ಐಪಿಎಲ್ 2023 (IPL 2023) ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ರೈಎರ್ಸ್ ಹೈದರಾಬಾದ್ (KKR vs SRH) ತಂಡಗಳು ಈಡನ್ ಗಾರ್ಡನ್ಸ್‌ನಲ್ಲಿ ಸೆಣಸಾಡಿದವು. ಈ ಪಂದ್ಯದಲ್ಲಿ ಕೆಕೆಆರ್ ನಾಯಕ ನಿತೀಶ್ ರಾಣಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದರು. ಹ್ಯಾರಿ ಬ್ರೂಕ್ (Harry Brook) ಭರ್ಜರಿ ಶತಕ ಸಿಡಿಸಿದರು. ಹೀಗಾಗಿ ಹೈದರಾಬಾದ್ ಬೋಬ್ಬರಿ 228 ರನ್ ಗಳಿಸಿದರು. ಈ ಟಾರ್ಗೆಟ್ ಬೆನ್ನಟ್ಟಿದ ಕೋಲ್ಕತ್ತಾ ತಂಡವು ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 204 ರನ್ಗಳಿಸುವ ಮೂಲಕ 23 ರನ್ಗಳಿಂದ ಸೋಲನ್ನಪ್ಪಿತು.
ರಾಣಾ -ರಿಂಕು ಹೋರಾಟ ವ್ಯರ್ಥ:
ಕೆಕೆಆರ್ ಪರವಾಗಿ ನಾಯಕ ನಿತೀಶ್ ರಾಣಾ ತಂಡವನ್ನು ಗೆಲ್ಲಿಸಲು ಪ್ರಾಣಾರ್ಪಣೆ ಮಾಡಿದರು. ಅವರು 41 ಎಸೆತಗಳಲ್ಲಿ ಬಿರುಸಿನ 75 ರನ್ ಗಳಿಸಿದರು. ಆದರೆ ತಂಡವನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಅದೇ ರೀತಿ ರಿಂಕು ಸಿಂಗ್ ಸಹ ಇಂದೂ ಅಬ್ಬರಿಸಿದರು. ಅವರು 31 ಎಸೆತದಲ್ಲಿ 4 ಸಿಕ್ಸ್ ಮತ್ತು 4 ಪೋರ್ ಮೂಲಕ 58 ರನ್ ಗಳಿಸಿದರು. ಉಳದಂತೆ ರಹಮಾನುಲ್ಲಾ ಗುರ್ಬಾಜ್ ಶೂನ್ಯ, ಆಂಡ್ರೆ ರಸೆಲ್ 3 ರನ್, ಶಾರ್ದೂಲ್ ಠಾಕೂರ್ 12 ರನ್, ಸುನಿಲ್ ನರೈನ್ 0 ರನ್, ವೆಂಕಟೇಶ್ ಅಯ್ಯರ್ 10 ರನ್, ಉಮೇಶ್ ಯಾದವ್ 1 ರನ್, ಎನ್. ಜಗದೀಶನ್ 36 ರನ್ ಗಳಿಸಿದರು.
Phew! That was some contest 🔥
We leave Eden Gardens with the W and 2⃣ more points in the bank 😍 pic.twitter.com/bqs9lfU0ac
— SunRisers Hyderabad (@SunRisers) April 14, 2023
ಈಡನ್ ಗಾರ್ಡನ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 228 ರನ್ ಗಳಿಸಿತು. ಹ್ಯಾರಿ ಬ್ರೂಕ್ 55 ಎಸೆತಗಳಲ್ಲಿ 100 ರನ್ ಗಳಿಸಿ ಅಜೇಯ ಶತಕವನ್ನು ಬಾರಿಸಿದರು. ಇದಲ್ಲದೇ ನಾಯಕ ಈಡನ್ ಮಾರ್ಕ್ರಾಮ್ 26 ಎಸೆತಗಳಲ್ಲಿ 50 ರನ್ ಕೊಡುಗೆ ನೀಡಿದರು. ಉಳಿಂದತೆ ಮಾಯಾಂಕ್ ಅರ್ಗವಾಲ್ 9 ರನ್, ಅಭಿಷೇಕ್ ಶರ್ಮಾ 32 ರನ್, ಹೆನ್ರಿಚ್ 16 ರನ್ ಗಳಿಸಿದರು.
ಇದನ್ನೂ ಓದಿ: Ambati Rayudu: ರಾಜ್ಯ ರಾಜಕೀಯಕ್ಕೆ ಟೀಂ ಇಂಡಿಯಾ ಆಟಗಾರ ಎಂಟ್ರಿ! ಯಾವ ಪಕ್ಷಕ್ಕೆ ಸೇರ್ತಾರೆ ಸ್ಟಾರ್ ಪ್ಲೇಯರ್?
ಇನ್ನು, ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಹ್ಯಾರಿ ಬ್ರೂಕ್ ಅವರನ್ನು 13.25 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿತು. ಐಪಿಎಲ್ ಇತಿಹಾಸದಲ್ಲಿ ಹರಾಜಿನಲ್ಲಿ ಹೈದರಾಬಾದ್ ತಂಡ ಖರೀದಿಸಿದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡರು. ಬ್ರೂಕ್ ಅನ್ನು ಖರೀದಿಸುವ ಹಿಂದೆ ಹೈದರಾಬಾದ್‌ನ ಉದ್ದೇಶವು ತನ್ನ ಮಧ್ಯಮ ಕ್ರಮಾಂಕವನ್ನು ಬಲಪಡಿಸುವುದಾಗಿತ್ತು.
ಈ ಋತುವಿನ ಅತಿದೊಡ್ಡ ಸ್ಕೋರ್:
ಹ್ಯಾರಿ ಬ್ರೂಕ್ ಅವರ ಶತಕ ಮತ್ತು ನಾಯಕ ಆಡಮ್ ಮಾರ್ಕ್ರಾಮ್ ಅವರ ಅರ್ಧಶತಕದ ನೆರವಿನಿಂದ ಹೈದರಾಬಾದ್ 228 ರನ್ ಗಳಿಸಿತು. ಕೊನೆಗೆ ಕ್ಲೌಸೆನ್ ಮತ್ತು ಅಭಿಷೇಕ್ ಶರ್ಮಾ ಕೂಡ ಭರ್ಜರಿ ಬ್ಯಾಟಿಂಗ್ ಮಾಡಿದರು. ಎರಡನೇ ಗೆಲುವಿನ ನಿರೀಕ್ಷೆಯಲ್ಲಿ ಹೈದರಾಬಾದ್ ಈ ಋತುವಿನ ಅತಿ ದೊಡ್ಡ ಸ್ಕೋರ್ ಗಳಿಸಿತು. ಈ ಗುರಿಯಿಂದಾಗಿ ಹೈದರಾಬಾದ್ ತಂಡ ತವರು ನೆಲದಲ್ಲಿ ಕೆಕೆಆರ್ ಅನ್ನು 23 ರನ್‌ಗಳ ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು.
ಎಸ್ಆರ್ಎಚ್ ಭರ್ಜರಿ ಬೌಲಿಂಗ್:
ಇನ್ನು, ಹೈದರಾಬಾದ್ ಪರ ಉತ್ತಮ ಬೌಲಿಂಗ್ ಮಾಡಿದ ಪ್ಲೇಯರ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮಾರ್ಕೋ ಜಾನ್ಸಿನ್ 2 ವಿಕೆಟ್ ಮತ್ತು ಮಾಯಾಂಕ್ ಮಾರ್ಕಂಡೆ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್, ಟಿ. ನಟರಾಜನ್ ಮತ್ತು ಉಮ್ರಾನ್ ಮಲಿಕ್ ತಲಾ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ