲ್ಕತ್ತಾ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಈ ಪಂದ್ಯವು ಮುಂಬೈ ತಂಡಕ್ಕೆ ಹೆಚ್ಚು ಮಹತ್ವದ್ದಾಗಿದೆ. ಈಗಾಗಲೇ ಟಾಸ್​ ಆಗಿದ್ದು, ಮುಂಬೈ ಇಂಡಿಯನ್ಸ್ ಟಾಸ್​ ಗೆದ್ದಿದ್ದು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಇಂದಿನ ಪಂದ್ಯದ ಮೂಲಕ ಸಚಿನ್​ ಪುತ್ರ ಅರ್ಜುನ್​ ತೆಂಡೂಲ್ಕರ್​ ಚೊಚ್ಚಲ ಬಾರಿಗೆ ಐಪಿಎಲ್​ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 


ರೋಹಿತ್ ಔಟ್​ ಸೂರ್ಯಕುಮಾರ್ ನಾಯಕ:


ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಇಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ತಂಡದ ನಾಯಕತ್ವ ನೀಡಲಾಗಿದೆ. ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ ಪದಾರ್ಪಣೆಯ ಅವಕಾಶ ಸಿಕ್ಕಿದೆ. ರೋಹಿತ್ ಶರ್ಮಾ ಅವರಿಗೆ ಹೊಟ್ಟೆನೋವು ಇರುವ ಕಾರಣ ಅವರು ಇಂದು ಆಡುತ್ತಿಲ್ಲ. ಹೀಗಾಗಿ ಡುವಾನ್ ಜಾನ್ಸೆನ್ ತಂಡಕ್ಕೆ ಕಂಬ್ಯಾಕ್​ ಮಾಡಿದ್ದಾರೆ. ಆದರೆ ರೋಹಿತ್​ ಶರ್ಮಾ ಅವರನ್ನು ಪ್ರಭಾವಿ ಆಟಗಾರನಾಗಿ ಇರಿಸಲಾಗಿದೆ. ನಂತರ ತಂಡದಲ್ಲಿ ಸ್ಥಾನ ಪಡೆದಿದ್ದರೂ ನಾಯಕನಾಗುವುದಿಲ್ಲ.



MI - KKR ಹೆಡ್​ ಟು ಹೆಡ್​:


ಕೋಲ್ಕತ್ತಾ ನೈಟ್​ ರೈಡರ್ಸ್​ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಒಟ್ಟು 31 ಪಂದ್ಯಗಳನ್ನು ಆಡಲಾಗಿದ್ದು, ಮುಂಬೈ ಇಂಡಿಯನ್ಸ್ 21 ಗೆಲುವುಗಳನ್ನು ಪಡೆದಿದೆ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ 9 ಬಾರಿ ಗೆದ್ದಿದೆ. ಅಂಕಿ ಅಂಶಗಳಲ್ಲಿ ಮುಂಬೈ ತಂಡ ಉತ್ತಮವಾಗಿ ಕಾಣುತ್ತಿದ್ದರೂ ಸಹ ಈ ಸೀಸನ್​ನಲ್ಲಿ ಕೋಲ್ಕತ್ತಾ ತಂಡ ಭರ್ಜರಿ ಫಾರ್ಮ್​ನಲ್ಲಿದೆ. ಹೀಗಾಗಿ ಕೋಲ್ಕತ್ತಾ ಗೆಲುವಿನ ನಿರೀಕ್ಷೆಯಲ್ಲಿದೆ.



ಪಿಚ್ ವರದಿ:


ವಾಂಖೆಡೆಯ ಪಿಚ್ ಬ್ಯಾಟ್ಸ್​ಮನ್​ಗಳಿಗೆ ಹೆಚ್ಚು ಸಹಾಯಕವಾಗಲಿದೆ. ಈ ಮೇಲ್ಮೈಯಲ್ಲಿ ಚೆಂಡುಗಳು ಬ್ಯಾಟ್‌ಗೆ ಚೆನ್ನಾಗಿ ಬರುತ್ತವೆ, ಇದು ಬ್ಯಾಟರ್‌ಗಳಿಗೆ ಕೆಲಸವನ್ನು ಸುಲಭಗೊಳಿಸುತ್ತದೆ. ಹೀಗಾಗಿ ಚೇಸಿಂಗ್ ತಂಡವು ಮೇಲುಗೈ ಸಾಧಿಸುತ್ತದೆ, ಹೀಗಾಗಿ ಗೆಲುವಿನ ದಾಖಲೆ ಹೊಂದಿದೆ. ವೇಗಿಗಳು ಹೊಸ ಚೆಂಡಿನೊಂದಿಗೆ ಹೆಚ್ಚು ಆಕ್ರಮಣಕಾರಿಯಾಗಿರುತ್ತಾರೆ. ಆದರೆ ಸ್ಪಿನ್ನರ್‌ಗಳು ಮಧ್ಯಮ ಓವರ್‌ಗಳಲ್ಲಿ ಸಹಾಯವನ್ನು ಪಡೆಯುತ್ತಾರೆ. ಏಪ್ರಿಲ್ 16 ರಂದು ಬಿಸಿಲಿನ ವಾತಾವರಣವನ್ನು ನಿರೀಕ್ಷಿಸಲಾಗಿದೆ. ಮಳೆಯಿಂದ ಪಂದ್ಯವು ಹಾಳಾಗುವ ಸಾಧ್ಯತೆಯಿಲ್ಲ.


ಇದನ್ನೂ ಓದಿ: IPL 2023: ಆರ್‌ಸಿಬಿ ಬೌಲಿಂಗ್‌ಗೆ 'ವಿಜಯ' ತಂದ ಕನ್ನಡಿಗ! ಯಾರು ಈ ವೈಶಾಕ್?


ಮುಂಬೈ- ಕೋಲ್ಕತ್ತಾ ಪ್ಲೇಯಿಂಗ್​ 11:


ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11: ಇಶಾನ್ ಕಿಶನ್ (w), ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (c), ಟಿಮ್ ಡೇವಿಡ್, ನೆಹಾಲ್ ವಧೇರಾ, ಅರ್ಜುನ್ ತೆಂಡೂಲ್ಕರ್, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಡುವಾನ್ ಜಾನ್ಸೆನ್, ರಿಲೆ ಮೆರೆಡಿತ್.


ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಜ್(w), ವೆಂಕಟೇಶ್ ಅಯ್ಯರ್, ಎನ್ ಜಗದೀಸನ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಲಾಕಿ ಫರ್ಗುಸನ್, ವರುಣ್ ಚಕ್ರವರ್ತಿ.

top videos
    First published: