• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • LSG vs DC: ಲಕ್ನೋದಲ್ಲೂ ಕನ್ನಡಿಗನದ್ದೇ ಹವಾ! ಕೆಎಲ್‌ ರಾಹುಲ್‌ ಟೀ-ಶರ್ಟ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

LSG vs DC: ಲಕ್ನೋದಲ್ಲೂ ಕನ್ನಡಿಗನದ್ದೇ ಹವಾ! ಕೆಎಲ್‌ ರಾಹುಲ್‌ ಟೀ-ಶರ್ಟ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಕೆಎಲ್​​ ರಾಹುಲ್​

ಕೆಎಲ್​​ ರಾಹುಲ್​

KL rahul: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಇಂದಿನ 2ನೇ ಪಂದ್ಯದಲ್ಲಿ ಲಕ್ನೋ ಮತ್ತು ಡೆಲ್ಲಿ ತಂಡಗಳು ಇಂದು ಸಂಜೆ 7:30ರಂದು ಸೆಣಸಾಡಲಿದೆ. ಈ ಪಂದ್ಯಕ್ಕೂ ಮುನ್ನ ಕೆಎಲ್ ರಾಹುಲ್​ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ.

  • Share this:

ಇಂಡಿಯನ್ ಪ್ರೀಮಿಯರ್ ಲೀಗ್ (IPl 2023) ಇಂದು ಸಂಜೆ 7:30ಕ್ಕೆ ಲಕ್ನೋ ಮತ್ತು ಡೆಲ್ಲಿ ನಡುವೆ ಐಪಿಎಲ್​ನ (IPL 2023) 3ನೇ ಪಂದ್ಯ ನಡೆಯಲಿದೆ. ಈ ನಿಟ್ಟಿನಲ್ಲಿ ಲಕ್ನೋದ ಏಕಾನಾ ಸ್ಟೇಡಿಯಂನ ಹೊರಭಾಗದಲ್ಲಿ ಲಕ್ನೋ ತಂಡದ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದಾರೆ. ಬೆಳಗ್ಗೆ 9 ಗಂಟೆಯಿಂದಲೇ ಜನರು ಕ್ರೀಡಾಂಗಣದ ಹೊರಗೆ ಬಂದು ಜಮಾಯಿಸುತ್ತಿದ್ದಾರೆ. ಇಷ್ಟೇ ಅಲ್ಲ ವಿಶೇಷವೆಂದರೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್ ಕೆಎಲ್ ರಾಹುಲ್ (KL Rahul) ಅವರ ಶೇ.80ರಷ್ಟು ಟೀ ಶರ್ಟ್ ಗಳು ನಿನ್ನೆ ರಾತ್ರಿಯಿಂದ ಮಾರಾಟವಾಗಿವೆ. ಕ್ರೀಡಾಂಗಣದ ಹೊರಗೆ ಭದ್ರತಾ ವ್ಯವಸ್ಥೆಯನ್ನು ಕೂಡ ಬಲಪಡಿಸಲಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ಆಟಗಾರರ ಟೀ ಶರ್ಟ್‌ಗಳನ್ನು ಮಾರಾಟ ಮಾಡುತ್ತಿರುವ ಅಂಗಡಿಕಾರರು ನಿನ್ನೆ ರಾತ್ರಿಯಿಂದ ಟೀ ಶರ್ಟ್ ಮಾರಾಟ ಮಾಡುತ್ತಿದ್ದು, ಇಲ್ಲಿಯವರೆಗೆ 5000ಕ್ಕೂ ಹೆಚ್ಚು ಟೀ ಶರ್ಟ್ ಮಾರಾಟ ಮಾಡಿದ್ದಾರೆ ಎಂದು ಹೇಳಿದ್ದಾರೆ.


ರಾಹುಲ್​ ಟೀ ಶರ್ಟ್​ಗೆ ಹೆಚ್ಚಿದ ಬೇಡಿಕೆ:


ರಾಹುಲ್ ಅವರ ಟೀ ಶರ್ಟ್ ಹೆಚ್ಚು ಮಾರಾಟವಾಗುತ್ತಿದೆ. ಮೊದಲು 200 ರೂಪಾಯಿ ಇದ್ದ ಟೀ ಶರ್ಟ್ ಈಗ 500 ರೂಪಾಯಿಯಾಗಿದೆ. ಇಂದಿನ ಪಂದ್ಯದ ಟಿಕೆಟ್​ಗಳು 2400ಯಿಂದ ಆರಂಭವಾಗಿ ಬರೋಬ್ಬರರಿ 21,600 ರೂ ವರೆಗೂ ಟಿಕೆಟ್​​ ಬೆಲೆಗಳಿವೆ. ಕೆಎಲ್ ರಾಹುಲ್ ಅವರ ಟೀ ಶರ್ಟ್ ಗಳು ಹೆಚ್ಚು ಮಾರಾಟವಾಗುತ್ತಿದೆ. ಅಲ್ಲದೇ ಅದೂ ಸಹ ಅವುಗಳ ಬೆಲೆಯಲ್ಲಿಯೂ ಬಾರೀ ಏರಿಕೆ ಆಗಿದೆ ಎಂದು ಹೇಳಲಾಗಿದೆ.


ಏಕನಾ ಸ್ಟೇಡಿಯಂನ್ನು ಸಿಎಂ ಉದ್ಘಾಟನೆ:


ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಟಲ್ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಂ ಅನ್ನು ಉದ್ಘಾಟನೆ ಮಾಡಲಿದ್ದು, ಸಂಪೂರ್ಣವಾಗಿ ಐಪಿಎಲ್ ಬಣ್ಣದಲ್ಲಿ ಚಿತ್ರಿಸಲಾಗಿದೆ. ಸಂಜೆ 7:30ಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್‌ನ ಮೊದಲ ಪಂದ್ಯ ಇಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆಯಲಿದೆ.


ಇದನ್ನೂ ಓದಿ: IPL 2023: ಟಾಟಾ Tiago EV ಕಾರ್‌ ಮೇಲೆ ಬಾಲ್ ಬಿದ್ರೆ 5 ಲಕ್ಷ! ಕಾರು ಪ್ಲೆಯರ್ಸ್‌ಗೆ, ಹಣ ಸೋಶಿಯಲ್ ಸರ್ವಿಸ್‌ಗೆ!


ಲಕ್ನೋ-ಡೆಲ್ಲಿ ಪಂದ್ಯದ ವಿವರ:


ಐಪಿಎಲ್ 16ನೇ ಆವೃತ್ತಿಯ 3ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಲಕ್ನೋದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಣಸಾಡಲಿದ್ದಾರೆ. ಈ ಪಂದ್ಯವು ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದ್ದು, 7 ಗಂಟೆಗೆ ಟಾಸ್​ ಆಗಲಿದೆ. ಈ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮತ್ತು ಜಿಯೋ ಸಿನಿಮಾದಲ್ಲಿ ಡಿಜಿಟಲ್‌ನಲ್ಲಿ ನೇರ ಪ್ರಸಾರ ಆಗಲಿದೆ. ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೇಲ್ಮೈ ನಿಧಾನವಾಗಿದೆ ಮತ್ತು ಬ್ಯಾಟರ್‌ಗಳು ವಿಕೆಟ್‌ನ ವೇಗಕ್ಕೆ ಹೊಂದಿಕೊಳ್ಳಲು ಮಧ್ಯದಲ್ಲಿ ಸಮಯ ಬೇಕಾಗುತ್ತದೆ.




LSG vs DC ಸಂಭಾವ್ಯ ಪ್ಲೇಯಿಂಗ್ 11:


ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ ಪ್ಲೇಯಿಂಗ್ 11: ಕೆಎಲ್ ರಾಹುಲ್ (ಸಿ), ಕೈಲ್ ಮೇಯರ್ಸ್, ದೀಪಕ್ ಹೂಡಾ, ನಿಕೋಲಸ್ ಪೂರನ್ (ವಾಕ್), ಕೃನಾಲ್ ಪಾಂಡ್ಯ, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಜಯದೇವ್ ಉನದ್ಕತ್, ಮಾರ್ಕ್ ವುಡ್, ಅವೇಶ್ ಖಾನ್, ರವಿ ಬಿಷ್ಣೋಯ್.

top videos


    ದೆಹಲಿ ಕ್ಯಾಪಿಟಲ್ಸ್ ಸಂಭಾವ್ಯ ಪ್ಲೇಯಿಂಗ್ 11: ಡೇವಿಡ್ ವಾರ್ನರ್ (c), ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಲೀ ರುಸ್ಸೌವ್ ಸರ್ಫರಾಜ್ ಖಾನ್ (WK), ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಕಮಲೇಶ್ ನಾಗರಕೋಟಿ, ಕುಲದೀಪ್ ಯಾದವ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್.

    First published: