ಐಪಿಎಲ್ 2023 ರ 30 ನೇ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟಾನ್ಸ್ (LSG vs GT) ನಡುವೆ ನಡೆದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಹಾರ್ದಿಕ್ ಪಾಂಡ್ಯ ಮೊದಲು ಬ್ಯಾಟಿಂಗ್ ಮಾಡಿದರು. ಆದರೆ, ಸ್ಪಿನ್ ಬೌಲರ್‌ಗಳ ನೆರವಿನಿಂದ ಗುಜರಾತ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 128 ರನ್ ಗಳಿಸುವ ಮೂಲಕ 7 ರನ್ಗಳಿಂದ ಸೋಲನ್ನಪ್ಪಿತು. ಕೊನೆಯ ಓವರ್ನಲ್ಲಿ ಪಂದ್ಯದ ಗತಿಯೇ ಬದಲಾಯಿತು.
ಪಂದ್ಯದ ಗತಿಯನ್ನೇ ಬದಲಸಿದ ಕೊನೆ ಓವರ್:
ಒಂದು ಹಂತದಲ್ಲಿ ಪಂದ್ಯವು ಲಕ್ನೋ ತಂಡವೇ ಗೆಲ್ಲುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಕೊನೆಯ 20ನೇ ಓವರ್ ಎಲ್ಲರ ಲೆಕ್ಕಾಚಾರವನ್ನು ತಲೆಕೆಳಗಾಯಿತು. ಕೊನೆಯ 6 ಎಸೆತಗಳಲ್ಲಿ 12 ರನ್ ಗಳಿಸಲಾಗದೇ ಲಕ್ನೋ ತಂಡ 7 ರನ್ಗಳ ಹೀನಾಯ ಸೋಲು ಕಂಡಿದೆ. 20 ಓವರ್ನಲ್ಲಿ ಮೋಹಿತ್ ಶರ್ಮಾ 4 ವಿಕೆಟ್ ಕಬಳಿಸಿದರು. ಇದರಲ್ಲಿ 2 ವಿಕೆಟ್ ರನೌಟ್ನಿಂದ ಆದವು. ಈ ಮೂಲಕ ಗುಜರಾತ್ ಕೊನೆಯ ಓವರ್ನಲ್ಲಿ ರೋಚಕವಾಗಿ ಗೆದ್ದುಕೊಂಡಿತು. ಉಳಿದಂತೆ ರಶೀಧ ಖಾನ್ 1 ವಿಕೆಟ್ ಮತ್ತು ನೂರ್ ಅಹ್ಮದ್ 2 ವಿಕೆಟ್ ಪಡೆದರು.
A monumental turnaround 🤯🤯@gujarat_titans clinch a narrow 7-run victory to get back to winning ways 🙌
Scorecard ▶️ https://t.co/TtAH2CiXVI#TATAIPL | #LSGvGT pic.twitter.com/1H6bd2yVdT
— IndianPremierLeague (@IPL) April 22, 2023
ಇನ್ನು, ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಗುಜರಾತ್ ಪ ರನಾಐಕ ಹಾರ್ದಿಕ್ ಪಾಂಡ್ಯ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಹಾರ್ದಿಕ್ ಪಾಂಡ್ಯ 50 ಎಸೆತಗಳಲ್ಲಿ 66ರನ್ ಗಳಿಸಿದರು. ಇದರೊಂದಿಗೆ ಗುಜರಾತ್ ಟೈಟಾನ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 135 ರನ್ ಗಳಿಸಿತು. ವೃದ್ಧಿಮಾನ್ ಸಹಾ 47 ರನ್, ಶುಭಮನ್ ಗಿಲ್ ಡಕ್ ಔಟ್ ಆದರು. ಆದರೆ ಸಹಾ ಮತ್ತು ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಿದರು. ಎರಡನೇ ವಿಕೆಟ್‌ಗೆ 68 ರನ್ ಸೇರಿಸಿದರು. ಅಭಿನವ್ ಮನೋಹರ್ 3 ರನ್, ವಿಜಯ್ ಶಂಕರ್ 10 ರನ್, ಡೇವಿಡ್ ಮಿಲ್ಲರ್ 6 ರನ್ ಗಳಿಸಿದರು. ಗುಜರಾತ್ ಇನ್ನಿಂಗ್ಸ್ 135 ರನ್ ತಲುಪಲು ಹಾರ್ದಿಕ್ ಪಾಂಡ್ಯ ಪ್ರಮುಖ ಕಾರಣ. ಆರಂಭದಲ್ಲಿ 100ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಮಾಡಿದರು.
ಇದನ್ನೂ ಓದಿ: RCB vs RR: ಆರ್ಸಿಬಿಗೆ ಶುರುವಾಯ್ತು ಹೊಸ ಟೆನ್ಷನ್! ಈ ಬಾರಿ ಪ್ಲೇಯರ್ಸ್ನಿಂದಲ್ಲ, ಜೆರ್ಸಿಯಿಂದ ಸಮಸ್ಯೆ
ಯುವ ಆಟಗಾರ ಪಾದಾರ್ಪಣೆ:
ಹಾರ್ದಿಕ್ ಪಾಂಡ್ಯ ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡುವ ಅವಕಾಶವನ್ನು ನೀಡಿದರು. ಆದರೆ, ಆ ಪಂದ್ಯದಲ್ಲಿ ಪ್ರಭಾವಿ ಆಟಗಾರನಾಗಿ ಕಣಕ್ಕಿಳಿದಿದ್ದರು. ಆ ಪಂದ್ಯದಲ್ಲಿ ನೂರ್ ಕೂಡ 1 ವಿಕೆಟ್ ಪಡೆದರು. ಆದರೆ, ಲಕ್ನೋ ವಿರುದ್ಧದ ಪಂದ್ಯದಲ್ಲಿ ನೂರ್‌ಗೆ ಆರಂಭಿಕ ಪ್ಲೇಯಿಂಗ್-11 ರಲ್ಲಿ ಅವಕಾಶ ನೀಡಲಾಯಿತು. ನೂರ್ ಅಫ್ಘಾನಿಸ್ತಾನ ಪರ ಏಕದಿನ ಹಾಗೂ ಟಿ20ಗೆ ಪದಾರ್ಪಣೆ ಮಾಡಿದ್ದಾರೆ. ಕಳೆದ ವರ್ಷ ಜಿಂಬಾಬ್ವೆ ವಿರುದ್ಧ ಟಿ20 ಪಾದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ನೂರ್ ಅದ್ಭುತ ಬೌಲಿಂಗ್ ಮಾಡಿದರು. ನೂರ್ 10 ರನ್ ನೀಡಿ 4 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಆ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದಿತ್ತು. ಅವರು ನವೆಂಬರ್ 2022 ರಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ODI ಚೊಚ್ಚಲ ಪಂದ್ಯವನ್ನು ಮಾಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ