• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • GT vs LSG: ಟಾಸ್​ ಗೆದ್ದ ಗುಜರಾತ್​ ಟೈಟನ್ಸ್, ಸ್ನೇಹಿತರ ಕಾಳಗದಲ್ಲಿ ಗೆಲ್ಲೋದ್ಯಾರು?

GT vs LSG: ಟಾಸ್​ ಗೆದ್ದ ಗುಜರಾತ್​ ಟೈಟನ್ಸ್, ಸ್ನೇಹಿತರ ಕಾಳಗದಲ್ಲಿ ಗೆಲ್ಲೋದ್ಯಾರು?

ಲಕ್ನೋ - ಗುಜರಾತ್

ಲಕ್ನೋ - ಗುಜರಾತ್

GT vs LSG: ಗುಜರಾತ್​ ತಂಡವೂ ಸಹ ಗೆಲುವಿನ ಲಯಕ್ಕೆ ಮರಳಲು ಸಿದ್ಧವಾಗಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಹಾರ್ದಿಕ್​ ಪಾಂಡ್ಯ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

  • Share this:

ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಹಾರ್ದಿಕ್​ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್‌ (GT vs LSG) ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯವು ಲಕ್ನೋದ ಏಕಾನಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ (Ekana Sports City) ಆರಂಭವಾಗಿದೆ. ಐಪಿಎಲ್ 2023 (IPL 2023) ಪಾಯಿಂಟ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಗುರಿಯನ್ನು ಹೊಂದಿರುವ ಲಕ್ನೋ ತಂಡವು ಗೆಲುವಿನ ನಿರೀಕ್ಷೆಯಲ್ಲಿದೆ. ಇತ್ತ ಗುಜರಾತ್​ ತಂಡವೂ ಸಹ ಗೆಲುವಿನ ಲಯಕ್ಕೆ ಮರಳಲು ಸಿದ್ಧವಾಗಿದೆ. ಈಗಾಗಲೇ ಟಾಸ್​ ಆಗಿದ್ದು, ಟಾಸ್​ ಗೆದ್ದ ಹಾರ್ದಿಕ್​ ಪಾಂಡ್ಯ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.


ಐಪಿಎಲ್ 2023 ಅಂಕಪಟ್ಟಿ:


ಇನ್ನು, ಲಕ್ನೋ ಸೂಪರ್​ ಜೈಂಟ್ಸ್ ಪ್ರಸ್ತುತ IPL 2023 ಪಾಯಿಂಟ್‌ಗಳ ಪಟ್ಟಿಯಲ್ಲಿ 8 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ ಲಕ್ನೋ ತಂಡವು 6 ಪಂದ್ಯದಲ್ಲಿ 4ರಲ್ಲಿ ಗೆದ್ದು 8 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಅದರಂತೆ ಗುಜರಾತ್​ ತಂಡವು 5ರಲ್ಲಿ 3 ಪಂದ್ಯ ಗೆದ್ದು 6 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಉಳಿದಂತೆ ಕ್ರಮವಾಗಿ 1. ರಾಜಸ್ಥಾನ್​ ರಾಯಲ್ಸ್, 2. ಲಕ್ನೋ ಸೂಪರ್​ ಜೈಂಟ್ಸ್, 3. ಚೆನ್ನೈ ಸೂಪರ್ ಕಿಂಗ್ಸ್, 4. ಗುಜರಾತ್ ಟೈಟನ್ಸ್, 5. ರಾಯಲ್ ಚಾಲೆಂಜರ್ಸ್​ ಬೆಂಗಳೂರು, 6. ಮುಂಬೈ ಇಂಡಿಯನ್ಸ್, 7. ಪಂಜಾಬ್​ ಕಿಂಗ್ಸ್, 8. ಕೋಲ್ಕತ್ತಾ ನೈಟ್​ ರೈಡರ್ಸ್​, 9. ಸನ್​ರೈಸನರ್ಸ್ ಹೈದರಾಬಾದ್ ಮತ್ತು ಅಂತಿಮವಾಗಿ 10ನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡವಿದೆ.


ಲಕ್ನೋ - ಗುಜರಾತ್ ಹೆಡ್ ಟು ಹೆಡ್ ರೆಕಾರ್ಡ್:


ಐಪಿಎಲ್‌ನಲ್ಲಿ ಎರಡು ಹೊಸ ಫ್ರಾಂಚೈಸಿಗಳ ನಡುವಿನ ಹೆಡ್ ಟು ಹೆಡ್ ದಾಖಲೆಯು ಸಾಕಷ್ಟು ಏಕಪಕ್ಷೀಯವಾಗಿದೆ. ಕಳೆದ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ಎರಡೂ ಪಂದ್ಯಗಳನ್ನು ಗೆದ್ದಿದ್ದಾರೆ. ಈ ಮೂಲಕ ತಲಾ 2 ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದು ಬೀಗಿದೆ. ಹೀಗಾಗಿ ಇಂದು ಸ್ನೇಹಿತರ ಕಾಳಗದಲ್ಲಿ ಯಾರು ಗೆಲ್ಲುತ್ತಾರೆ ಎಂದು ಕಾದುನೋಡಬೇಕಿದೆ.


ಇದನ್ನೂ ಓದಿ: RCB vs RR: ಆರ್​ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್​! ಈ ಬಾರಿ ಪ್ಲೇಯರ್ಸ್​ನಿಂದಲ್ಲ, ಜೆರ್ಸಿಯಿಂದ ಸಮಸ್ಯೆ


ಉಭಯ ತಂಡಗಳ ಬಲಾಬಲ:


ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವೇಗದ ಬೌಲರ್ ಮಾರ್ಕ್ ವುಡ್ ತಮ್ಮ ವೇಗದ ಮೂಲಕ 5 ವಿಕೆಟ್ ಪಡೆದರು. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸ್ಪಿನ್ ಬೌಲರ್‌ಗಳು ತಮ್ಮ ಕೈಚಳಕ ತೋರಿದರು. ಕೃನಾಲ್ ಪಾಂಡ್ಯ 3 ಹಾಗೂ ಅಮಿತ್ ಮಿಶ್ರಾ 2 ವಿಕೆಟ್ ಪಡೆದರು. ಹೀಗಿರುವಾಗ ಗುಜರಾತ್ ವಿರುದ್ಧ ಲಕ್ನೋ ಬೌಲರ್​ಗಳು ಹೆಚ್ಚು ಆಕ್ರಮಣಕಾರಿಯಾಗಲಿದೆ.




ಗುಜರಾತ್ ಟೈಟಾನ್ಸ್ ಬಳಿ ಇರುವ ಏಕೈಕ ಅನುಭವಿ ಸ್ಪಿನ್ನರ್ ರಶೀದ್ ಖಾನ್. ಆದರೆ, ಈ ಋತುವಿನಲ್ಲಿ ಇದುವರೆಗೆ ರಶೀದ್ ಉತ್ತಮ ಬೌಲಿಂಗ್ ಮಾಡಿದ್ದಾರೆ. ಕಳೆದ ಬಾರಿ ಇವರಿಬ್ಬರು ಭೇಟಿಯಾದಾಗ ರಶೀದ್ ಖಾನ್ ಲಕ್ನೋ ತಂಡದ ಬ್ಯಾಟಿಂಗ್ ವಿರುದ್ಧ ಅಬ್ಬರಿಸಿದ್ದರು. ನಂತರ ಪಂದ್ಯದಲ್ಲಿ ರಶೀದ್ 4 ವಿಕೆಟ್ ಕಬಳಿಸಿದ್ದು, ಲಕ್ನೋ ಸೂಪರ್ ಜೈಂಟ್ಸ್ 82 ರನ್ ಗಳಿಗೆ ಆಲೌಟ್ ಮಾಡಿದ್ದರು. ಐಪಿಎಲ್ 16ನೇ ಸೀಸನ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಕೊನೆಯ 5 ಓವರ್ ಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದೆ. ಕಳೆದ 5 ಓವರ್‌ಗಳಲ್ಲಿ ತಂಡ 19 ವಿಕೆಟ್‌ಗಳನ್ನು ಕಬಳಿಸಿದೆ, ಇದು ಈ ಋತುವಿನ ಗರಿಷ್ಠವಾಗಿದೆ. ಈ ಹಂತದಲ್ಲಿ 9.7 ರ ಅವರ ಎಕಾನಮಿ ಉತ್ತಮವಾಗಿದೆ.


ಗುಜರಾತ್ - ಲಕ್ನೋ ಪ್ಲೇಯಿಂಗ್​ 11:


ಗುಜರಾತ್ ಟೈಟಾನ್ಸ್ ಪ್ಲೇಯಿಂಗ್​ 11: ವೃದ್ಧಿಮಾನ್ ಸಹಾ(ಡಬ್ಲ್ಯೂ), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ(ಸಿ), ವಿಜಯ್ ಶಂಕರ್, ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ.


ಲಕ್ನೋ ಸೂಪರ್​ ಜೈಂಟ್ಸ್ ಪ್ಲೇಯಿಂಗ್​ 11: ಕೆಎಲ್ ರಾಹುಲ್ (ಸಿ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ಡಬ್ಲ್ಯೂ), ಆಯುಷ್ ಬಡೋನಿ, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಅವೇಶ್ ಖಾನ್, ರವಿ ಬಿಷ್ಣೋಯ್.

top videos
    First published: