ನಿತೀಶ್ ರಾಣಾ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಫಾಫ್ ಡುಪ್ಲೆಸಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು ಕೋಲ್ಕತ್ತಾ ತಂಡ ಈ ಪಂದ್ಯವನ್ನು ತನ್ನ ತವರು ಮೈದಾನ ಈಡನ್ ಗಾರ್ಡನ್‌ನಲ್ಲಿ (Eden Gardens) ಮುಖಾಮುಖಿ ಆದವು. ಈ ಪಂದ್ಯದಲ್ಲಿ ಟಾಸ್ ಗೆದ್ದ RCB ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಕೆಕೆಆರ್ ಆರ್‌ಸಿಬಿ ಮುಂದೆ 205 ರನ್‌ಗಳ ಗುರಿ ನೀಡಿತು. ಈ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ತಂಡ 17.4 ಓವರ್ಗಳಲ್ಲಿ ತನ್ನೆಲ್ಲಾ 10 ವಿಕೆಟ್ಗಳನ್ನು ಕಳೆದುಕೊಂಡು 123 ರನ್ ಗಳಿಸುವ ಮೂಲಕ 81 ರನ್ ಗಳಿಂದ ಹೀನಾಯವಾಗಿ ಸೋಲನ್ನಪ್ಪಿತು. ಈ ಮೂಲಕ ಕೆಕೆಆರ್ ತವರಿನಲ್ಲಿ ಚೊಚ್ಚಲ ಗೆಲುವನ್ನು ಕಂಡಿತು. ಇನ್ನು, ಇಂದಿನ ಪಂದ್ಯಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಆಗಮಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಕಿಂಗ್ಗಳು ಒಂದೇ ಕಡೆ ಸೇರಿದ್ದಾರೆ ಎಂದು ಕೊಹ್ಲಿ ಮತ್ತು ಶಾರುಖ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
ಬ್ಯಾಟಿಂಗ್ನಲ್ಲಿ ಎಡವಿದ ಆರ್‌ಸಿಬಿ:
ಕೆಕೆಆರ್ ನೀಡಿದ 205 ರನ್ ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಬೆಂಗಳೂರು ತಂಡದ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ ತಂಡವು ಕೇವಲ 17.4 ಓವರ್ಗಳಲ್ಲಿ ತನ್ನೆಲ್ಲಾ 10 ವಿಕೆಟ್ಗಳನ್ನು ಕಳೆದುಕೊಂಡು 123 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್‌ಸಿಬಿ ಪರ ನಾಯಕ ಫಾಫ್ ಡುಪ್ಲೆಸಿಸ್ 23 ರನ್, ವಿರಾಟ್ ಕೊಹ್ಲಿ 21 ರನ್, ಗ್ಲೆನ್ ಮ್ಯಾಕ್ಸ್‌ವೆಲ್ 19 ರನ್, ಮೈಕಲ್ ಬ್ರೇಸ್‌ವೆಲ್ 19 ರನ್, ಶಹಬಾಜ್ ಅಹ್ಮದ್ 1 ರನ್, ದಿನೇಶ್ ಕಾರ್ತಿಕ್ 9 ರನ್, ಕರಣ್ ಶರ್ಮಾ 1 ರನ್, ಹರ್ಷಲ್ ಪಟೇಲ್ 0 ರನ್, ಅನುಜ್ ರಾವತ್ 1 ರನ್, ಆಕಾಶ್ ದೀಪ್ 17 ರನ್, ಡೇವಿಡ್ ವಿಲ್ಲೆ 20 ರನ್ ಗಳಿಸಿದರು.
A memorable first victory of #TATAIPL 2023 at home.@KKRiders secure a clinical 81-run win over #RCB ⚡️⚡️
Scorecard - https://t.co/J6wVwbsfV2#TATAIPL | #KKRvRCB pic.twitter.com/0u57nKO57G
— IndianPremierLeague (@IPL) April 6, 2023
ತವರಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲರ್ಗಳು ಸಂಘಟಿತ ಬೌಲಿಂಗ್ ದಾಳಿ ನಡೆಸಿದರು. ಕೆಕೆಆರ್ ಪರ ವರುಣ್ ಚರ್ಕವರ್ತಿ 4 ವಿಕೆಟ್, ಸುಯಾಶ್ ಶರ್ಮಾ 3 ವಿಕೆಟ್, ಸುನೀಲ್ ನರೇನ್ 2 ವಿಕೆಟ್ ಮತ್ತು ಶಾರ್ದೂಲ್ ಠಾಕೂರ್ 1 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ: IPL 2023: ಕಿಂಗ್ ಕೊಹ್ಲಿ ದಾಖಲೆ ಮುರಿದ ಧವನ್, ಅನುಭವಿ ಆಟಗಾರನ ರೆಕಾರ್ಡ್ ಬ್ರೇಕ್ ಮಾಡಿದ ಚಹಾಲ್
ಶಾರ್ದೂಲ್- ರಿಂಕು ಅಬ್ಬರದ ಬ್ಯಾಟಿಂಗ್:
ಇನ್ನು, ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಪರ, ರಹಮಾನುಲ್ಲಾ ಗುರ್ಬಾಜ್ 44 ಎಸೆತದಲ್ಲಿ 3 ಸಿಕ್ಸ್ ಮತ್ತು 6 ಫೋರ್ ಮೂಲಕ 57 ರನ್ ಗಳಿಸಿದರು, ವೆಂಕಟೇಶ್ ಅಯ್ಯರ್ 3 ರನ್, ಮನ್‌ದೀಪ್ ಸಿಂಗ್ ಶೂನ್ಯ, ನಿತೀಶ್ ರಾಣಾ 1 ರನ್, ಆಂಡ್ರೆ ರಸೆಲ್ 0 ರನ್, ರಿಂಕು ಸಿಂಗ್ 46 ರನ್, ಸುನಿಲ್ ನರೈನ್ ಶೂನ್ಯ, ಉಮೇಶ್ ಯಾದವ್ 4 ರನ್ ಗಳಿಸಿದರು. ಆದರೆ ಶಾರ್ದೂಲ್ ಠಾಕೂರ್ ಇಂದು ಅಬ್ಬರಿಸಿದ್ದು, 29 ಎಸೆತದಲ್ಲಿ 9 ಪೋರ್ ಮತ್ತು 3 ಸಿಕ್ಸ್ ಮೂಲಕ 68 ರನ್ ಗಳಿಸಿದರು.
ದುಬಾರಿಯಾದ ಆರ್‌ಸಿಬಿ ಬೌಲರ್ಸ್:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಡೇವಿಡ್ ವಿಲ್ಲೆ 2 ವಿಕೆಟ್ ಮತ್ತು ಕರಣ್ ಶರ್ಮಾ 2 ವಿಕೆಟ್ ಪಡೆದರು. ಉಳಿಂದತೆ ಮಿಚೆಲ್ ಬ್ರಾಸ್ವೆಲ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಸಹ 1 ವಿಕೆಟ್ ಪಡೆದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ