• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • LSG vs DC, IPL 2023: ಮಾರ್ಕ್​ ವುಡ್​ ದಾಳಿಗೆ ತತ್ತರಿಸಿದ ಡೆಲ್ಲಿ, ಲಕ್ನೋ ತಂಡಕ್ಕೆ ಭರ್ಜರಿ ಗೆಲುವು

LSG vs DC, IPL 2023: ಮಾರ್ಕ್​ ವುಡ್​ ದಾಳಿಗೆ ತತ್ತರಿಸಿದ ಡೆಲ್ಲಿ, ಲಕ್ನೋ ತಂಡಕ್ಕೆ ಭರ್ಜರಿ ಗೆಲುವು

ಲಕ್ನೋ ತಂಡಕ್ಕೆ ಜಯ

ಲಕ್ನೋ ತಂಡಕ್ಕೆ ಜಯ

LSG vs DC, IPL 2023: ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ  9 ವಿಕೆಟ್​ ನಷ್ಟಕ್ಕೆ 143  ರನ್​ ಗಳಿಸುವ ಮೂಲಕ 50 ರನ್​ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಲಕ್ನೋ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

  • Share this:

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಟಾಸ್ ಗೆದ್ದ ದೆಹಲಿ ಕ್ಯಾಪಿಟಲ್ಸ್ (LSG vs DC) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಮೂರನೇ ಪಂದ್ಯ ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Ekana Sports City) ನಡೆಯಿತು. ಗಾಯಗೊಂಡಿರುವ ಪಂತ್ ಬದಲಿಗೆ ಡೇವಿಡ್ ವಾರ್ನರ್ ಡೆಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಡೆಲ್ಲಿಗೆ 194 ರನ್ ಟಾರ್ಗೆಟ್ ನೀಡಿತು. ಈ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ  9 ವಿಕೆಟ್​ ನಷ್ಟಕ್ಕೆ 143  ರನ್​ ಗಳಿಸುವ ಮೂಲಕ 50 ರನ್​ ಗಳಿಂದ ಸೋಲನ್ನಪ್ಪಿತು. ಈ ಮೂಲಕ ಲಕ್ನೋ ತಂಡ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.


ವಾರ್ನರ್​ ಏಕಾಂಗಿ ಹೋರಾಟ:


ಇನ್ನು, ಲಕ್ನೋ ನೀಡಿದ ಟಾರ್ಗೆಟ್​ ಬೆನ್ನಟ್ಟಿದ ಡೆಲ್ಲಿ ತಂಡ 20 ಓವರ್​ಗಳಲ್ಲಿ  9 ವಿಕೆಟ್​ ನಷ್ಟಕ್ಕೆ 143  ರನ್ ಗಳಿಸಿ ಸೋಲನ್ನಪ್ಪಿತು. ಡೆಲ್ಲಿ ಪರ ನಾಯಕ ಡೇವಿಡ್​ ವಾರ್ನರ್​ ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ. ವಾರ್ನರ್​ 48 ಎಸೆತದಲ್ಲಿ 7 ಫೋರ್​ ಮೂಲಕ 56 ರನ್ ಗಳಿಸಿದರು. ಉಳಿದಂತೆ ಪೃಥ್ವಿ ಶಾ 12 ರನ್, ಮಿಚೆಲ್​ ಮಾರ್ಷ್ ಶೂನ್ಯ, ಸರ್ಫರಾಜ್​ ಖಾನ್​ 4 ರನ್, ರಿಲೇ ರೂಸೋ 30 ರನ್, ರೋಮನ್​ ಪೊವೆಲ್ 1 ರನ್, ಅಮನ್ ಹಕೀಮ್​ ಖಾನ್ 4 ರನ್, ಕುಲ್​ದೀಪ್​ ಯಾದವ್ 6 ರನ್ ರನ್ ಮತ್ತು ಅಕ್ಷರ್ ಪಟೇಲ್​ 16 ರನ್​, ಚೇತನ್​ ಸಕಾರಿಯಾ 4 ರನ್​ ಗಳಿಸಿದರು.



ಉತ್ತಮ ಬೌಲಿಂಗ್​ ಮಾಡಿದ ಲಕ್ನೋ:


ಬ್ಯಾಟಿಂಗ್​ನಲ್ಲಿ ಮಿಂಚಿದ್ದ ಲಕ್ನೋ ಸೂಪರ್​ ಜೈಂಟ್ಸ್​ ತಂಡವು ಬಳಿಕ ಬೌಲಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ನೀಡಿತು. ಲಕ್ನೋ ಪರ ಮಾರ್ಕ್​ ವುಡ್​ 4 ಓವರ್​ ಮಾಡಿ ಪ್ರಮುಖ 5  ವಿಕೆಟ್​ ಪಡೆದರು. ಉಳಿದಂತೆ ಆವೇಶ್ ಖಾನ್​ ಮತ್ತು ರವಿ ಬಿಷ್ಣೋಯ್​ ತಲಾ 2 ವಿಕೆಟ್​ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.


ಇದನ್ನೂ ಓದಿ: RCB vs MI Match: ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!


ಲಕ್ನೋ ಪರ ಅಬ್ಬರಿಸಿದ ಕೈಲೆ:


ಕೆಎಲ್ ರಾಹುಲ್ 8 ರನ್, ಕೈಲೆ ಮೇಯರ್ಸ್​ ಭರ್ಜರಿ ಆಟದ ಮೂಲಕ 73 ರನ್, ದೀಪಕ್​ ಹೂಡ 17 ರನ್, ಕೃನಾಲ್ ಪಂಡ್ಯ 15 ರನ್, ಮಾರ್ಕೋಸ್​ ಸ್ಟೋಯ್ನಿಸ್ 12 ರನ್, ಆಯೂಶ್​ ಬದೋನಿ 18 ರನ್, ನಿಕೋಲಸ್​ ಪೂರನ್​ 36 ರನ್​ ಗಳಿಸಿದರು. ಈ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಐಪಿಎಲ್​ನಲ್ಲಿ ಆದರೂ ಕನ್ನಡಿಗ ಕೆಎಲ್ ರಾಹುಲ್ ಅಬ್ಬರಿಸುತ್ತಾರೆ ಎಂಬ ನಿರೀಕ್ಷೆಯಿತ್ತು. ಆದರೆ ರಾಹುಲ್​ ಕೇವಲ 8 ರನ್​ ಗಳಿಸುವ ಮೂಲಕ ಅಭಿಮಾನಿಗಳ ಆಸೆಗೆ ತಣ್ಣೀರೆರೆಚಿದ್ದಾರೆ.


top videos



    ಅದರಂತೆ ಇನ್ನು, ಟಾಸ್​ ಗೆದ್ದು ಬೌಲಿಂಗ್​ ಮಾಡಿದ ಡೆಲ್ಲಿ ತಂಡ ಲಕ್ನೋ ಬ್ಯಾಟರ್​ಗಳ ಎದುರು ಮಂಕಾದರು. ಡೆಲ್ಲಿ ಪರ ಖಲೀಲ್ ಅಹಮದ್ ಮತ್ತು ಚೇತನ್ ಸಕಾರಿಯಾ ತಲಾ 2 ವಿಕೆಟ್​ ಪಡೆದು ಮಿಂಚಿದರು. ಉಳಿದಂತೆ ಅಕ್ಷರ್​ ಪಟೇಲ್​ ಮತ್ತು ಕುಲ್​ದೀಪ್​ ಯಾದವ್​ ತಲಾ 1 ವಿಕೆಟ್​ ಪಡೆದರು.

    First published: