ಐಪಿಎಲ್ 2023ರ (IPL 2023) 9ನೇ ಪಂದ್ಯದಲ್ಲಿ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs KKR) ತಂಡಗಳು ಸೆಣಸಾಡಲಿದೆ. ಈ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ (Eden Gardens) ನಡೆಯಲಿದೆ. ಈಗಾಗಲೇ ಉಭಯ ತಂಡಗಳು 16ನೇ ಸೀಸನ್ನಲ್ಲಿ ತಲಾ 1 ಪಂದ್ಯವನ್ನಾಡಿದ್ದು, ಆರ್ಸಿಬಿ ಮೊದಲ ಪಂದ್ಯದಲ್ಲಿ ಗೆದ್ದರೆ, ಕೋಲ್ಕತ್ತಾ ಮೊದಲ ಪಂದ್ಯದಲ್ಲಿ ಸೋಲನ್ನಪ್ಪಿದೆ. ಆದರೆ ಇಂದು ಕೋಲ್ಕತ್ತಾಗೆ ತವರಿನ ಸಪೋರ್ಟ್ ಇರಲಿದ್ದು, ಇಂದಿನ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದೆ. ಅದೇ ರೀತಿ ಆರ್ಸಿಬಿ (RCB) ಸಹ ಗೆಲುವಿನ ಲಯದಲ್ಲಿಯೇ ಕಣಕ್ಕಿಳಿಯಲಿದೆ.
ಪಂದ್ಯದ ವಿವರ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಪಂದ್ಯ ಸಂಜೆ ಭಾರತೀಯ ಕಾಲಮಾನ 7:30ಕ್ಕೆ ಆರಂಭವಾಗಲಿದ್ದು, 7 ಗಂಟೆಗೆ ಟಾಸ್ ಆಗಲಿದೆ. ಈ ಪಂದ್ಯದ ನೇಪ್ರಸಾರವನ್ನು ನೀವಿ ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಡಿಜಿಟಲ್ ಮೂಲಕವಾದರೆ ಜಿಯೋ ಸಿನಿಮಾ ಆ್ಯಪ್ ಮೂಲಕ ಉಚಿತವಾಘಿ ನೋಡಬಹುದು. ಪಂದ್ಯದ ಹೆಚ್ಚಿನ ಮಾಹಿತಿಗಾಗಿ ನ್ಯೂಸ್ 18 ಕನ್ನಡ ವೆಬ್ಸೈಟ್ ಅನುಸರಿಸಿ.
ಪಿಚ್ ವರದಿ:
ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿನ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಸಹಾಯ ಮಾಡುತ್ತದೆ ಮತ್ತು ಸ್ಥಳವು ಕೆಲವು ಹೆಚ್ಚಿನ ಸ್ಕೋರಿಂಗ್ T20 ಪಂದ್ಯಗಳನ್ನು ಸಹ ಕಂಡಿದೆ. ಮೇಲ್ಮೈ ಸವೆಯುತ್ತಿದ್ದಂತೆ ಸ್ಪಿನ್ನರ್‌ಗಳು ಸ್ವಲ್ಪ ಸಹಾಯ ಪಡೆಯಬಹುದು. ಈ ಸ್ಥಳದಲ್ಲಿ ಬೌಂಡರಿಗಳು ಅಷ್ಟು ದೊಡ್ಡದಲ್ಲದ ಕಾರಣ, ದೊಡ್ಡ ಸ್ಕೋರ್ ಮಾಡಬಹುದು. ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಸ್ಕೋರ್ 174 ಆಗಿದೆ. ಈಡನ್ ಗಾರ್ಡನ್ಸ್‌ನ ಪಿಚ್ ಐತಿಹಾಸಿಕವಾಗಿ ಉತ್ತಮ ಬ್ಯಾಟಿಂಗ್ ಟ್ರ್ಯಾಕ್ ಆಗಿದ್ದು, ಈಡನ್ ಗಾರ್ಡನ್ಸ್‌ನಲ್ಲಿ ಒಟ್ಟು 12 ಟಿ20 ಪಂದ್ಯಗಳು ನಡೆದಿದ್ದು, ಅಲ್ಲಿ ಎರಡನೇ ಬ್ಯಾಟಿಂಗ್ ಮಾಡಿದ ತಂಡಗಳು 7 ಬಾರಿ ಗೆದ್ದಿವೆ.
ಇದನ್ನೂ ಓದಿ: IPL 2023: ಕೋಲ್ಕತ್ತಾ ವಿರುದ್ಧ ಪಂದ್ಯಕ್ಕೆ RCB ನಾಲ್ವರು ಆಟಗಾರರು ಅಲಭ್ಯ, ಹೀಗಿರಲಿದೆ ಬೆಂಗಳೂರು ತಂಡದ ಪ್ಲೇಯಿಂಗ್ 11
ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನವು 201/5 ಸ್ಕೋರ್ ಇಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. ಹಿಂದಿನ ದಾಖಲೆಯನ್ನು ಗಮನದಲ್ಲಿಟ್ಟುಕೊಂಡು ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಇನ್ನು, ಹವಾಮಾನ ಮುನ್ಸೂಚನೆ ನೋಡುವುದಾದರೆ, ಇಂದು ಕೋಲ್ಕತ್ತಾದಲ್ಲಿ ಗರಿಷ್ಠ ತಾಪಮಾನವು 37 ° C ಹಾಗೂ ತೇವಾಂಶವು ಶೇ.44ರಷ್ಟಿರುತ್ತದೆ. ಮಳೆ ಬರುವ ಸಾಧ್ಯತೆ ಇಲ್ಲ.
KKR vs RCB ಹೆಡ್ ಟು ಹೆಡ್:
ಇನ್ನು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್ನಲ್ಲಿ ಈವರೆಗೆ ಒಟ್ಟು 30 ಬಾರಿ ಮುಖಾಮುಖಿ ಆಗಿದೆ. ಇದರಲ್ಲಿ ಕೆಕೆಆರ್ ತಂಡವು 16 ಬಾರಿ ಗೆದ್ದಿದ್ದು, RCB ತಂಡವು 14 ಬಾರಿ ಗೆಲುವು ದಾಖಲಿಸಿದೆ. ಅಂಕಿಅಂಶ ನೋಡುವುದಾದರೆ ಕೋಲ್ಕತ್ತಾ ಬಲಿಷ್ಠವಾಗಿದ್ದರೂ ಸಹ ಈ ಬಾರಿ ಆರ್ಸಿಬಿ ತಂಡ ಗೆಲ್ಲುವ ಹಾಟ್ ಫೇವರೇಟ್ ಆಗಿದೆ.
ಬೆಂಗಳೂರು - ಕೋಲ್ಕತ್ತಾ ಸಂಭಾವ್ಯ ಪ್ಲೇಯಿಂಗ್ 11:
ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11: ಫಾಫ್ ಡುಪ್ಲೆಸಿಸ್ (C), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (WK), ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಮೊಹಮ್ಮದ್ ಸಿರಾಜ್.
ಕೊಲ್ಕತ್ತಾ ಸಂಭಾವ್ಯ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಜ್, ಮಂದೀಪ್ ಸಿಂಗ್, ನಿತೀಶ್ ರಾಣಾ (ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ಶಾರ್ದೂಲ್ ಠಾಕೂರ್, ಸುನಿಲ್ ನರೇನ್, ಲಾಕಿ ಫರ್ಗುಸನ್, ಅಂಕುಲ್ ರಾಯ್, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ