MI vs KKR: ವ್ಯರ್ಥವಾದ ಅಯ್ಯರ್ ಶತಕ, ಕೊಲ್ಕತ್ತಾ ವಿರುದ್ಧ ಮುಂಬೈಗೆ ಭರ್ಜರಿ ಜಯ

ಮುಂಬೈಗೆ ಭರ್ಜರಿ ಗೆಲುವು

ಮುಂಬೈಗೆ ಭರ್ಜರಿ ಗೆಲುವು

MI vs KKR: ಮುಂಬೈ ತಂಡ ನಿಗದಿತ 17.4 ಓವರ್​ಗೆ 5 ವಿಕೆಟ್​ ನಷ್ಟಕ್ಕೆ 186 ರನ್​ ಗಳಿಸುವ ಮೂಲಕ 5 ವಿಕೆಟ್​ಗಳ ಭರ್ಜರಿ ಜಯ ದಾಖಲಸಿತು.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2023) ನಡೆದ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ (KKR vs MI)ತಂಡಗಳು ಸೆಣಸಾಡಿದವು. ಟಾಸ್​ ಸೋತು ಮೊದಲ ಬ್ಯಾಟ್​ ಮಾಡಿದ ಕೋಲ್ಕತ್ತಾ ತಂಡವು ನಿಗದಿತ 20 ಓವರ್​​ನಲ್ಲಿ 6 ವಿಕೆಟ್​ ನಷ್ಟಕ್ಕೆ 185 ರನ್​ ಗಳಿಸುವ ಮೂಲಕ ಮುಂಬೈ ತಂಡಕ್ಕೆ 186 ರನ್​ ಟಾರ್ಗೆಟ್​ ನೀಡಿತು. ಈ ಮೊತ್ತ ಬೆನ್ನಟ್ಟಿದ ಮುಂಬೈ ತಂಡ ನಿಗದಿತ 17.4 ಓವರ್​ಗೆ 5 ವಿಕೆಟ್​ ನಷ್ಟಕ್ಕೆ 186 ರನ್​ ಗಳಿಸುವ ಮೂಲಕ 5 ವಿಕೆಟ್​ಗಳ ಭರ್ಜರಿ ಜಯ ದಾಖಲಸಿತು.


ಅಬ್ಬರಿಸಿದ ಇಶಾನ್ ಕಿಶನ್:


ಇನ್ನು, ಮುಂಬೈ ತಂಡ ನಿಗದಿತ 17.4 ಓವರ್​ಗೆ 5 ವಿಕೆಟ್​ ನಷ್ಟಕ್ಕೆ 186 ರನ್​ ಗಳಿಸುವ ಮೂಲಕ 5 ವಿಕೆಟ್​ಗಳ ಗೆಲುವು ದಾಖಲಸಿತು. ಬೌಲಿಂಗ್​ ವೇಳೆ ಕಣಕ್ಕಿಳಿಯದ ರೋಹಿತ್ ಶರ್ಮಾ ಬ್ಯಾಟಿಂಗ್​ಗೆ ಆಗಮಿಸಿದರು. ಅವರು 20 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಉಳಿದಂತೆ ಇಶಾನ್ ಕಿಶನ್ 25 ಎಸೆತದಲ್ಲಿ 5 ಸಿಕ್ಸ್ ಮತ್ತು 5 ಪೋರ್​ ಮೂಲಕ 58 ರನ್ ಗಳಿಸಿದರು. ಉಳಿದಂತೆ ಸೂರ್ಯಕುಮಾರ್ ಯಾದವ್ 43 ರನ್, ತಿಲಕ್​ ವರ್ಮಾ 30 ರನ್, ಟೀಂ ಡೇವಿಡ್ 24 ರನ್, ನೇಹಲ್​ ವದೇರಾ 6 ರನ್, ಟೀಮ್ ಡೇವಿಡ್ 24 ರನ್, ಕ್ಯಾಮರೂನ್​ ಗ್ರೀನ್​ 1 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.



ಬ್ಯಾಟಿಂಗ್​ನಲ್ಲಿ ಮಿಂಚಿದ ಅಯ್ಯರ್:


ವೆಂಕಟೇಶ್ ಅಯ್ಯರ್ ಅವರು ಮುಂಬೈ ಇಂಡಿಯನ್ಸ್ ವಿರುದ್ಧ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಭರ್ಜರಿ ಶತಕ ಬಾರಿಸಿದ್ದಾರೆ. ಗಾಯಗೊಂಡ ನಂತರವೂ ದಾಳಿಯನ್ನು ಮುಂದುವರಿಸಿದ ಈ ಬ್ಯಾಟ್ಸ್‌ಮನ್ 49 ಎಸೆತಗಳಲ್ಲಿ 5 ಬೌಂಡರಿ ಮತ್ತು 9 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಮ್ಮ ಶತಕವನ್ನು ಪೂರ್ಣಗೊಳಿಸಿದರು. ಉಳಿದಂತೆ ಜಗದೀಶನ್ ಖಾತೆ ತೆರೆಯದೆ ಕ್ಯಾಮರಾನ್ ಗ್ರೀನ್​ಗೆ ವಿಕೆಟ್​ ಒಪ್ಪಿಸಿದರು. ಇದಾದ ನಂತರ ತಂಡವು ರಹಮಾನುಲ್ಲಾ ಗುರ್ಬಾಜ್ (12), ನಾಯಕ ನಿತೀಶ್ ರಾಣಾ (05) ಮತ್ತು ಶಾರ್ದೂಲ್ ಠಾಕೂರ್ (13) ರೂಪದಲ್ಲಿ ಸಾಲು ಸಾಲು ವಿಕೆಟ್​ಗಳು ಉರುಳಿದವು.


ಇದನ್ನೂ ಓದಿ: Virat Kohli: ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಕಿಂಗ್​ ಕೊಹ್ಲಿ! ಈ ಸಾಧನೆ ಮಾಡಿದ ಮೊದಲ ಆಟಗಾರ ವಿರಾಟ್


ಇನ್ನು, ಐಪಿಎಲ್​ ಆರಂಭದ ವರ್ಷ ಅಂದರೆ 2008ರಲ್ಲಿ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ಪರ ಬ್ರೆಂಡಮ್​ ಮೆಲಕಮ್​ ಚೊಚ್ಚಲ ಐಪಿಎಲ್​ ಶತಕ ಸಿಡಿಸಿದರು. ಆಬಳಿಕ ಬರೋಬ್ಬರಿ 16 ವರ್ಷಗಳವರಡೆಗೂ ಕೋಲ್ಕತ್ತಾ ಪರ ಯಾವೊಬ್ಬ ಬ್ಯಾಟ್ಸ್​ಮನ್​ ಸಹ ಶತಕ ಸಿಡಿಸಿರಲಿಲ್ಲ. ಇದೀಗ ವೆಂಕಟೇಶ್​ ಅಯ್ಯರ್ 5476 ದಿನಗಳ ಬಳಿಕ ಭರ್ಜರಿ ಶತಕ ಸಿಡಿಸಿದ್ದಾರೆ.




ಐಪಿಎಲ್​ಗೆ ಎಂಟ್ರಿಕೊಟ್ಟ ಅರ್ಜುನ್​ ತೆಂಡೂಲ್ಕರ್​:


ಐಪಿಎಲ್ 2021ಗಾಗಿ ನಡೆದ ಹರಾಜಿನಲ್ಲಿ, ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ಅವರ ಮೂಲ ಬೆಲೆಯಲ್ಲಿ 20 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಖರೀದಿಸಿತು. ಆದರೆ ಮೊದಲ ವರ್ಷದ ಅಭ್ಯಾಸದ ವೇಳೆ ಕೆಲವು ಗಾಯಗಳಿಂದಾಗಿ ಆ ವರ್ಷ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ ಕಳೆದ ವರ್ಷ ಐಪಿಎಲ್ 2022ರಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಐಪಿಎಲ್‌ಗೆ ಪಾದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ. ಅರ್ಜುನ್ ತೆಂಡೂಲ್ಕರ್ ತಮ್ಮ ವೃತ್ತಿ ಜೀವನದಲ್ಲಿ ಇದುವರೆಗೆ 7 ಪ್ರಥಮ ದರ್ಜೆ, 7 ಲಿಸ್ಟ್ ಎ ಮತ್ತು 9 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಒಟ್ಟು 32 ವಿಕೆಟ್ ಪಡೆದು ಒಟ್ಟು 268 ರನ್ ಗಳಿಸಿದ್ದಾರೆ.

First published: